ಬೆಂಗಳೂರು: ಪಿಎಂಒ ಅಧಿಕಾರಿಯಂತೆ ಪೋಸ್ ನೀಡಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಯಂತೆ ಪೋಸ್ ನೀಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಯಂತೆ ಪೋಸ್ ನೀಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಅಂಕಿತ್ ಡೇ (22) ಎಂಬ ಯುವಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ನಗರಕ್ಕೆ ಜೂ.16ಕ್ಕೆ ಭೇಟಿ ನೀಡಿದ್ದ ವ್ಯಕ್ತಿ. ಜೂ,20ರವರೆಗೂ ಹೋಟೆಲ್ ವೊಂದರಲ್ಲಿ ತಂಗಿದ್ದಾನೆ. ಈ ವೇಳೆ ಪ್ರಧಾನಮಂತ್ರಿ ಕಚೇರಿಯ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಯುವ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, ವಿಝಿಟಿಂಗ್ ಕಾರ್ಡ್ ಕೂಡ ನೀಡಿ ಹೋಗಿದ್ದಾನೆ. ಆದರೆ, ಹೋಟೆಲ್ ನಲ್ಲಿ ತಂಗಿದ್ದ ವೇಳೆ ವ್ಯಕ್ತಿ ಯಾವುದೇ ರೀತಿಯ ರಿಯಾಯಿತಿಯನ್ನು ಕೇಳಿಲ್ಲ ಎಂದು ತಿಳಿದುಬಂದಿದೆ. 

ಯುವಕ ಕಾರ್ಯನಿರ್ವಹಿಸುತ್ತಿರುವ ಕುರಿತು ಅನುಮಾನಗೊಂಡ ಪೊಲೀಸರು ಈ ಕುರಿತು ಪ್ರಧಾನಮಂತ್ರಿ ಕಚೇರಿ ಸಂಪರ್ಕಿಸಿ ಮಾಹಿತಿ ಕೇಳಿತ್ತು. ಈ ವೇಳೆ ಅಂತಹ ಯಾವುದೇ ವ್ಯಕ್ತಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪಿಎಂಒ ಮಾಹಿತಿ ನೀಡಿತ್ತು. 

ಮಾಹಿತಿ ಆಧಾರದ ಮೇಲೆ ಇದೀಗ ಪೊಲೀಸರು ವ್ಯಕ್ತಿ ವಿರುದ್ಧ ಭಾರತೀಯ ಸಂವಿಧಾನದ ಅಡಿಯಲ್ಲಿ 420 (ಮೋಸ ಮತ್ತು ಅಪ್ರಾಮಾಣಿಕತೆ), 465 (ನಕಲಿ), 468 (ಮೋಸ ಮಾಡುವ ಉದ್ದೇಶ ಹೊಂದಿರುವುದು), 471 (ಸುಳ್ಳು ದಾಖಲೆಗಳನ್ನು ನಿಜವೆಂದು ಹೇಳಿ ತೋರಿಸಿರುವುದು), 417 (ಮೋಸ) ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ವ್ಯಕ್ತಿಯ ಕುರಿತು ಕೆಲ ಸುಳಿವುಗಳು ದೊರೆತಿದ್ದು, ಈ ಸುಳಿವುಗಳನ್ನು ಆಧರಿಸಿ ವ್ಯಕ್ತಿಯನ್ನು ಬಂಧಿಸಲು ಹುಡುಕಾಟ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com