ಪತ್ರಕರ್ತರಿಗೆ ಕೋವಿಡ್ ವಿಮಾ ಪರಿಹಾರ: ಸಿಎಂ ಭರವಸೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಸಂಪಾದಕರ ಗಿಲ್ಡ್ ನ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪತ್ರಕರ್ತರನ್ನು ಕೋವಿಡ್-19 ವಿಮಾ ಪ್ಯಾಕೇಜ್ ನಲ್ಲಿ ಸೇರಿಸುವಂತೆ ಮನವಿ ಮಾಡಿದ್ದಾರೆ.

Published: 04th July 2020 09:29 AM  |   Last Updated: 04th July 2020 09:29 AM   |  A+A-


B S Yedyurappa

ಬಿ ಎಸ್ ಯಡಿಯೂರಪ್ಪ

Posted By : Sumana Upadhyaya
Source : UNI

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಸಂಪಾದಕರ ಗಿಲ್ಡ್ ನ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪತ್ರಕರ್ತರನ್ನು ಕೋವಿಡ್-19 ವಿಮಾ ಪ್ಯಾಕೇಜ್ ನಲ್ಲಿ ಸೇರಿಸುವಂತೆ ಮನವಿ ಮಾಡಿದ್ದಾರೆ.

ಅಸ್ಸಾಂ ಸರ್ಕಾರ ಪತ್ರಕರ್ತರಿಗೆ 50 ಲಕ್ಷ ರೂಪಾಯಿ ಕೋವಿಡ್ ವಿಮೆ ಘೋಷಣೆ ಮಾಡಿರುವುದು ಸೇರಿದಂತೆ ಹರಿಯಾಣ, ದೆಹಲಿ, ಕೇರಳ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಗಳನ್ನು ಸಿಎಂ ಗಮನಕ್ಕೆ ತಂದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ನಿಟ್ಟಿನಲ್ಲಿ ಪತ್ರಕರ್ತರಿಗೂ ಕೋವಿಡ್ ಸಂದರ್ಭದಲ್ಲಿ ವಿಮೆ ಪರಿಹಾರ ಜಾರಿಗೆ ತರುವಂತೆ ಸಿಎಂ ಸೂಚಿಸಿದ್ದಾರೆ.

5 ಲಕ್ಷ ರೂ ಪರಿಹಾರ:ಇತ್ತೀಚೆಗೆ ಮೃತಪಟ್ಟ ವಿಜಯ‌ ಕರ್ನಾಟಕ ಪತ್ರಿಕೆಯ ಪತ್ರಕರ್ತ ಗೌರಿಪುರ ಚಂದ್ರು (ಜಿ.ಪಿ.ಚಂದ್ರಶೇಖರ) ಮತ್ತು ಬೇಲೂರು ಪ್ರಜಾವಾಣಿ ವರದಿಗಾರ ಬಿ.ಎಂ.ರವೀಶ್ ಅವರ ಕುಟುಂಬಕ್ಕೆ ಇದೇ ಸಂದರ್ಭದಲ್ಲಿ ತಲಾ 5 ಲಕ್ಷ ರೂ ಪರಿಹಾರವನ್ನು ಸಿಎಂ ಮಂಜೂರು ಮಾಡಿದ್ದಾರೆ.

Stay up to date on all the latest ರಾಜ್ಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp