ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢ

ಜೂನ್ 25 ಮತ್ತು ಜುಲೈ 3 ರ ನಡುವೆ ಪರೀಕ್ಷೆ ಬರೆದ ಒಟ್ಟು 32 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೂನ್ 25 ಮತ್ತು ಜುಲೈ 3 ರ ನಡುವೆ ಪರೀಕ್ಷೆ ಬರೆದ ಒಟ್ಟು 32 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ.

ಇತರ 80 ವಿದ್ಯಾರ್ಥಿಗಳು ಮನೆ ಸಂಪರ್ಕತಡೆಯಲ್ಲಿದ್ದಾರೆ. ಜುಲೈ 3 ರವರೆಗೆ 7.60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, 14,745 ಮಂದಿ ಗೈರು ಹಾಜರಾಗಿದ್ದಾರೆ.

ಕಂಟೈನ್‌ಮೆಂಟ್ ವಲಯಗಳಲ್ಲಿರುವ 3,911 ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಿಲ್ಲ.ಉಳಿದಂತೆ ಅನಾರೋಗ್ಯದಿಂದಾಗಿ ಒಟ್ಟು 863 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ರಾಜ್ಯಸರ್ಕಾರದ ಪ್ರಕಟಣೆ ತಿಳಿಸಿದೆ.

ಕಳೆದ ವಾರ, ಹಾಸನದ 10 ನೇ ತರಗತಿ ವಿದ್ಯಾರ್ಥಿಗೆ  ಕೊರೋನಾ ವೈರಸ್ ಸೋಂಕು ದೃಢಪಟ್ಟಿತ್ತು. ಕೊರೋನವೈರಸ್ ಪರೀಕ್ಷೆ ಮಾಡಿಸಿಕೊಂಡ ನಂತರವೂ ವಿದ್ಯಾರ್ಥಿ ಜೂನ್ 25 ರಂದು ಪರೀಕ್ಷೆಯನ್ನು ಬರೆದಿದ್ದಾನೆ ಎಂದು ವರದಿಯಾಗಿದೆ. ಪರೀಕ್ಷೆ ಮುಗಿಸಿದ ಸ್ವಲ್ಪ ಸಮಯದ ನಂತರ ಮಾದರಿ ಪರೀಕ್ಷಾ  ವರದಿಯಲ್ಲಿ ಸೋಂಕು ದೃಢಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com