ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಕಾಲಕ್ಕೆ ಚಿಕಿತ್ಸೆ ಸಿಗದೆ, ಪರೀಕ್ಷೆಗೊಳಪಡುವುದಕ್ಕು ಮುನ್ನವೇ ಜೀವ ಬಿಟ್ಟ ಮೂವರು ಅಮಾಯಕರು

ಕೊರೋನಾ ಇರುವ ಹಾಗೂ ಇಲ್ಲದಿರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದ್ದರೂ, ಸಾಕಷ್ಟು ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದು,...

ಬೆಂಗಳೂರು: ಕೊರೋನಾ ಇರುವ ಹಾಗೂ ಇಲ್ಲದಿರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದ್ದರು. ಸಾಕಷ್ಟು ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದು, ಇದರ ಪರಿಣಾಮ ಸಕಾಲಕ್ಕೆ ಚಿಕಿತ್ಸೆ ಸಿಗದೆ, ಕೊರೋನಾ ಪರೀಕ್ಷೆಗೊಳಪಡುವುದಕ್ಕೂ ಮುನ್ನವೇ ಮೂರು ಅಮಾಯಕ ಜೀವಗಳು ಪ್ರಾಣಬಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಸಾಫ್ಟ್'ವೇರ್ ಮ್ಯಾನೇಜರ್ ಆಗಿರುವ 40 ವರ್ಷದ ವ್ಯಕ್ತಿ ಅಸಾದುಲ್ಲಾ ಎಂಬುವವರಿಗೆ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರು ಟ್ಯಾನರಿ ರಸ್ತೆಯಲ್ಲಿರುವ ಖಾಸಗಿ ಕ್ಲಿನಿಕ್'ಗೆ ತೆರಳಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು ತಮ್ಮಲ್ಲಿ ವ್ಯವಸ್ಥೆಗಳಿಲ್ಲ ಹೀಗಾಗಿ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ. 

ಕೂಡಲೇ ಕುಟುಂಬಸ್ಥರು ವಿವೇಕ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಕ್ವೀನ್ಸ್ ರಸ್ತೆಯಲ್ಲಿರುವ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಯೂ ಚಿಕಿತ್ಸೆ ದೊರಕಿಲ್ಲ. ಬಳಿಕ ಶಿವಾಜಿನಗರ ಹಾಗೂ ಕೆ.ಆರ್.ಮಾರುಕಟ್ಟೆಯ ಬಳಿಯಿರುವ ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಈ ವೇಳೆ ಯಾವುದೇ ಆಸ್ಪತ್ರೆಗಳೂ ವ್ಯಕ್ತಿಯನ್ನು ದಾಖಲಿಸಿಕೊಂಡಿಲ್ಲ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಹಾಸಿಗೆಗಳಿಲ್ಲ ಎಂದು ಹೇಳಿದವು. ಸರ್ಕಾರಿ ಆಸ್ಪತ್ರೆಗಳು ಕೊರೋನಾ ವೈದ್ಯಕೀಯ ವರದಿ ಬೇಕೆಂದು ಕೇಳುತ್ತಿದ್ದವು ಎಂದು ಅಸದುಲ್ಲಾ ಅವರ ಪುತ್ರಿ ಝೋಯಾ ಹೇಳಿದ್ದಾಳೆ. 

ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿದ್ದೇವೆ. ತಂದೆ ಪರಿಸ್ಥಿತ ತೀವ್ರವಾಗಿ ಹದಗೆಟ್ಟಿತ್ತು. ನರಳುತ್ತಿರುವುದನ್ನು ನೋಡಿದರೂ ಕೂಡ ಯಾವುದೇ ಆಸ್ಪತ್ರೆ ಅವರನ್ನು ದಾಖಲು ಮಾಡಿಕೊಳ್ಳಲಿಲ್ಲ. ನಗರದಲ್ಲಿರುವ 7 ಆಸ್ಪತ್ರೆಗಳಿಗೆ ಓಡಾಡಿದ್ದೇವೆ. ಈ ವೇಳೆ ಸಾಕಷ್ಟು ಆಸ್ಪತ್ರೆಗಳಿಗೆ ದೂರವಾಣಿ ಕರೆ ಮಾಡಿ ದಾಖಲಾತಿ ಬಗ್ಗೆ ವಿಚಾರಿಸಿದ್ದೆವು. ಯಾವುದೇ ಆಸ್ಪತ್ರೆಗಳೂ ದಾಖಲು ಮಾಡಿಕೊಳ್ಳಲಿಲ್ಲ. ರಾತ್ರಿ 10.30ರ ಸುಮಾರಿಗೆ ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ತೆರಳೆದಿದ್ದೆವು. ಈ ವೇಳೆ ಅಲ್ಲಿನ ಸಿಬ್ಬಂದಿಗಳೂ ಕೂಡ ಚಿಕಿತ್ಸೆ ನೀಡಲು ಮುಂದಕ್ಕೆ ಬರಲಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳು ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಸಕಾಲಕ್ಕೆ ಚಿಕಿತ್ಸೆ ಸಿಗದೆ ನನ್ನ ತಂದೆ ಸಾವನ್ನಪ್ಪಿದರು. ಮನೆಯ ಜವಾಬ್ದಾರಿ ಸಂಪೂರ್ಣವಾಗಿ ತಂದೆಯ ಮೇಲಿತ್ತು ಎಂದು ಝೋಯಾ ಹೇಳಿದ್ದಾರೆ. 

ಇದೇ ರೀತಿ. ಮತ್ತೊಂದು ಘಟನೆ ಕೂಡ ನಗರದಲ್ಲಿ ನಡೆದಿದೆ. 53 ವರ್ಷದ ವ್ಯಕ್ತಿ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನನ್ನ ಸ್ನೇಹಿತ ತಂದೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು. ಉದ್ಯಾನವನಕ್ಕೆ ಪ್ರತೀನಿತ್ಯ ಅವರ ವಾಕಿಂಗ್ ಹೋಗುತ್ತಿದ್ದರು. ಬೆಳಿಗ್ಗೆ 7.45ರ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಆವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದೆವು. ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಬಳಿಕ ಅವರು ಸಾವನ್ನಪ್ಪಿದ್ದರು ಎಂದು ರಘು ಪೂಜಾ ಎಂಬುವವರು ಹೇಳಿದ್ದಾರೆ. 

ಮತ್ತೊಬ್ಬ 43 ವರ್ಷದ ವ್ಯಕ್ತಿ ಎದೆನೋವಿನಿಂದ ಬಳಲಿದ್ದು, ಈ ವೇಳೆ ಕುಟುಂಬಸ್ಥರು ನಗರದಲ್ಲಿರುವ 9 ಆಸ್ಪತ್ರೆಗಳಿಗೆ ಓಡಾಡಿದ್ದರೂ ಯಾವುದೇ ಆಸ್ಪತ್ರೆಗಳೂ ಚಿಕಿತ್ಸೆ ನೀಡಿಲ್ಲ. ಸಕಾಲಕ್ಕೆ ಚಿಕಿತ್ಸೆ ದೊರಯದೆ ವ್ಯಕ್ತಿ ಮೃತಪಟ್ಟಿದ್ದಾರೆ. 

ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆ್ಯಂಬುಲೆನ್ಸ್ ನಲ್ಲಿ ನಾವು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದೆವು. 9 ಆಸ್ಪತ್ರೆಗಳಿಗೆ ತಿರುಗಾಡಿದರೂ ಯಾವುದೇ ಆಸ್ಪತ್ರೆ ಅವರಿಗೆ ಚಿಕಿತ್ಸೆ ನೀಡಲಿಲ್ಲ. ಎಲ್ಲಾ ಐಸಿಯುಗಳು ಸಂಪೂರ್ಣಗೊಂಡಿವೆ ಎಂದು ಹೇಳುತ್ತಿದ್ದರು. ದೂರವಾಣಿ ಕರೆ ಮಾಡಿ ವಿಚಾರಿಸಿದರೂ ಯಾವುದೇ ಆಸ್ಪತ್ರೆಗಳೂ ಕೂಡ ಚಿಕಿತ್ಸೆ ನೀಡಲು ಮುಂದಕ್ಕೆ ಬರಲಿಲ್ಲ. ಬೆಳಗಿನ ಜಾವ 6.30ಕ್ಕೆ ಅವರು ಕೊನೆಯುಸಿರೆಳೆದರು. ನಂತರ ಅವರಿಗೆ ಕೊರೋನಾ ಪರೀಕ್ಷೆ ಮಾಡಲಾಗಿತ್ತು, ಈ ವೇಳೆ ವೈದ್ಯಕೀಯ ವರದಿ ನೆಗಟಿವ್ ಬಂದಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com