ತಡೆಗೋಡೆ ನಿರ್ಮಿಸುತ್ತಿರುವ ಗ್ರಾಮಸ್ಥರು
ತಡೆಗೋಡೆ ನಿರ್ಮಿಸುತ್ತಿರುವ ಗ್ರಾಮಸ್ಥರು

ಮೈಸೂರು: ಹೊರಗಿನ ಸ್ಥಳಗಳಿಗೆ ನೌಕರಿಗೆ ಹೋಗದಂತೆ ನಿವಾಸಿಗಳನ್ನು ತಡೆಯಲು ಗ್ರಾಮಸ್ಥರಿಂದ ತಡೆ ಗೋಡೆ!

ಗ್ರಾಮಗಳು ಸೇರಿದಂತೆ ದೇಶಾದ್ಯಂತ ಕೊರೋನಾ ಪ್ರಕರಣಗಳು ಮಿತಿಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಗ್ರಾಮಸ್ಥರು ತಮ್ಮ ಊರುಗಳಿಂದ ಹೊರ ಪ್ರದೇಶಗಳಿಗೆ ಕೆಲಸಕ್ಕೆ ತೆರಳುವುದನ್ನು ತಪ್ಪಿಸಲು ಗ್ರಾಮದ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ.

ಮೈಸೂರು: ಗ್ರಾಮಗಳು ಸೇರಿದಂತೆ ದೇಶಾದ್ಯಂತ ಕೊರೋನಾ ಪ್ರಕರಣಗಳು ಮಿತಿಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಗ್ರಾಮಸ್ಥರು ತಮ್ಮ ಊರುಗಳಿಂದ ಹೊರ ಪ್ರದೇಶಗಳಿಗೆ ಕೆಲಸಕ್ಕೆ ತೆರಳುವುದನ್ನು ತಪ್ಪಿಸಲು ಗ್ರಾಮದ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ.

ತಮ್ಮ ಗ್ರಾಮಗಳಿಂದ ಬೇರೆ ಪಟ್ಟಣ ಮತ್ತು ನಗರಗಳಿಗೆ ಕೆಲಸಕ್ಕಾಗಿ  ಹೋಗುವುದು ಮತ್ತು ಹೊರಗಿನಿಂದ ಬರುವುದನ್ನು ನಿಷೇಧಿಸಲಾಗಿದೆ. ವೈಕೆ ಮೊಳೆ, ಅಮಚವಾಡಿ, ಬಸವಾಪುರ, ಸಿದ್ದರಾಯನಪುರ ಸೇರಿದಂತೆ ಹಲವು ಗ್ರಾಮಗಳಿಂದ ಕೃಷಿ ಸಂಬಂಧಿತ ಕೆಲಸಗಳಿಗೆ ಹೋಗದಂತೆ ನಿಷೇಧ ಹೇರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಹೊರಹೋದರೆ 5 ಸಾವಿರ ರು ದಂಡ ವಿಧಿಸಲಾಗುತ್ತದೆ.

ಇದರ ಜೊತಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ  ಸೇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿದವರಿಗೂ ದಂಡ ವಿಧಿಸಲಾಗುತ್ತದೆ. ಹಣ್ಣು ತರಕಾರಿಗಳನ್ನು ಅನ್ ಲೋಡ್ ಕೆಲಸಗಳನ್ನು ಮಾಡದಂತೆ ನಿಯಮ ಜಾರಿ ಮಾಡಲಾಗಿದೆ. ಪಕ್ಕದ ಗ್ರಾಮಗಳಿಂದ ಕಾರ್ಮಿಕರು ತಮ್ಮ ಊರುಗಳಿಗೆ ಬಂದು ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. 

ನೂರಾರು ಜನರು ವಾಪಸ್ ತಮ್ಮ ಊರುಗಳಿಗೆ ಮರಳಿದ್ದಾರೆ, ಮತ್ತು ಕೆಲವರು ತಮ್ಮ ಸ್ವಂತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಏಕೆಂದರೆ ಅವರು ಆದೇಶಗಳನ್ನು ಧಿಕ್ಕರಿಸಲು ಬಯಸುವುದಿಲ್ಲ. ಕೊರೋನಾ ಈಗಾಗಲೇ ಹಲವರ ಜೀವನವನ್ನು ಕಿತ್ತು ಕೊಂಡಿದೆ. ಜೊತೆಗೆ ಜೀವಾನಧಾರಕ್ಕೂ ಕುತ್ತು ತಂದಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ, ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಕೊರೋನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಿಂದ ಹೊರ ಹೋಗುವವರ ಮತ್ತು ಒಳಬರುವವರ ಮೇಲೆ ನಿಗಾ ಇಡುವಂತೆ ಯುವಕರಿಗೆ ಜವಾಬ್ದಾರಿ ವಹಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com