ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಒಪಿಡಿ ವೈದ್ಯರಿಗೆ ಪಿಪಿಇ ಕಿಟ್ ಇಲ್ಲ!

ಇದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಹೊರರೋಗ ವಿಭಾಗದ ವೈದ್ಯರು ಪಿಪಿಇ ಕಿಟ್ ಗಳಿಲ್ಲದೆ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ. ರೋಗಿಗಳಿಗೆ ವೈದ್ಯೋಪಚಾರ ಮಾಡುವ ಸಮಯದಲ್ಲಿ ತಮಗೆ ಎಲ್ಲಿ ಕೊರೋನಾ ಸೋಂಕು ತಗುಲುತ್ತದೋ ಎಂಬ ಭಯ ಈ ವೈದ್ಯರನ್ನು ಅಪಾರವಾಗಿ ಕಾಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಹೊರರೋಗ ವಿಭಾಗದ ವೈದ್ಯರು ಪಿಪಿಇ ಕಿಟ್ ಗಳಿಲ್ಲದೆ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ. ರೋಗಿಗಳಿಗೆ ವೈದ್ಯೋಪಚಾರ ಮಾಡುವ ಸಮಯದಲ್ಲಿ ತಮಗೆ ಎಲ್ಲಿ ಕೊರೋನಾ ಸೋಂಕು ತಗುಲುತ್ತದೋ ಎಂಬ ಭಯ ಈ ವೈದ್ಯರನ್ನು ಅಪಾರವಾಗಿ ಕಾಡುತ್ತಿದೆ.

ಈ ಆಸ್ಪತ್ರೆಯ ಕೋವಿಡ್-19 ವಾರ್ಡ್, ತುರ್ತು ಮತ್ತು ಅಪಘಾತ ವಿಭಾಗದ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲಾಗಿದೆ. ಇಲ್ಲಿನ ಮೂರು ಸಿಬ್ಬಂದಿಗೆ ಈಗಾಗಲೇ ಕೊರೋನಾ ತಗಲಿದೆ. ಸಂಸ್ಥೆಗೆ ನಿತ್ಯವೂ ಜ್ವರ, ಕೆಮ್ಮು, ಕಫ ಎಂದು ಹೇಳಿಕೊಂಡು ಸಣ್ಣ ಮಕ್ಕಳನ್ನು ಚಿಕಿತ್ಸೆಗೆ ಕರೆದುಕೊಂಡು ಬರುತ್ತಾರೆ, ಅವರನ್ನು ಒಪಿಡಿ ವಿಭಾಗದಲ್ಲಿ ತಪಾಸಣೆ ಮಾಡಿ ನಂತರ ಸಂಶಯವಿರುವವರನ್ನು ಕೋವಿಡ್-19 ಶಂಕಿತರ ವಾರ್ಡ್ ಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಕೊರೋನಾ ಸೋಂಕು ದೃಢಪಟ್ಟರೆ ನಿರ್ದಿಷ್ಟ ಕೋವಿಡ್-19 ವಾರ್ಡ್ ಗೆ ಕಳುಹಿಸಲಾಗುತ್ತದೆ.

ನಾವು ಯಾರಿಗೂ ಇಲ್ಲಿ ಪ್ರವೇಶ ನಿರಾಕರಿಸುವುದಿಲ್ಲ, ಆದರೆ ನಮ್ಮ ಆರೋಗ್ಯ ರಕ್ಷಣೆ ಕೂಡ ನೋಡಿಕೊಳ್ಳಬೇಕಲ್ಲವೆ ಎಂದು ವೈದ್ಯರೊಬ್ಬರು ಹೇಳುತ್ತಾರೆ. ಇಲ್ಲಿನ ಒಪಿಡಿ ವಾರ್ಡ್ ನ ವೈದ್ಯರು, ದಾದಿಯರು, ಗ್ರೂಪ್ ಡಿ ನೌಕರರು ಎನ್ 95 ಮಾಸ್ಕ್ ಗಳನ್ನು ಮಾತ್ರ ಧರಿಸುತ್ತಾರೆ. ಸರ್ಕಾರದ ಕ್ವಾರಂಟೈನ್ ನಿಯಮ ಬದಲಾಗಿರುವುದರಿಂದ ಸ್ವ-ಪ್ರತ್ಯೇಕತೆಯನ್ನು ಅನುಸರಿಸದೆಯೇ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಹಿಂದೆ ಇದ್ದ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಕಡಿತಗೊಳಿಸಲಾಗಿದೆ ಎಂದು ಅವರು ಹೇಳಿದರು.

ಪಿಪಿಇ ಕಿಟ್ ಗಳನ್ನು ಧರಿಸುವ ನೆಗೆಟಿವ್ ವರದಿ ಬಂದಿರುವ ವೈದ್ಯರುಗಳು ಕ್ವಾರಂಟೈನ್ ಗೆ ಒಳಗಾಗುವ ಅಗತ್ಯವಿಲ್ಲ ಎಂದು ಐಸಿಎಂಆರ್ ನ ಹೊಸ ಮಾರ್ಗಸೂಚಿ ಹೇಳುತ್ತದೆ.  ಆದರೆ ಪಿಪಿಇ ಕಿಟ್ ಗಳಿಲ್ಲದಿರುವ ವೈದ್ಯರ ಕತೆಯೇನು? ಕ್ವಾರಂಟೈನ್ ರೂಂಗಳಿಲ್ಲದಿರುವಾಗ ವೈದ್ಯರಲ್ಲಿ ಹೋಂ ಕ್ವಾರಂಟೈನ್ ಗೆ ಒಳಪಡಲು ಹೇಳುತ್ತಾರೆ. ಇದು ಅವರ ಕುಟುಂಬದವರಿಗೂ ಅಪಾಯ ಎನ್ನುತ್ತಾರೆ ವೈದ್ಯರು.

ಆದರೆ ಪಿಪಿಇ ಕಿಟ್ ಗಳ ಪೂರೈಕೆಗೆ ಕೊರತೆಯೇನೂ ಇಲ್ಲ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಡಾ ಸಂಜಯ್ ಕೆ ಎಸ್. ಕೋವಿಡ್-19 ವಾರ್ಡ್ ಗಳಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್ ಗಳನ್ನು ನೀಡಲಾಗುತ್ತದೆ. ಒಪಿಡಿಯಲ್ಲಿ ಕೆಲಸ ಮಾಡುವವರಿಗೆ ಕಿಟ್ ಗಳ ಅಗತ್ಯವಿಲ್ಲ.ಸರ್ಜಿಕಲ್ ಗ್ಲೌಸ್, ಮಾಸ್ಕ್ ಧರಿಸಿದರೆ ಸಾಕು, ತುರ್ತು ಮತ್ತು ಅಪಘಾತ ವಿಭಾಗದ ವೈದ್ಯರು ಪಿಪಿಇ ಕಿಟ್ ಧರಿಸುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com