ರಾಣಿಬೆನ್ನೂರು: ಕೋವಿಡ್ ಶಂಕಿತನ ಶವ ಬಸ್ ನಿಲ್ದಾಣದಲ್ಲಿ ಪತ್ತೆ, ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಡಿಎಚ್‌ಒ 

ಕೊರೋನಾದಿಂದ ಸಾವನ್ನಪ್ಪಿದ್ದನೆಂದು ಶಂಕಿಸಲಾದ  ವ್ಯಕ್ತಿಯ ಶವವನ್ನು ಆಸ್ಪತ್ರೆ ಸಮೀಪದ ಬಸ್ ನಿಲ್ದಾಣದಲ್ಲೇ  ಇರಿಸಿ ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ ಮೆರೆದ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ನಡೆದಿದೆ.
ರಾಣಿಬೆನ್ನೂರು: ಕೋವಿಡ್ ಶಂಕಿತನ ಶವ ಬಸ್ ನಿಲ್ದಾಣದಲ್ಲಿ ಪತ್ತೆ, ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಡಿಎಚ್‌ಒ 

ಹಾವೇರಿ: ಕೊರೋನಾದಿಂದ ಸಾವನ್ನಪ್ಪಿದ್ದನೆಂದು ಶಂಕಿಸಲಾದ  ವ್ಯಕ್ತಿಯ ಶವವನ್ನು ಆಸ್ಪತ್ರೆ ಸಮೀಪದ ಬಸ್ ನಿಲ್ದಾಣದಲ್ಲೇ  ಇರಿಸಿ ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ ಮೆರೆದ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ನಡೆದಿದೆ.

ರಾನೀಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟ ಶಂಕಿತನ ಶವವನ್ನು  ತಿಳಿ ನೀಲಿ ಹಾಳೆಯಲ್ಲಿ ಮುಚ್ಚಿ ಹಾರವೊಂದನ್ನು ಹಾಕಿ ಬಸ್ ನಿಲ್ದಾಣದಲ್ಲಿರಿಸಿ ಆಸ್ಪತ್ರೆ ಸಿಬ್ಬಂದಿಗಳು ಅಜಾಗರೂಕತೆ ಮೆರೆದಿದ್ದಾರೆ. 

ಪ್ರಾಥಮಿಕ ವರದಿಯ ಪ್ರಕಾರ, ಶಂಕಿತ ಕೋವಿಡ್ ರೋಗಿಯ ಮುಚ್ಚಿದ ದೇಹವನ್ನು ಸಾರ್ವಜನಿಕ ಸ್ಥಳದಲ್ಲಿ ಇಡಲಾಗಿದೆ ಎಂದು  ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜೇಂದ್ರ ತೊಡ್ಡಮಣಿ ದೃಡೀಕರಿಸಿದ್ದಾರೆ. ಶಂಕಿತನ ಮೃತದೇಹವನ್ನು ಹೀಗೆ ಬಿಟ್ಟು ಹೋಗುವುದು ಗಂಭೀರ ಅಪರಾಧ ಎಂದು ಅವರು ಒತ್ತಿ ಹೇಳಿದ್ದಾರೆ.

ವ್ಯಕ್ತಿಯ ಕೊರೋನಾ ವರದಿ ಇನ್ನೂ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ,"ನಾನು ವಿವರವಾದ ವರದಿಯನ್ನು ಸ್ವೀಕರಿಸಿದ ನಂತರ ನಾನು ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುತ್ತೇನೆ. ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಡಿಎಚ್‌ಒ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com