ಕೋವಿಡ್-19: ಶವ ಸಂಸ್ಕಾರ ಕಾರ್ಯವಿಧಾನದ ಬಗ್ಗೆ ಮಾರ್ಗಸೂಚಿ ಬಿಡುಗಡೆ

ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ ಅಥವಾ ಶಂಕಿತ ಪ್ರಕರಣಗಳಲ್ಲಿ ವ್ಯಕ್ತಿಯು ಮೃತಪಟ್ಟಲ್ಲಿ ಶವ ಸಂಸ್ಕಾರ/ಸಮಾಧಿ ಕಾರ್ಯ ನಡೆಸುವ ಬಗ್ಗೆ ಕೊಡಗು ಜಿಲ್ಲಾಡಳಿತವು ವಿವಿಧ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ ಕಾರ್ಯ ವಿಧಾನ(SOP) ರೂಪಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ ಅಥವಾ ಶಂಕಿತ ಪ್ರಕರಣಗಳಲ್ಲಿ ವ್ಯಕ್ತಿಯು ಮೃತಪಟ್ಟಲ್ಲಿ ಶವ ಸಂಸ್ಕಾರ/ಸಮಾಧಿ ಕಾರ್ಯ ನಡೆಸುವ ಬಗ್ಗೆ ಕೊಡಗು ಜಿಲ್ಲಾಡಳಿತವು ವಿವಿಧ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿ ಕಾರ್ಯ ವಿಧಾನ(SOP) ರೂಪಿಸಿದೆ.

ಮರಣ ಹೊಂದಿದ ಬಗ್ಗೆ ಕೋವಿಡ್ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರು ದೃಢೀಕರಣ ನೀಡುತ್ತಾರೆ. ಪ್ಲೊರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರು ಶವ ಸಂಸ್ಕಾರ/ಸಮಾಧಿ ವೇಳೆ ಪಾಲಿಸಬೇಕಾದ ಸುರಕ್ಷಿತ ಮತ್ತು ವೈಜ್ಞಾನಿಕ ಕ್ರಮಗಳ ಬಗ್ಗೆ ಮೃತರ ಸಂಬಂಧಿಕರಿಗೆ ವಿವರಿಸುತ್ತಾರೆ.

ಅಗತ್ಯವಿದ್ದಲ್ಲಿ ಮನಶಾಸ್ತ್ರ ವಿಭಾಗದ ಮುಖ್ಯಸ್ಥರು ಸಂಬಂಧಿಕರೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಮೃತ ಶರೀರಕ್ಕೆ ಸೋಂಕು ನಿವಾರಕ ದ್ರಾವಣವನ್ನು ಲೇಪಿಸಿ, ಮುಖ ಕಾಣುವಂತೆ ಪ್ಲಾಸ್ಟಿಕ್ ಹೊದಿಕೆಯಿಂದ ಶರೀರವನ್ನು ಮುಚ್ಚಲಾಗುತ್ತದೆ. ನಂತರ ಐಸಿಯುನಿಂದ ಕೋವಿಡ್ ಶವಾಗಾರಕ್ಕೆ ಸಾಗಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com