ಎಂಎಲ್‌ಸಿ ಪ್ರಾಣೇಶ್ ಗೆ ಕೋವಿಡ್-19 ದೃಢ: ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡ ಶಾಸಕ

ಮೇಲ್ಮನೆ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಹಾಗೂ ಅವರ ಪತ್ನಿಗೆ ಕೊರೋನಾ ಸೋಂಕು ತಗಲಿರುವುದಾಗಿ ಖುದ್ದು ಪ್ರಾಣೇಶ್ ತಮ್ಮ ಫೇಸ್‌ ಬುಕ್ ಅಕೌಂಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಎಂಎಲ್ ಸಿ ಪ್ರಾಣೇಶ್
ಎಂಎಲ್ ಸಿ ಪ್ರಾಣೇಶ್

ಬೆಂಗಳೂರು: ಮೇಲ್ಮನೆ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಹಾಗೂ ಅವರ ಪತ್ನಿಗೆ ಕೊರೋನಾ ಸೋಂಕು ತಗಲಿರುವುದಾಗಿ ಖುದ್ದು ಪ್ರಾಣೇಶ್ ತಮ್ಮ ಫೇಸ್‌ ಬುಕ್ ಅಕೌಂಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

'ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿಯು ನಿನ್ನೆ ಸಂಜೆ ಬಂದಿದ್ದು, ನನಗೆ ಹಾಗೂ ನನ್ನ ಪತ್ನಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ. ಈಗಾಗಲೇ ನಾವು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದೇವೆ. ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ, ಶೀಘ್ರದಲ್ಲೆ ನಾವು ಗುಣಮುಖರಾಗಿ ಬರುತ್ತೇವೆ. ಈ ವಿಷಯ ತಿಳಿದು ಎಲ್ಲರೂ ನನ್ನನ್ನು ಸಂಪರ್ಕ ಮಾಡಲು ಪ್ರಯತ್ನಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವ ಕಾರಣ ನಿಮ್ಮ ಕರೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಕ್ಷಮೆ ಇರಲಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದ ಹಾರೈಕೆಗೆ ಆಭಾರಿಯಾಗಿದ್ದೇನೆ. ನಾನು ನನ್ನ ಕುಟುಂಬ ಸದಾ ನಿಮ್ಮಗೆಲ್ಲ ಚಿರಋುಣಿಯಾಗಿರುತ್ತೇವೆ' ಎಂದು ಪ್ರಾಣೇಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com