ಸಂಡೇ ಲಾಕ್ ಡೌನ್: ಕಾವೇರಿಯಲ್ಲೇ ದಿನ ಕಳೆದ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಈ ಕೋವಿಡ್​​-19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಪುನಃ ಸರ್ಕಾರ ಸಂಡೇ ಲಾಕ್​ಡೌನ್ ಮಾಡಲು ನಿರ್ಧಾರ ಮಾಡಿದೆ. 
ಕರುಗಳ ಜೊತೆ ಸಿಎಂ ಯಡಿಯೂರಪ್ಪ
ಕರುಗಳ ಜೊತೆ ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಈ ಕೋವಿಡ್​​-19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಪುನಃ ಸರ್ಕಾರ ಸಂಡೇ ಲಾಕ್​ಡೌನ್ ಮಾಡಲು ನಿರ್ಧಾರ ಮಾಡಿದೆ. 

ಸಿಎಂ ಬಿ.ಎಸ್​ ಯಡಿಯೂರಪ್ಪ ತನ್ನ ಅಧಿಕೃತ ಕಾವೇರಿ ನಿವಾಸದಲ್ಲೇ ಎಲ್ಲಿಗೂ ಹೋಗದೇ ಉಳಿದುಕೊಂಡಿದ್ದರು. ಭೇಟಿಗೂ ಅವಕಾಶ ನೀಡದೇ ಕುಟುಂಬದೊಂದಿಗೆ ಕಾಲ ಕಳೆದರು.

ಬಂಗಲೆುಡ್ಡದ ಮುಳ್ಳೂರು ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಇಬ್ಬರು ,ಸಾವನ್ನಪ್ಪಿದ ಪ್ರಕರಣದ ಸಂಬಂಧ ದಕ್ಷಿಣ ಕನ್ನಡ ಸಚಿವ ಕೋಟಾ ಶ್ರೀನಿವಾಸ ಪೂಜಾರಿ  ಮತ್ತು ಜಿಲ್ಲಾಡಳಿತದ ಜೊತೆ ಸಿಎಂ ಚರ್ಚೆ ನಡೆಸಿದರು.

ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆ ಬಗ್ಗೆ ಸಿಎಂ ಗಮನ ಹರಿಸಿದ್ದರು. ಸಂಜೆ 7ರ ವರೆಗೂ ರಾಜ್ಯದಲ್ಲಿ ಕೊರೋನಾ  ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.  ಇನ್ನೂ ಸಿಎಂ ನಿವಾಸ ಕಾವೇರಿಯಲ್ಲಿ ಐವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾವೇರಿ ನಿವಾಸದ ಗಾರ್ಡನ್ ಸೇರಿದಂತೆ ಹಲವೆಡೆ ಸ್ಯಾನಿಟೈಸ್ ಮಾಡಲಾಯಿತು.

ತಮ್ಮ ಮನೆಯ ಮುಂದಿನ ಗಾರ್ಡನ್ ಮುಂದೆ ವಾಕಿಂಗ್ ಮಾಡಿದ ಯಡಿಯೂರಪ್ಪ ಮಧ್ಯೆ ಮಧ್ಯೆ ಟಿವಿ ಚಾನೆಲ್ ಗಳಲ್ಲಿ ನ್ಯೂಸ್ ವೀಕ್ಷಿಸಿದರು. ಜೊತೆಗೆ ಹಸುಗಳಿದ್ದೆಡೆ ತೆರಳಿ ಕರುಗಳ ಜೊತೆ ಕಾಲ ಕಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com