ಗುರು ರಾಘವೇಂದ್ರ ಬ್ಯಾಂಕ್ ಹಗರಣಕ್ಕೆ ಮೊದಲ ಬಲಿ: ಮಾಜಿ ಸಿಇಒ ಆತ್ಮಹತ್ಯೆ

ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಶ್ರೀ ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿ ಹಗರಣ ಮೊದಲ ಬಲಿ ಪಡೆದಿದೆ. ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬ್ಯಾಂಕಿನ ಮಾಜಿ ಸಿಇಓ ವಾಸುದೇವ್ ಮಯ್ಯ ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾಸುದೇವ್ ಮಯ್ಯ
ವಾಸುದೇವ್ ಮಯ್ಯ

ಬೆಂಗಳೂರು: ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಶ್ರೀ ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿ ಹಗರಣ ಮೊದಲ ಬಲಿ ಪಡೆದಿದೆ.ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬ್ಯಾಂಕಿನ ಮಾಜಿ ಸಿಇಓ ವಾಸುದೇವ್ ಮಯ್ಯ ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉತ್ತರಹಳ್ಳಿ ರಸ್ತೆಯ ಬದಿ ಕಾರಿನಲ್ಲಿ  ವಿಷ ಸೇವಿಸಿ ವಾಸುದೇವ್ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ 6:30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ.

ಬಸವನಗುಡಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪಗಳು ಕೇಳಿಬಂದಿತ್ತು.ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬ್ಯಾಂಕ್ ಹಾಗೂ ವಾಸುದೇವ ಮಯ್ಯ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com