ವಿಶ್ವ ವಿಖ್ಯಾತ ಹಂಪಿ ಪ್ರವಾಸಿಗರಿಗೆ ಇಂದಿನಿಂದ ಮುಕ್ತ!

ಕಳೆದ ನಾಲ್ಕು ತಿಂಗಳಿನಿಂದ ಪ್ರವಾಸಿಗರಿಲ್ಲದೆ ಬಣಗುಡುತಿದ್ದ ವಿಶ್ವ ವಿಖ್ಯಾತ ಹಂಪಿಗೆ ಇಂದಿನಿಂದ ಜೀವ ಕಳೆ ಬರುತ್ತಿದೆ.
ಹಂಪಿ  ಸ್ಮಾರಕ
ಹಂಪಿ ಸ್ಮಾರಕ

ಹೊಸಪೇಟೆ: ಕಳೆದ ನಾಲ್ಕು ತಿಂಗಳಿನಿಂದ ಪ್ರವಾಸಿಗರಿಲ್ಲದೆ ಬಣಗುಡುತಿದ್ದ ವಿಶ್ವ ವಿಖ್ಯಾತ ಹಂಪಿಗೆ ಇಂದಿನಿಂದ ಜೀವ ಕಳೆ ಬರುತ್ತಿದೆ.

ಹೌದು ಈ ಹಿಂದೆ ನಾಲ್ಕು ತಿಂಗಳಿನಿಂದ ಹಂಪಿಗೆ ಬರುವಂತ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿತ್ತು, ಆದ್ರೆ ಇಂದಿನಿಂದ ಆ ನಿರ್ಭಂದವನ್ನ ಹಿಂತೆಗೆದುಕೊಳ್ಳುವ ಮೂಲಕ ಪ್ರವಾಶಿಗರಿಗೆ ಹಂಪಿ ಸ್ಮಾರಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಆರಂಭದಲ್ಲಿ ಪ್ರತಿ ದಿನ ಎರಡು ಸಾವಿರ ಪ್ರವಾಸಿಗರಿಗೆ ಮಾತ್ರ ಸ್ಮಾರಕ ವೀಕ್ಷಣೆಗೆ ಅವಕಾಶ ಕಲ್ಪಿಸಿರುವ ಭಾರತೀಯ ಪುರಾತತ್ವ ಇಲಾಖೆ, ಟಿಕೆಟ್ ಕೌಂಟರ್ ನಲ್ಲೇ ಸ್ಯಾನಿಟೈಸರ್ ತರ್ಮಲ್ ಸ್ಕ್ರೀನಿಂಗೆ ಸೇರೆದಂತೆ ಸಾಮಾಜಿಕ ಅಂತರದ ಮೂಲಕ ಸ್ಮಾಕರ ವೀಕ್ಷಣ ಪ್ರದೇಶಕ್ಕೆ ಪ್ರವೇಶ ಕಲ್ಪಿಸಲು ಸಿದ್ದತೆ ನಡೆಸಿದೆ, ಅಲ್ಲದೆ ಈ ಹಿಂದೆ ಮುಕ್ತವಾಗಿ ಸ್ಮಾರಕ ಸ್ಪರ್ಶಕ್ಕೆ ಅವಕಾಶ ಇತ್ತು, ಆದ್ರೆ ಕೊರೊನ ಹಿನ್ನೆಲೆಯಲ್ಲಿ ಸ್ಮಾರಕಗಳಿಗೂ ಕಿರಿಕಿರಿ ತಪ್ಪಿದೆ.

ಹೌದು ಇದುವರೆಗೆ ಯಾವುದೇ ಪ್ರವೇಶಿಗರು ಹಂಪಿಗೆ ಬಂದರೆ ಅಲ್ಲಿನ ಸ್ಮಾರಕಗಳನ್ನು ಮುಟ್ಟಿ ಅವುಗಳೊಂದಿಗೆ ತಮ್ಮ‌ ನೆಚ್ಚಿನ ಸೆಲ್ಪಿ ಸೆರೆಹಿಡಿಕೊಳ್ಳುತ್ತಿದ್ದರು, ಆದ್ರೆ ಈ ಬಾರಿ ಸ್ಮಾರಕಗಳನ್ನ ಮುಟ್ಟುವುದಕ್ಕೆ ಅವಕಾಶ ಇಲ್ಲ, ಸ್ಮಾರಕಗಳಿಂದ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗಿದೆ.

ಇನ್ನು ಕಳೆದ ನಾಲ್ಕು ತಿಂಗಳಿನಿಂದ ಹಂಪಿಗೆ ಪ್ರವಾಸಿಗರು ಬರದ ಹಿನ್ನೆಲೆಯಲ್ಲಿ ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳು‌ ಮತ್ತು ಸಣ್ಣ ಪುಟ್ಟ ವ್ಯಾಪಾರಿಗಳು ಆದಾಯವಿಲ್ಲದೆ ಕಂಗಾಲಾಗಿದ್ರು, ಇದೀಗ ಹಂಪಿಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿರುವುದರಿಂದ ಹೋದ ಜೀವ ಮರಳಿದಂತಾಗಿದೆ.

ಆದರೆ, ಇದರ ಜೊತೆ ಮತ್ತೊಂದು ಆತಂಕ ಸ್ಥಳೀಯರಲ್ಲಿ ಎದುರಾಗಿದೆ, ಇದುವರೆಗೆ ಒಂದೇ ಒಂದು ಪಾಸಿಟಿವ್ ಪ್ರಕರಣ ಇಲ್ಲದೆ ಮುಕ್ತವಾಗಿದ್ದ ಹಂಪಿಗೆ ಎಲ್ಲಿ ಕೊರೊನ ವಕ್ಕರಿಸಿಬಿಡುತ್ತೊ ಎನ್ನುವ ಆತಂಕ ಸ್ಥಳೀಯರಲ್ಲಿ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com