ಕೊರೋನಾ ಮಧ್ಯೆ ವಿಶೇಷ ಕೋರ್ಟ್ ರೂಂ ಸ್ಥಾಪಿಸಿದ ಹೈಕೋರ್ಟ್

ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ಹೈಕೋರ್ಟ್ ಬೆಂಗಳೂರಿನ ವಸಂತ ನಗರದಲ್ಲಿರುವ ಗುರು ನಾನಕ್ ಭವನದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಪಾರದರ್ಶಕತೆಯಿಂದ ಇಬ್ಘಾಗ ಮಾಡಿರುವ ಕೋರ್ಟ್ ರೂಂನ್ನು ಸ್ಥಾಪಿಸಿದೆ.
ವಸಂತನಗರದ ಗುರುನಾನಕ್ ಭವನದಲ್ಲಿರುವ ಕೋರ್ಟ್ ರೂಂ
ವಸಂತನಗರದ ಗುರುನಾನಕ್ ಭವನದಲ್ಲಿರುವ ಕೋರ್ಟ್ ರೂಂ

ಬೆಂಗಳೂರು: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ಹೈಕೋರ್ಟ್ ಬೆಂಗಳೂರಿನ ವಸಂತ ನಗರದಲ್ಲಿರುವ ಗುರು ನಾನಕ್ ಭವನದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಪಾರದರ್ಶಕತೆಯಿಂದ ಇಬ್ಘಾಗ ಮಾಡಿರುವ ಕೋರ್ಟ್ ರೂಂನ್ನು ಸ್ಥಾಪಿಸಿದೆ.

ಇಲ್ಲಿ ಬಂಧಿತ ಆರೋಪಿಗಳು, ವಿಚಾರಣಾಧೀನ ಕೈದಿಗಳನ್ನು ಹಾಜರುಪಡಿಸಬಹುದಾಗಿದೆ. ಇಲ್ಲಿ ಕೊರೋನಾ ನೀತಿ ನಿಯಮಗಳನ್ನು ಪಾಲಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ರಿಮಾಂಡ್ ಕೋರ್ಟ್ ನ್ನು ಸ್ಥಾಪಿಸಲಾಗಿದೆ ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ಆರೋಪಿಗೆ ಕೊರೋನಾ ಪಾಸಿಟಿವ್ ಬಂದ ಮೇಲೆ ಮತ್ತು ಕಾನ್ಸ್ಟೇಬಲ್ ಗೆ ಸಹ ಕೊರೋನಾ ಕಾಣಿಸಿಕೊಂಡು ಬಂದ್ ಮಾಡಲಾಗಿತ್ತು. ಹಲವು ನ್ಯಾಯಾಧೀಶರು ಕ್ವಾರಂಟೈನ್ ಗೊಳಗಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com