ಅರ್ಧ ಗಂಟೆಯಲ್ಲೇ ಕೈ ಸೇರಲಿದೆ ವರದಿ: 10 ಸಾವಿರ ರ‍್ಯಾಪಿಡ್ ಆಂಟಿಜೆನ್‌ ಕಿಟ್‌ ಖರೀದಿಸಿದ ಬಳ್ಳಾರಿ ಜಿಲ್ಲಾಡಳಿತ

ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿದ ನಂತರ ಇನ್ನು 24 ಗಂಟೆಯ ಕಾಲ ಕಾಯಬೇಕಿಲ್ಲ. ಬರೀ 30 ನಿಮಿಷದಲ್ಲೇ ಕೊರೊನಾ ಸೋಂಕಿಗೆ ಸಂಬಂಧಿಸಿದ ವರದಿ ಕೈ ಸೇರಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿದ ನಂತರ ಇನ್ನು 24 ಗಂಟೆಯ ಕಾಲ ಕಾಯಬೇಕಿಲ್ಲ. ಬರೀ 30 ನಿಮಿಷದಲ್ಲೇ ಕೊರೊನಾ ಸೋಂಕಿಗೆ ಸಂಬಂಧಿಸಿದ ವರದಿ
ಕೈ ಸೇರಲಿದೆ.

ಬಳ್ಳಾರಿ ಜಿಲ್ಲಾಡಳಿತ 10 ಸಾವಿರ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕಿಟ್ ಖರೀದಿಸಿದೆ, ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ಕಿಟ್‌ಗಳನ್ನು ಗಣಿ ಜಿಲ್ಲೆಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕೊರೊನಾ ನಾಗಲೋಟಕ್ಕೆ ಕಡಿವಾಣ ಹಾಕುವ ಹಾಗೂ ಶಂಕಿತರಲ್ಲಿ ಸೋಂಕು ಪತ್ತೆ ಕಾರ್ಯ ತ್ವರಿತವಾಗಿ ಮುಗಿಸಲು ರ‍್ಯಾಪಿಡ್ ಆಟಿಜೆನ್‌ ಕಿಟ್‌ನ ಮೂಲಕ ಪರೀಕ್ಷೆ ನಡೆಯಲಿದೆ.  ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈವರೆಗೆ 600ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹೇಳಿದ್ದಾರೆ, 10 ಕಿಟ್‌ಗಳನ್ನು ಡಿಎಂಎಫ್‌ ಅನುದಾನದಡಿ  ಜಿಲ್ಲಾಡಳಿತ ಖರೀದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com