ದೆಹಲಿ, ಮುಂಬೈ, ಚೆನ್ನೈ ನಗರಗಳನ್ನು ಕೋವಿಡ್-19 ಕೇಸುಗಳಲ್ಲಿ ಹಿಂದಿಕ್ಕಿರುವ ಬೆಂಗಳೂರು!

ಕಳೆದ 15 ದಿನಗಳಿಂದ ಸಿಲಿಕಾನ್ ಸಿಟಿ, ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಶೇಕಡಾ 15.7ರಷ್ಟು ಹೆಚ್ಚಾಗಿದೆ. ಮೊನ್ನೆ ಭಾನುವಾರ ನಗರದಲ್ಲಿ 1,235 ಹೊಸ ಪ್ರಕರಣಗಳು ವರದಿಯಾಗಿದ್ದು ನಿನ್ನೆ ಸಿಕ್ಕಿರುವ ಅಂಕಿಅಂಶ ಪ್ರಕಾರ 981 ಹೊಸ ಕೇಸುಗಳು ಪತ್ತೆಯಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ 15 ದಿನಗಳಿಂದ ಸಿಲಿಕಾನ್ ಸಿಟಿ, ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಶೇಕಡಾ 15.7ರಷ್ಟು ಹೆಚ್ಚಾಗಿದೆ. ಮೊನ್ನೆ ಭಾನುವಾರ ನಗರದಲ್ಲಿ 1,235 ಹೊಸ ಪ್ರಕರಣಗಳು ವರದಿಯಾಗಿದ್ದು ನಿನ್ನೆ ಸಿಕ್ಕಿರುವ ಅಂಕಿಅಂಶ ಪ್ರಕಾರ 981 ಹೊಸ ಕೇಸುಗಳು ಪತ್ತೆಯಾಗಿವೆ.

ಬೆಂಗಳೂರಿನ ಕೊರೋನಾ ಸೋಂಕಿತ ಪ್ರಕರಣಗಳನ್ನು ಕಳೆದ ಮೂರು ದಿನಗಳಲ್ಲಿ ಹೋಲಿಕೆ ಮಾಡಿ ನೋಡಿದಾಗ ದೆಹಲಿಯಲ್ಲಿ ಶೇಕಡಾ 2.6 ಆಗಿದ್ದು, ಚೆನ್ನೈಯಲ್ಲಿ ಶೇಕಡಾ 2.9 ಮುಂಬೈಯಲ್ಲಿ ಶೇಕಡಾ 1ರಷ್ಟು ಕಳೆದ ಮೂರು ದಿನಗಳಲ್ಲಿ ಅಧಿಕವಾಗಿದೆ. ಈ ಅಂಕಿಅಂಶ ನೋಡುವಾಗ ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಏರಿಕೆಯಾಗುತ್ತಿದೆಯೇ ಎಂಬ ಆತಂಕ ಉಂಟಾಗಿದೆ.

ಮತ್ತೊಂದು ಆತಂಕದ ಸಂಗತಿಯೆಂದರೆ ದೆಹಲಿ, ಚೆನ್ನೈ, ಮುಂಬೈ ಸಿಟಿಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಕೊರೋನಾದಿಂದ ಗುಣಮುಖರಾದವರ ಸಂಖ್ಯೆ ಕೂಡ ಕಡಿಮೆ ಅದು ಶೇಕಡಾ 14.7 ಮಾತ್ರ. ದೆಹಲಿಯಲ್ಲಿ ಶೇಕಡಾ 71.7, ಚೆನ್ನೈಯಲ್ಲಿ ಶೇಕಡಾ 62 ಮತ್ತು ಮುಂಬೈಯಲ್ಲಿ ಶೇಕಡಾ 66.1ರಷ್ಟು ಗುಣಮುಖರಾದ ಕೇಸುಗಳಿವೆ.

ಬೆಂಗಳೂರಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಕಳೆದ ಮೂರು ದಿನಗಳಲ್ಲಿ ಶೇಕಡಾ 1.55ರಷ್ಟಿದೆ. ದೆಹಲಿಯಲ್ಲಿ ಈ ಪ್ರಮಾಣ ಶೇಕಡಾ 2.82, ದೆಹಲಿ, ಮುಂಬೈ, ಚೆನ್ನೈಗಿಂತ ಕಡಿಮೆಯಿದೆ.

ಬೆಂಗಳೂರು ನಗರದಲ್ಲಿ ಇದುವರೆಗೆ 8 ಸಾವಿರದ 167 ಸಕ್ರಿಯ ಕೇಸುಗಳಿದ್ದು, ಸೋಂಕಿನಿಂದ 155 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಜುಲೈ 3ರಿಂದ 50 ಮಂದಿ ಮೃತಪಟ್ಟಿದ್ದಾರೆ.

ಸತತ ಏರಿಕೆಯಾಗುತ್ತಿರುವ ಕೊರೋನಾ ಸೋಂಕಿನಿಂದ ಕಂಗೆಟ್ಟು ನಗರ ಬಿಟ್ಟು ಊರುಗಳಿಗೆ ವಲಸೆ ಹೋಗುವ ಮಂದಿ ಹೆಚ್ಚಾಗುತ್ತಿದ್ದಾರೆ. ಆತಂಕಗೊಂಡು ಈ ಸಮಯದಲ್ಲಿ ಊರುಗಳಿಗೆ ಹೋಗಬೇಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜನತೆಯಲ್ಲಿ ಮನವಿ ಮಾಡಿದ್ದಾರೆ. ಕೊರೋನಾ ಜೊತೆಗೆ ಬದುಕಿ ಅದನ್ನು ಸಮರ್ಥವಾಗಿ ಎದುರಿಸೋಣ ಎಂದು ಜನತೆಗೆ ಕರೆ ಕೊಟ್ಟಿದ್ದಾರೆ.

ಸರ್ಕಾರ ಬೆಂಗಳೂರಿಗರಿಗೆ ಕೊರೋನಾ ಸಂದರ್ಭದಲ್ಲಿ ಸಕಲ ವೈದ್ಯಕೀಯ ವ್ಯವಸ್ಥೆ ಮಾಡುತ್ತಿದೆ. 450 ಆಂಬ್ಯುಲೆನ್ಸ್ ಗಳನ್ನು ಮತ್ತೆ ಸೇರಿಸಲಾಗಿದೆ. ಆಸ್ಪತ್ರೆ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರ ನಗರದಲ್ಲಿ 72 ಖಾಸಗಿ ಸಂಸ್ಥೆಗಳ ಮೂಲಕ 3 ಸಾವಿರದ 331 ಬೆಡ್ ಗಳ ವ್ಯವಸ್ಥೆಯನ್ನು ಮಾಡಿದೆ. ಅವುಗಳಲ್ಲಿ 733 ಬೆಡ್ ಗಳು ಈಗಾಗಲೇ ಭರ್ತಿಯಾಗಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಜ್ಯದಲ್ಲಿ ಇದುವರೆಗೆ 23 ಸಾವಿರಕ್ಕೂ ಅಧಿಕ ಕೊರೋನಾ ಪ್ರಕರಣಗಳಿದ್ದು ಅವುಗಳಲ್ಲಿ 13 ಸಾವಿರ ಸಕ್ರಿಯ ಪ್ರಕರಣಗಳು ಮತ್ತು 372 ಸಾವುಗಳು ಸಂಭವಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com