ಗಾಲ್ವಾನ್ ಸಂಘರ್ಷ: ರಾಹುಲ್ ಗಾಂಧಿ ವಿರುದ್ಧ ಬಿ.ಎಲ್.ಸಂತೋಷ್ ಕಿಡಿ

ರಾಷ್ಟ್ರದ ಯೋಧ ಬಲಿದಾನಕ್ಕೆ ಭಾರತ ತಿರುಗೇಟು ನೀಡುತ್ತಿದ್ದರೂ ಆಧಾರ ರಹಿತ ಆರೋಪಗನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ವಿಚಾರವಾಗಿ ನಡೆಯುವ ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿಯ ಒಂದೇ ಒಂದು ಸಭೆಯೂ ಯಾಕೆ ಹೋಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಖಾರವಾಗಿ ಪ್ರಶ್ನಿಸಿದ್ದಾರೆ. 
ಬಿ.ಎಲ್.ಸಂತೋಷ್
ಬಿ.ಎಲ್.ಸಂತೋಷ್

ಬೆಂಗಳೂರು: ರಾಷ್ಟ್ರದ ಯೋಧ ಬಲಿದಾನಕ್ಕೆ ಭಾರತ ತಿರುಗೇಟು ನೀಡುತ್ತಿದ್ದರೂ ಆಧಾರ ರಹಿತ ಆರೋಪಗನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ವಿಚಾರವಾಗಿ ನಡೆಯುವ ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿಯ ಒಂದೇ ಒಂದು ಸಭೆಯೂ ಯಾಕೆ ಹೋಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಖಾರವಾಗಿ ಪ್ರಶ್ನಿಸಿದ್ದಾರೆ. 

ಸೋಮವಾರ ಸಂಜೆ ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಜನ ಸಂವಾದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಿಸಿ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು, ಪ್ರಧಾನಿ ಮೋದಿಯ ವಿಶ್ವಸಾರ್ಹತೆ ಬಗ್ಗೆ ಪ್ರಶ್ನಿಸುವ ಮೊದಲು ತಮ್ಮ ಮತ್ತು ಅವರ ಪಕ್ಷದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿಕೊಳ್ಳಬೇಕು. ವಿಶ್ವಾಸಾರ್ಹತೆ ಏನೆಂಬುದನ್ನು ಚೀನಾದ ಗಡಿಯಲ್ಲಿ ತೋರಿಸಿದ್ದೇವೆಂದು ಹೇಳಿದ್ದಾರೆ. 

ದೇಶದ ಸೇನೆ ಬಲಗೊಳಿಸುವ ಸಂಬಂಧ ಈ ವರೆಗೆ 11 ಬಾರಿ ರಕ್ಷಣಾ ಸ್ಥಾಯಿ ಸಮಿತಿಯ ಸಭೆ ನಡೆದಿದೆ. ಆದರೆ, ಅದರ ಸದಸ್ಯರಾಗಿರುವ ರಾಹುಲ್ ಗಾಂಧಿಯವರು ಒಂದೇ ಒಂದು ಸಭೆಗೂ ಹಾಜರಾಗಿಲ್ಲ. ಈ ಆರೋಪಗಳಲ್ಲಿ ಎಷ್ಟು ಸತ್ಯ ಇರುತ್ತದೆ ಎಂದು ಪ್ರಶ್ನಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com