ಬೆಂಗಳೂರು: ಸಕಾಲಕ್ಕೆ ಚಿಕಿತ್ಸೆ ದೊರೆಯದೆ 64 ವರ್ಷದ ಮಹಿಳೆ ಸಾವು

ಅತೀವ್ರ ಜ್ವರ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಸಾವನ್ನಪ್ಪಿರುವ ಘಟನೆ ಬಿಳೇಕಳ್ಳಿಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅತೀವ್ರ ಜ್ವರ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಸಾವನ್ನಪ್ಪಿರುವ ಘಟನೆ ಬಿಳೇಕಳ್ಳಿಯಲ್ಲಿ ನಡೆದಿದೆ. 

ಪತ್ನಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉಸಿರಾಟ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಿದ್ದಳು. ಕೂಡಲೇ ಜಯನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದರು. ಕೊರೋನಾ ಪರೀಕ್ಷೆ ನಡೆಸುವ ಅಗತ್ಯವಿದೆ ಎಂದಿದ್ದರು. 

ಬಳಿಕ ಶೇಷಾದ್ರಿಪುರಂ, ಕನ್ನಿಂಗಮ್ ರಸ್ತೆ, ಮಲ್ಲೇಶ್ವರಂ, ಕೆಂಗೇರಿ, ಸರ್ಜಾಪುರ ರಸ್ತೆಯ ಸಾಕಷ್ಟು ಖಾಸಗಿ ಆಸ್ಪತ್ರೆಗಳಿಗೆ ಸುತ್ತಾಡಿದೆವು. ಎಲ್ಲಿಯೂ ಚಿಕಿತ್ಸೆ ದೊರೆಯಲಿಲ್ಲ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದೆವು. ಅಲ್ಲಿ ಸ್ವ್ಯಾಬ್ ಪರೀಕ್ಷೆ ಮಾಡಲಾಗಿತ್ತು. 48 ಗಂಟೆಗಳ ಬಳಿಕ ವೈದ್ಯಕೀಯ ವರದಿ ಬರುವುದಾಗಿ ತಿಳಿಸಿದರು. ಬಳಿಕ ನಾವು ಮನೆಗೆ ಹೋಗಿದ್ದೆವು. 

ಜ್ವರಕ್ಕೆ ಮಾತ್ರೆ ನೀಡಿದ್ದೆವು. ಆದರೆ, ಅದು ಕೆಲಸ ಮಾಡಲಿಲ್ಲ. ಪತ್ನಿ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಬಳಿಕ ಮತ್ತೆ ನಗರದ ಮತ್ತಷ್ಟು ಆಸ್ಪತ್ರೆಗಳಿಗೆ ಸುತ್ತಾಡಿದೆವು. ಯಾರೊಬ್ಬರೂ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಿಲ್ಲ. ಸೋಮವಾರ ಬೆಳಿಗ್ಗೆ ನನ್ನ ಪತ್ನಿ ಸಾವನ್ನಪ್ಪಿಳು. ಬಳಿಕ ಕೊರೋನಾ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ವೈರಸ್ ಇಲ್ಲ ಎಂದು ತಿಳಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದೇ ಆಗಿದ್ದರೆ, ಆಕೆ ಬದುಕುಳಿಯುತ್ತಿದ್ದಳು ಎಂದು ಮಹಿಳೆಯ ಪತಿ ಜೋಸೆಫ್ ರೋಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com