ಬೆಂಗಳೂರಿನ ಶಾಂತಲಾ ನಗರ ಈಗ ಕೊರೋನಾ ವೈರಸ್ ಹಾಟ್ ಸ್ಪಾಟ್!

ರಾಜ್ಯ ರಾಜಧಾನಿ ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಇನ್ನಿಲ್ಲದಂತೆ ಕಾಡುತ್ತಿದ್ದು, ಪಾದರಾಯನಪುರ, ಹೊಂಗ ಸಂದ್ರ ಮತ್ತು ಶಿವಾಜಿನಗರದ ಬಳಿಕ ಇದೀಗ ಶಾಂತಲಾನಗರ ಹೊಸ ಕೊರೋನಾ ವೈರಸ್ ಹಾಟ್ ಸ್ಫಾಟ್ ಆಗಿ ಬದಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ರಾಜಧಾನಿ ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಇನ್ನಿಲ್ಲದಂತೆ ಕಾಡುತ್ತಿದ್ದು, ಪಾದರಾಯನಪುರ, ಹೊಂಗ ಸಂದ್ರ ಮತ್ತು ಶಿವಾಜಿನಗರದ ಬಳಿಕ ಇದೀಗ ಶಾಂತಲಾನಗರ ಹೊಸ ಕೊರೋನಾ ವೈರಸ್ ಹಾಟ್ ಸ್ಫಾಟ್ ಆಗಿ ಬದಲಾಗುತ್ತಿದೆ.

ಹೌದು...ಪಾಲಿಕೆಗೆ ಅತೀ ಹೆಚ್ಚು ವರಮಾನ ತಂದುಕೊಡುವ ವಾರ್ಡ್ ಗಳ ಪೈಕಿ ಶಾಂತಲನಗರ ಪ್ರಮುಖವಾದದ್ದು. ಮೂರು ಕ್ರೀಡಾಂಗಣಗಳು ಈ ವ್ಯಾಪ್ತಿಯಲ್ಲಿದ್ದು, ಇಲ್ಲಿ ಈಗ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಜುಲೈ 2 ರಿಂದ ಜುಲೈ ರವರೆಗೆ ಇಲ್ಲಿ ಬರೊಬ್ಬರಿ  211 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಸ್ವತಃ ಬಿಬಿಎಂಪಿ ವಾರ್ ರೂಂ ದತ್ತಾಂಶದಿಂದಲೇ ಈ ಮಾಹಿತಿ ಹೊರ ಬಿದ್ದಿದೆ. ಶಾಂತಲಾನಗರ ವಾರ್ಡ್ ನಲ್ಲಿ ಲ್ಯಾವೆಲಿ ರಸ್ತೆ, ವಿಠಲ್ ಮಲ್ಯ ರಸ್ತೆ, ಬ್ರಿಗೇಡ್ ರಸ್ತೆ, ವಿಕ್ಟೋರಿಯಾ ರಸ್ತೆಗಳು ಸೇರಿದಂತೆ ನಗರದ ಹೃದಯಭಾಗದ ಬಹುತೇಕ ರಸ್ತೆಗಳು ಈ ವಾರ್ಡ್ ವ್ಯಾಪ್ತಿಗೆ ಒಳಪಡುತ್ತವೆ. 

ಈ ಹಿಂದೆ ಕೊರೋನಾ ಹಾಟ್ ಸ್ಪಾಟ್ ಗಳಾಗಿದ್ದ ಪಾದರಾಯನಪುರ, ಹೊಂಗ ಸಂದ್ರ ಮತ್ತು ಶಿವಾಜಿನಗರ ವಾರ್ಡ್ ಗಳಲ್ಲಿ ಒಟ್ಟಾರೆ 185 ಸೋಂಕು ಪ್ರಕರಣಗಳು ದಾಖಲಾಗಿದ್ದರೆ, ಶಾಂತಲಾನಗರ ವಾರ್ಡ್ ವೊಂದರಲ್ಲೇ 211 ಸೋಂಕು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಅಂಕಿ ಸಂಖ್ಯೆಗಳಲ್ಲೇ ದೋಷ: ಎಂದ ಆರೋಗ್ಯಾಧಿಕಾರಿ
ಇನ್ನು ಈ ಸಂಖ್ಯೆಯನ್ನು ಇಲ್ಲಿನ ಸ್ಥಳೀಯ ಆರೋಗ್ಯಾಧಿಕಾರಿಗಳು ಅಲ್ಲಗಳೆದಿದ್ದು, ನಮ್ಮ ವಾರ್ಡ್ ನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕಿರಿಲ್ಲ. ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ ಕೇವಲ 75 ಮಾತ್ರ ಇದೆ. ನಾನೇ ಖುದ್ಧು ಶಾಂತಿನಗರ ಉಸ್ತುವಾರಿ ನಾನೇ ನೋಡಿಕೊಳ್ಳುತ್ತಿದ್ದೇನೆ. ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಆರು ವಾರ್ಡ್ ಗಳಿದ್ದು, ಶಾಂತಲಾನಗರ, ಶಾಂತಿನಗರ, ವನ್ನರ್‌ಪೇಟೆ, ನೀಲಸಂದ್ರ, ದೊಮ್ಮಲೂರು, ಅಗರ ವಾರ್ಡ್ ಗಳಿವೆ. ಈ ಎಲ್ಲ ವಾರ್ಡ್ ಗಳಲ್ಲಿನ ಸೋಂಕಿತರನ್ನು ಲೆಕ್ಕಾ ಹಾಕಿದರೂ 211 ಬರುವುದಿಲ್ಲ. ಶಾಂತಲಾನಗರದಲ್ಲಿ ಒಟ್ಟಾರೆ 75 ಸೋಂಕು ಪ್ರಕರಣಗಳು ಮಾತ್ರ ಇವೆ. 211 ಅಲ್ಲ. ಮಾಹಿತಿ ತಪ್ಪಾಗಿದೆ ಎಂದು ಹೇಳಿದ್ದಾರೆ.

ವಾರ್ಡ್ ನ ವ್ಯಾಪ್ತಿಯಲ್ಲಿ ಬರುವ ಫಿಲೋಮೆನಸ್ ಆಸ್ಪತ್ರೆಯನ್ನು ಕಂಟೈನ್ ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದ್ದು, ಇಲ್ಲಿ ದಾಖಲಾಗಿದ್ದ 80 ವರ್ಷದ ವೃದ್ಧ ರೋಗಿಗೆ ಸೋಂಕು ದೃಢಪಟ್ಟಿದೆ. ವೃದ್ಧೆಯ ಮಗ ಮತ್ತು ಆಕೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮತ್ತು ಸಹಾಯಕ ನರ್ಸ್ ಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಈ ಪೈಕಿ ವೈದ್ಯರ ವರದಿ ಕೂಡ ಪಾಸಿಟಿವ್ ಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಇತರೆ ಸಿಬ್ಬಂದಿಗಳು ರೋಗಿಯ ಸಂಪರ್ಕಕ್ಕೆ ಬಂದ ಸಾಧ್ಯತೆ ಇದೆ. ಹೀಗಾಗಿ ಸಂಪರ್ಕಿತರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ 16 ಮಂದಿ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಇದಲ್ಲದೆ ವಿಠಲ್ ಮಲ್ಯ ರಸ್ತೆಯಲ್ಲಿರುವ ಮನೆಯಲ್ಲಿನ ಒಂದೇ ಕುಟುಂಬದ 7 ಮಂದಿಗೆ ಸೋಂಕು ಒಕ್ಕರಿಸಿದೆ. ಕುಟುಂಬದ ಓರ್ವ ಸದಸ್ಯೆ ವೈದ್ಯಕೀಯ ಸಿಬ್ಬಂದಿಯಾಗಿದ್ದು ಅವರ ಮೂಲಕ ಕುಟುಂಬಕ್ಕೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಆ ವೈದ್ಯಕೀಯ ಸಿಬ್ಬಂದಿಯ ವರದಿ ಕೂಡ ಪಾಸಿಟಿವ್ ಬಂದಿದೆ. ಇದೇ ರೀತಿ ಆಸ್ಟಿನ್ ಟೌನ್, ವೈಜಿ ಪಾಳ್ಯದ ನಿವಾಸಿಗಳಾದ ಆರೋಗ್ಯಾಧಿಕಾರಿಗಳ ವರದಿ ಕೂಡ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com