ಗ್ರಾಹಕರ ಮಾಹಿತಿ ನಿರ್ವಹಣೆಯಲ್ಲಿ ಲೋಪ: 110 ಔಷಧಾಲಯಗಳ ಲೈಸೆನ್ಸ್ ರದ್ದುಪಡಿಸಿದ ಸರ್ಕಾರ

ಐಎಲ್ ಐ, ಸಾರಿ (Sari)ಯಂತಹ ಇನ್ ಫ್ಲುಯೆಂಜಾಕ್ಕೆ ಸಂಬಂಧಿಸಿದ ಔಷಧ ಖರೀದಿಸುವ ಗ್ರಾಹಕರ ಮಾಹಿತಿಯನ್ನು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ 110 ಔಷಧಾಲಯಗಳ ಪರವಾನಗಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಐಎಲ್ ಐ, ಸಾರಿ (Sari)ಯಂತಹ ಇನ್ ಫ್ಲುಯೆಂಜಾಕ್ಕೆ ಸಂಬಂಧಿಸಿದ ಔಷಧ ಖರೀದಿಸುವ ಗ್ರಾಹಕರ ಮಾಹಿತಿಯನ್ನು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ 110 ಔಷಧಾಲಯಗಳ ಪರವಾನಗಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.

ಐಎಲ್ ಐ, ತೀವ್ರ ಉಸಿರಾಟ ತೊಂದರೆ, ಕೆಮ್ಮ, ಸೀನು ಮತ್ತು ಜ್ವರದಂತಹ ಸಮಸ್ಯೆಗಳಿಗೆ ಔಷಧ ಖರೀದಿಸುವ ಗ್ರಾಹಕರ ಮೊಬೈಲ್ ನಂಬರ್, ವಿಳಾಸ ಮತ್ತಿತರ ಮಾಹಿತಿಯನ್ನು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮಹಾಮಾರಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಾಗಿರುವ ಸರ್ಕಾರ ಕೆಮ್ಮು, ಸೀನು, ಜ್ವರದಂತಹ ಸಮಸ್ಯೆಗಳಿಗೆ ಔಷಧ ಕೊಳ್ಳುವವರ ಮಾಹಿತಿಯನ್ನು ನಿರ್ವಹಣೆ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com