ಕಳಪೆ ಗುಣಮಟ್ಟದ ಬಿತ್ತನೆ ಬೀಜದಿಂದ ಸಂಕಷ್ಟದಲ್ಲಿ ಆಲೂಗಡ್ಡೆ ಬೆಳೆಗಾರರು

ಕಳಪೆ ಗುಣಮಟ್ಟದ ಬಿತ್ತನೆ ಬೀಜದಿಂದಾಗಿ ಬೆಳಗಾವಿ ತಾಲೂಕಿನ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟದಿಂದ ಇತ್ತೀಚೆಗೆ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕಳಪೆ ಗುಣಮಟ್ಟದ ಬಿತ್ತನೆ ಬೀಜದಿಂದಾಗಿ ಬೆಳಗಾವಿ ತಾಲೂಕಿನ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಳೆ ನಷ್ಟದಿಂದ ಇತ್ತೀಚೆಗೆ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದರು.

ಬೆಳಗಾವಿಯಲ್ಲಿ ಇದೊಂದು ತಾಲೂಕಿನಲ್ಲಿ ಮಾತ್ರವೇ ಖಾರಿಫ್ ಬೆಳೆ ಬೆಳೆಯಲಾಗುತ್ತದೆ. ಮಳೆ ಆಧಾರಿತ ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತದೆ. ಈ ತಾಲೂಕಿವ ಸುಮಾರು 2,500 ಹೆಕ್ಟೇರ್ ಭೂಮಿಯಲ್ಲಿ ಆಲೂಗೆಡ್ಡೆ ಬೆಳೆಯುತ್ತಾರೆ. ಈ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಕೃಷಿ ನಡೆಯುತ್ತಿತ್ತು,

ಆದರೆ ವರ್ಷದಿಂದ ವರ್ಷಕ್ಕೆ ಹವಾಮಾನ ಬದಲಾವಣೆಯಿಂದಾಗಿ ಬೆಳೆ ಬೆಳೆಯುವ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಆದರೂ ಕೆಲವೂ ರೈತರು ಆಲೂಗೆಡ್ಡೆ ಬೆಳೆಯುತ್ತಿದ್ದಾರೆ. ಆದರೆ ಈ ಬಾರಿ ರೈತರಿಗೆ ಆರಂಭದಲ್ಲೇ ನಷ್ಟ ಉಂಟಾಗಿದೆ.

ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಆಲೂಗೆಡ್ಡೆ ವ್ಯಾಪಾರ ಮಾಡುವ ಆಯೋಗದ ಏಜೆಂಟರು ಪ್ರತಿವರ್ಷ ರೈತರಿಗೆ ಸಾಲದ ಮೇಲೆ ಬಿತ್ತನೆ ಬೀಜಗಳನ್ನು ನೀಡುತ್ತಾರೆ. ಅವರಿಗೆ ಪಂಜಾಬ್ ನ ಜಲಂಧರ್ ನಿಂದ ಬಿತ್ತನೆ ಬೀಜ ಬರುತ್ತದೆ,ಒಂದು ಕ್ವಿಂಟಾಲ್ ಗೆ 2,400 ರು ಕೊಟ್ಟು ಬೀಜ ಖರೀದಿಸುತ್ತಾರೆ.

ನೂರಾರು ರೈತರು ಬಂದು ನಮ್ಮಲ್ಲಿ ಬಿತ್ತನೆ ಬೀಜ ಖರೀದಿಸುತ್ತಾರೆ. ಸಾಲದ ಮೂಲಕ ರೈತರು ಬೀಜ ಖರೀದಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ಕಳಪೆ ಗುಣಮಟ್ಟದ್ದಾಗಿದೆ, ಕಳಪೆ ಬೀಜವನ್ನು ಹೆಚ್ಚಿನ ಹಣ ನೀಡಿ ಖರೀಸಿದಿದ್ದೇವೆ ಎಂದು ರೈತ ಅಪ್ಪಾ ಸಾಹೇಬ್ ದೇಸಾಯಿ ಹೇಳಿದ್ದಾರೆ. ಒಂದು ಎಕರೆ ಆಲೂಗೆಡ್ಡೆ ಕೃಷಿಗೆ 50 ಸಾವಿರ ರು ವ್ಯಯಿಸಲಾಗುತ್ತದೆ.

ಈ ಸಂಬಂಧ ಶೀಘ್ರವೇ ಸಾಮೂಹಿಕ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಳಕಟ್ಟಿ ಬಿತ್ತನೆ ಬೀಜದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com