ತುಮಕೂರು: ಲಕ್ಷಣ ರಹಿತ ಕೊರೋನಾ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣ

ತುಮಕೂರಿನಲ್ಲಿ ಲಕ್ಷಣ ರಹಿತ ಕೊರೋನಾ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.
ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ  ಕೋವಿಡ್ ಆಸ್ಪತ್ರೆ
ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ ಕೋವಿಡ್ ಆಸ್ಪತ್ರೆ

ತುಮಕೂರು: ತುಮಕೂರಿನಲ್ಲಿ ಲಕ್ಷಣ ರಹಿತ ಕೊರೋನಾ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ 100 ಬೆಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ದಿನೇ ದಿನೇ ಹೊಸ ಸೋಂಕಿತರ ಪ್ರಮಾಣ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ. ಅಂತೆಯೇ ಸೋಂಕಿತರಿಗೆ ಬೆಡ್ ಗಳ ಒದಗಿಸಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದ್ದು, ಇದೀಗ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ತುಮಕೂರಿನ ಸರ್ಕಾರಿ ಕ್ರೀಡಾ ಸಂಸ್ಥೆ ತನ್ನ ಕಾಂಪ್ಲೆಕ್ಸ್ ನಲ್ಲಿ 100 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಿದೆ.

ಹೌದು.. 50 ವರ್ಷದೊಳಗಿನ ಲಕ್ಷಣ ರಹಿತ ಕೊರೋನಾ ಸೋಂಕಿತರಿಗಾಗಿ ಈ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಜಂಟಿ ಸಹಯೋಗದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿದೆ. ಪ್ರಸ್ತುತ ಇಲ್ಲಿ 100 ಬೆಡ್ ಗಳ ಸಾಮರ್ಥ್ಯವಿದ್ದು, ಇದನ್ನು ಹಂತ ಹಂತವಾಗಿ ಇನ್ನೂ 4 ರಿಂದ ಐದು ಪಟ್ಟು ಹೆಚ್ಚು ಮಾಡಬಲ್ಲದಾಗಿದೆ. ಆಸ್ಪತ್ರೆಗೆ ಹಂತ ಹಂತವಾಗಿ ಸುಮಾರು 400 ಮಂಚಗಳನ್ನು ರವಾನೆ ಮಾಡಲು ನಿರ್ಧರಿಸಲಾಗಿದೆ. ಇಲ್ಲಿ ಪ್ರಸ್ತುತ ಇಬ್ಬರು ಡ್ಯೂಟಿ ಡಾಕ್ಟರ್ ಗಳು 4 ನರ್ಸ್ ಗಳು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಸಿಬ್ಬಂದಿಗಳಿಗೆ ಈಗಾಗಲೇ ಅಗತ್ಯವಾಗಿ ಬೇಕಾದ ಪಿಪಿಇ ಕಿಟ್ ಗಳು, ಸ್ಯಾನಿಟೈಸರ್ ಗಳು ಮಾಸ್ಕ್ ಗಳು ಮತ್ತು ಇತರೆ ವಸ್ತುಗಳ ದಾಸ್ತಾನು ಮಾಡಲಾಗಿದ್ದು, ಸೋಂಕಿತರಿಗೆ ಬೇಸರವಾಗದಂತೆ ಶೀಘ್ರದಲ್ಲೇ ಇಲ್ಲಿ ಟಿವಿ ವ್ಯವಸ್ಥೆಯನ್ನೂ ಕೂಡ ಅಳವಡಿಸಲಾಗುತ್ತದೆ. ಅಂತೆಯೇ ಪ್ರತೀಯೊಬ್ಬ ಸೋಂಕಿತರಿಗೂ ಬಿಸಿ ನೀರು ಕುಡಿಯಲು ಬ್ರಾಂಡೆಡ್ ವಾಟರ್ ಬಾಟಲಿಗಳನ್ನು ನೀಡಲಾಗಿದೆ. ಅಲ್ಲದೆ ತುರ್ತು ಸುಂದರ್ಭದಲ್ಲಿ ಬೇಕಾಗುವ 2 ಆಕ್ಸಿಜನ್ ಸಿಲಿಂಡರ್ ಗಳನ್ನು ಮತ್ತು ವೆಂಟಿಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಇಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಪಿಹೆಚ್ ಸಿ ಆಸ್ಪತ್ರೆಯ ಡಾ.ಹರೀಶ್ ಗೌಡ ಅವರು ಹೇಳಿದ್ದಾರೆ.

2018ರ ಮಾರ್ಚ್ 24ರಂದು ಮೂರು ಅಂತಸ್ತಿನ ಕಟ್ಟಡವನ್ನು ಸುಮಾರು 4.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಂದು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಟಿಬಿ ಜಯಚಂದ್ರ ಅವರು ಈ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದರು. ಅಂದಿನಿಂದ ಇಂದಿನ ವರೆಗೂ ಈ ಕಟ್ಟಡದಲ್ಲಿ ಯಾವುದೇ ರೀತಿಯ ಕ್ರೀಡಾ ಚಟುವಟಿಕೆ ನಡೆಯುತ್ತಿರಲಿಲ್ಲ. ಇದೀಗ ಇದೇ ಕಟ್ಟಡವನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com