ಕ್ವಾರಂಟೈನ್'ಗೊಳಗಾಗುವಂತೆ ಪಂಜಾಬ್ ನಿಂದ ಬಂದ ಪತ್ನಿಗೆ ಒತ್ತಾಯ: ಪೊಲೀಸರ ಮನವೊಲಿಕೆ ಬಳಿಕ ಮನೆಗೆ ಸೇರಿಸಿಕೊಂಡ ಪತಿರಾಯ!

ಪಂಜಾಬ್'ಗೆ ತೆರಳಿ ಮರಳಿ ಬೆಂಗಳೂರಿಗೆ ಬಂದಿದ್ದ ಪತ್ನಿಯೊಬ್ಬಳಿಗೆ ಪತಿಯೊಬ್ಬ ಮನೆಗೆ ಸೇರಿಸಿಕೊಳ್ಳದೆ ಸಾಂಸ್ಥಿಕ ಕ್ವಾರಂಟೈನ್ ಗೊಳಗಾಗುವಂತೆ ರಾದ್ಧಾಂತ ಮಾಡಿರುವ ಘಟನೆಯೊಂದು ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಂಜಾಬ್'ಗೆ ತೆರಳಿ ಮರಳಿ ಬೆಂಗಳೂರಿಗೆ ಬಂದಿದ್ದ ಪತ್ನಿಯೊಬ್ಬಳಿಗೆ ಪತಿಯೊಬ್ಬ ಮನೆಗೆ ಸೇರಿಸಿಕೊಳ್ಳದೆ ಸಾಂಸ್ಥಿಕ ಕ್ವಾರಂಟೈನ್ ಗೊಳಗಾಗುವಂತೆ ರಾದ್ಧಾಂತ ಮಾಡಿರುವ ಘಟನೆಯೊಂದು ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಪಂಜಾಬ್ ನಿಂದ ಇಬ್ಬರು ಮಹಿಳೆಯರು  ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದಾರೆ. ಆದರೆ, ಪತ್ನಿಯನ್ನು ಮನೆಗೆ ಸೇರಿಸಿಕೊಳ್ಳಲು ಪತಿ ನಿರಾಕರಿಸಿದ್ದು, ಮೊದಲು ಸಾಂಸ್ಥಿಕ ಕ್ವಾರಂಟೈನ್'ಗೊಳಗಾಗುವಂತೆ ಒತ್ತಾಯಿಸಿದ್ದಾನೆ. ಎಷ್ಟು ಬಾರಿ ಬಾಗಿಲು ಬಡಿದರೂ ಬಾಗಿಲು ತೆರೆದಿಲ್ಲ.

ಇದರಿಂದ ನೊಂದ ಮಹಿಳೆ ಕೂಡಲೇ ಮಹಿಳಾ ಸಹಾಯವಾಣಿ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ವ್ಯಕ್ತಿಯ ಮನವೊಲಿದ್ದು, ರಾಜ್ಯದಲ್ಲಿ ಹೇರಲಾಗಿರುವ ಹೊಸ ಮಾರ್ಗಸೂಚಿ, ಕ್ವಾರಂಟೈನ್ ನಿಯಮಗಳನ್ನು ವಿವರಿಸಿದ್ದಾರೆ. 

ಬಳಿಕ ವ್ಯಕ್ತಿ ಪತ್ನಿಯನ್ನು ಮನೆಯಲ್ಲಿಸಿಕೊಂಡಿದ್ದು. ಮಹಿಳೆಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com