ಖಾಸಗಿ ಶಿಕ್ಷಕರಿಗೆ ಸರ್ಕಾರಿ ಶಿಕ್ಷಕರ ನೆರವಿನ ಹಸ್ತ: ಒಂದು ದಿನದ ವೇತನ ದೇಣಿಗೆ ನೀಡಲು ಒಪ್ಪಿಗೆ
ಕರ್ನಾಟಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ಸ್ ಮನವಿಗೆ ಸ್ಪಂದಿಸಿದ ಸರ್ಕಾರಿ ಶಾಲೆಗಳ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ತಮ್ಮ ಸಹವರ್ತಿಗಳಿಗೆ ಒಂದು ದಿನದ ವೇತನ ನೀಡಲು ಸಮ್ಮತಿಸಿದ್ದಾರೆ. ಕೊರೋನಾ ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ನಿಂದ ಅವರಿಗೆ ವೇತನ ನೀಡಲಾಗಿಲ್ಲ.
Published: 08th July 2020 06:54 PM | Last Updated: 08th July 2020 06:54 PM | A+A A-

ಬೆಂಗಳೂರು: ಕರ್ನಾಟಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ಸ್ ಮನವಿಗೆ ಸ್ಪಂದಿಸಿದ ಸರ್ಕಾರಿ ಶಾಲೆಗಳ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ತಮ್ಮ ಸಹವರ್ತಿಗಳಿಗೆ ಒಂದು ದಿನದ ವೇತನ ನೀಡಲು ಸಮ್ಮತಿಸಿದ್ದಾರೆ. ಕೊರೋನಾ ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ನಿಂದ ಅವರಿಗೆ ವೇತನ ನೀಡಲಾಗಿಲ್ಲ.
"ಸರ್ಕಾರಿ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ದುಡಿಯುವ ತಮ್ಮ ಸಹವರ್ತಿಗಳಿಗೆ ಒಂದು ದಿನದ ವೇತನವನ್ನು ನೀಡಲು ಒಪ್ಪಿಕೊಂಡಿದ್ದಾರೆ, ಏಕೆಂದರೆ ಅವರ ವ್ಯವಸ್ಥಾಪಕರು ಪಾವತಿಸದ ಕಾರಣ ಅವರು ಸಂಕಷ್ಟದಲ್ಲಿದ್ದಾರೆ, ಲಾಕ್‌ಡೌನ್‌ನಿಂದಾಗಿ ಹಣವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ" ಎಂದು ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಹೇಳೀದ್ದಾರೆ.
ಕೊರೋನಾವೈರಸ್ ಲಾಕ್‌ಡೌನ್ ಜಾರಿಗೊಳಿಸಿದ್ದ ಕಾರಣ ಮಾರ್ಚ್ 25 ರಿಂದ ರಾಜ್ಯಾದ್ಯಂತ ನೂರಾರು ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ, ಖಾಸಗಿ ಮತ್ತು ಅನುದಾನರಹಿತ ಸಂಸ್ಥೆಗಳ ಆಡಳಿತಕ್ಕೆ ವಿದ್ಯಾರ್ಥಿಗಳಿಂದ ಶುಲ್ಕವನ್ನು ಸಂಗ್ರಹಿಸಲು ಅಥವಾ ತಮ್ಮ ಅಧ್ಯಾಪಕರಿಗೆ ಮಾಸಿಕ ಸಂಬಳ ನೀಡಲು ಹಣವನ್ನು ಹೊಂದಿಸಲು ಸಾಧ್ಯವಾಗಿರಲಿಲ್ಲ. "ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಶಾಲೆಗಳು ಇನ್ನೂ ಬೇಸಿಗೆಯ ನಂತರ ತರಗತಿಗಳನ್ನು ಪುನರಾರಂಭಿಸಲಿಲ್ಲ ಆ ಶಾಲೆಗಳೂ ಇದುವರೆಗೆ ಶುಲ್ಕವನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಇದರ ಪರಿಣಾಮವಾಗಿ ಏಪ್ರಿಲ್‌ನಿಂದ 3 ತಿಂಗಳವರೆಗೆ ಶಿಕ್ಷಕರ ವೇತನವನ್ನು ಪಾವತಿಸಲಾಗಿಲ್ಲ "ಮಂಜುನಾಥ್ ಹೇಳಿದರು.
ಖಾಸಗಿ ಶಾಲೆಗಳ ಸಂಘವು ತಮ್ಮ ಶಿಕ್ಷಕ-ಸದಸ್ಯರಿಗೆ 3 ತಿಂಗಳ ಸಂಬಳವನ್ನು ನೀಡಲು ಪರಿಹಾರ ನಿಧಿಗಳಿಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಖಜಾನೆಯಲ್ಲಿ ಹಣದ ಕೊರತೆಯ ಕಾರಣ ಆ ಮನವಿಗೆ ಯಾವ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ."ಖಾಸಗಿ ಶಾಲೆಗಳಲ್ಲಿ ನಮ್ಮ ಸಹವರ್ತಿಗಳಿಗೆ 2 ದಿನಗಳ ಸಂಬಳವನ್ನು ದೇಣಿಗೆ ನೀಡುವಂತೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದರು. ನಾವು ಒಂದು ದಿನದ ವೇತನ ಪಾವತಿಸಲು ಒಪ್ಪಿದ್ದೇವೆ, ಏಕೆಂದರೆ ನಾವು ಈಗಾಗಲೇ ಕೊಡಗು ಮತ್ತು ಉತ್ತರ ಕರ್ನಾಟಕ ಪ್ರವಾಹ ಪರಿಹಾರ ನಿಧಿಗೆ 2019 ರ ಸೆಪ್ಟೆಂಬರ್‌ನ;ಲ್ಲಿ ದೇಣಿಗೆ ನೀಡಿದ್ದೇವೆ. ಅಲ್ಲದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹ ಹಣ ದೇಣಿಗೆ ಕೋಟ್ಟಿದ್ದೇವೆ., "ಮಂಜುನಾಥ್ ಹೇಳಿದರು.
ಖಾಸಗಿ ಮತ್ತು ಅನುದಾನರಹಿತ ಶಾಲೆಗಳಲ್ಲಿನ ಸುಮಾರು 1.4 ಲಕ್ಷ ಶಿಕ್ಷಕರು ಇದ್ದು ಸರ್ಕಾರಿ ಶಾಲೆಗಳ ತಮ್ಮ ಸಹವರ್ತಿಗಳ ದೇಣಿಗೆಯಿಂದ ತಮ್ಮ ಕಷ್ಟಗಳನ್ನು ಭಾಗಶಃ ತಗ್ಗುವ ಭರವಸೆ ಹೊಂದಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಕೆಎಸ್‌ಪಿಎಸ್‌ಟಿಎ), ಏಪ್ರಿಲ್‌ನಲ್ಲಿ ಸಿಎಂ ಕೋವಿಡ್ -19 ಪರಿಹಾರ ನಿಧಿಗೆ ಇದೇ ಮೊತ್ತವನ್ನು ಈಗಾಗಲೇ ಪಾವತಿಸಿರುವುದರಿಂದ ಅದರ ಸದಸ್ಯರು ಒಂದು ದಿನದ ವೇತನವನ್ನು ದಾನ ಮಾಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಹೇಳಿದರು."ನಮ್ಮ ಸದಸ್ಯರು ಈಗಾಗಲೇ ಕಳೆದ ವರ್ಷ ಸಿಎಂನ ಪ್ರವಾಹ ಪರಿಹಾರ ನಿಧಿ ಮತ್ತು ಏಪ್ರಿಲ್ ನಲ್ಲಿ ಕೋವಿಡ್ -19 ಪರಿಹಾರ ನಿಧಿಗೆ ಪಾವತಿಸಿದ್ದಾರೆ, ಅಲ್ಲದೆ ಇವರ ಆದಾಯ ಪ್ರೌಢಶಾಲಾ ಶಿಕ್ಷಕರ ಆದಾಯಕ್ಕೆ ಸಮನಾಗಿಲ್ಲ ಮತ್ತು ಅವರೂ ಸಹ ಲಾಕ್ ಡೌನ್ ಮತ್ತು ರಜೆಯ ವಿಸ್ತರಣೆಯಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ, "ಕೆಎಸ್ಪಿಎಸ್ಟಿಎ ಕಾರ್ಯದರ್ಶಿ ಎನ್ ಚಂದ್ರು ಐಎಎನ್ಎಸ್ ಗೆ ವಿವರಿಸಿದ್ದಾರೆ.