ಜುಲೈ 24ರವರೆಗೂ ಬಿಬಿಂಎಪಿ ಕೇಂದ್ರ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ!

ನಗರದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ.24ರವರೆಗೂ ಬಿಬಿಎಂಪಿ ಕೇಂದ್ರ ಕಚೇರಿಗೆ ಸಾರ್ವಜನಿಕರ ಪ್ರವೇಶವನ್ನು ಪಾಲಿಕೆ ನಿಷೇಧಿಸಿದೆ. 

Published: 09th July 2020 10:15 AM  |   Last Updated: 09th July 2020 12:18 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ನಗರದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ.24ರವರೆಗೂ ಬಿಬಿಎಂಪಿ ಕೇಂದ್ರ ಕಚೇರಿಗೆ ಸಾರ್ವಜನಿಕರ ಪ್ರವೇಶವನ್ನು ಪಾಲಿಕೆ ನಿಷೇಧಿಸಿದೆ. 

ಜುಲೈ 9 ರಿಂದ ಜುಲೈ.24ರವರೆಗೂ ಸಾರ್ವಜನಿಕರು ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡುವಂತಿಲ್ಲ. ದೂರುಗಳಿದ್ದರೆ ಸಾರ್ವಜನಿಕರು ಕಚೇರಿಯ ಮುಖ್ಯದ್ವಾರದಲ್ಲಿರುವ ಪೆಟ್ಟಿಗೆಯಲ್ಲಿ ಹಾಕಬಹುದಾಗಿದೆ. ಸಂಬಂಧಪಟ್ಟಂತಹ ಅಧಿಕಾರಿಗಳು ದೂರುಗಳನ್ನು ಪರಿಶೀಲನೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

ಸಾರ್ವಜನಿಕರು ಇಮೇಲ್ contactusbbmp@gmail.com, ವಾಟ್ಸ್ಆ್ಯಪ್ ಸಂಖ್ಯೆ 9480685700, ಟ್ವಿಟರ್ @bbmpcomm, ಫೇಸ್ಬುಕ್ ಹಾಗೂ www.bbmp.sahaya.in. ಮೂಲಕ ಬಿಬಿಎಂಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. 

ಬಿಬಿಎಂಪಿ ಕಚೇರಿಯ ಸಿಬ್ಬಂದಿಗಳು ಹಲವು ಕಂಟೈನ್ಮೆಂಟ್ ಢೋನ್ ಗಳಿಗೆ ಭೇಟಿ ಹಾಗೂ ಸರ್ಕಾರಿ ಕಚೇರಿಗಳೊಂದಿಗೆ ಸಭೆಗಳನ್ನು ನಡೆಸುತ್ತಿರುತ್ತಾರೆ. ಹೀಗಾಗಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ಮಾಹಿರಿ ನೀಡಿದ್ದಾರೆ 

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp