ಬೆಂಗಳೂರು: ಒಂದೇ ದಿನ ದಾಖಲೆಯ 1,373 ಮಂದಿಯಲ್ಲಿ ಪಾಸಿಟಿವ್, ಸೋಂಕಿತರ ಸಂಖ್ಯೆ 13,883ಕ್ಕೆ ಏರಿಕೆ

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ದಾಖಲೆಯ 1,373 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ನಿನ್ನೆ ಪತ್ತೆಯಾದ 2,228 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿಯೇ ಅರ್ಧದಷ್ಟು ಸೋಂಕು ಪತ್ತೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ದಾಖಲೆಯ 1,373 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ನಿನ್ನೆ ಪತ್ತೆಯಾದ 2,228 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿಯೇ ಅರ್ಧದಷ್ಟು ಸೋಂಕು ಪತ್ತೆಯಾಗಿದೆ. 

ಜು.5ರಂದು 1,235 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಆ ದಾಖಲೆಯನ್ನು ಮೀರಿದ ಸೋಂಕಿತರ ಗುರುವಾರ ಪತ್ತೆಯಾಗಿದ್ದಾರೆ. ಈ ಮೂಲಕ ನಗರದ ಸೋಂಕಿತರ ಸಂಖ್ಯೆ 13,883ಕ್ಕೆ ತಲುಪಿದೆ. 

ಇನ್ನು ಗುರುವಾರ ಒಂದೇ ದಿನ 606 ಮಂದಿ ಸೋಂಕಿತರು ಗುಣಮುಕರಾಗಿ ವಿವಿಧ ಆಸ್ಪತ್ರೆಗಳಿಂಗ ಬಿಡುಗಡೆಯಾಗಿದ್ದಾರೆ. ಇದು ಬೆಂಗಳೂರಿನಲ್ಲಿ ಒಂದೇ ದಿನ ಬಿಡುಗಡೆಯಾದ ಅತೀ ದೊಡ್ಡ ಸಂಖ್ಯೆಯಾಗಿದೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 2,843ಕ್ಕೆ ಏರಿಕೆಯಾಗಿದೆ. ಕಳೆದ ಬುಧವಾರ ಒಂದೇ ದಿನ 418 ಮಂದಿ ಬಿಡುಗಡೆಯಾಗಿದ್ದರು. ಇದು ಇವರೆಗೆ ಬಿಡುಗಡೆಯಾದ ಅತೀ ಹೆಚ್ಚಿನ ಸಂಖ್ಯೆಯಾಗಿತ್ತು. 

ಇನ್ನೂ 10,870 ಸಕ್ರಿಯ ಪ್ರಕರಣಗಳಿವೆ. 292 ಮಂದಿ ವಿವಿಧ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಬೆಂಗಳೂರಿನಲ್ಲಿ ಸೋಂಕಿತರ ಸಂಪರ್ಕ ಪತ್ತೆಹಚ್ಚುವ ಕಾರ್ಯ ಹೆಚ್ಚಬೇಕಿದೆ. ನಗರದಲ್ಲಿ ಈ ಕಾರ್ಯ ಶೇ.100ರಷ್ಟು ನಡೆಯುತ್ತಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ಸಂಪರ್ಕ ಪತ್ತೆಹಚ್ಚುತ್ತಿರುವ ಜನರೇ ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಮಾದರಿ ಹಾಗೂ ಬೂತ್ ಮಟ್ಟದ ಸಂಪರ್ಕ ಪತ್ತೆಹಚ್ಚಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.49ರಷ್ಟಿದ್ದರೆ, ಬೆಂಗಳೂರಿನಲ್ಲಿನ 1.28ರಷ್ಟಿದೆ. ನಿನ್ನೆ ಸಾವನ್ನಪ್ಪಿದ್ದ 17 ಮಂದಿ ಸಾರಿ ಅಥವಾ ಐಎಲ್ಐ ಪ್ರಕರಣಗಳಾಗಿವೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com