ನಗರದಲ್ಲಿ ಅತಿದೊಡ್ಡ ಕೊರೋನಾ ಆರೈಕೆ ಕೇಂದ್ರ: ಸರ್ಕಾರದ ಅನಗತ್ಯ ಖರ್ಚುಗಳ ವಿರುದ್ಧ ಅಧಿಕಾರಿಗಳ ಅಸಮಾಧಾನ!

ಬೆಂಗಳೂರು ತುಮಕೂರು ರಸ್ತೆಯಲ್ಲಿರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆ ಸಾಮರ್ಥ್ಯವುಳ್ಳ ದೇಶದ ಅತೀದೊಡ್ಡ ಕೊರೋನಾ ಆರೈಕೆ ಕೇಂದ್ರ ತಲೆ ಎತ್ತುತ್ತಿದ್ದು, ಈ ನಡುವಲ್ಲೇ ಸರ್ಕಾರ ಅನಗತ್ಯ ಖರ್ಚುಗಳ ಕುರಿತು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

Published: 10th July 2020 01:21 PM  |   Last Updated: 10th July 2020 01:31 PM   |  A+A-


Covid care centre, Bengaluru

ಕೋವಿಡ್ ಕೇರ್ ಕೇಂದ್ರ, ಬೆಂಗಳೂರು

Posted By : Manjula VN
Source : The New Indian Express

ಬೆಂಗಳೂರು: ಬೆಂಗಳೂರು ತುಮಕೂರು ರಸ್ತೆಯಲ್ಲಿರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆ ಸಾಮರ್ಥ್ಯವುಳ್ಳ ದೇಶದ ಅತೀದೊಡ್ಡ ಕೊರೋನಾ ಆರೈಕೆ ಕೇಂದ್ರ ತಲೆ ಎತ್ತುತ್ತಿದ್ದು, ಈ ನಡುವಲ್ಲೇ ಸರ್ಕಾರ ಅನಗತ್ಯ ಖರ್ಚುಗಳ ಕುರಿತು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು, ಕೋವಿಡ್ ವಿರುದ್ಧ ಹೋರಾಡಲು ಉಪಕರಣಗಳಿಗಾಗಿ ಸರ್ಕಾರ ಹೆಚ್ಚು ಖರ್ಚು ಮಾಡುತ್ತಿದೆ. ಹಾಸಿಗೆ ಮತ್ತು ಹಾಸಿಗೆಯ ಹೊದಿಕೆಗಳನ್ನು ಬಾಡಿಗೆಗೆ ಪಡೆದುಕೊಳ್ಳುವ ಬದಲಿಗೆ ಖರೀದಿ ಮಾಡುವುದು ಉತ್ತಮವಾಗಿರುತ್ತದೆ. ಏಕೆಂದರೆ, ಈ ಹಾಸಿಗೆಗಳನ್ನು ಇನ್ನೂ 3-4 ತಿಂಗಳು ಕಾಲ ಬಳಕೆ ಮಾಡಬೇಕಾಗುತ್ತದೆ. 

ಕೋವಿಡ್ ಕೇರ್ ಕೇಂದ್ರ ಸ್ಥಾಪನೆ ಮಾಡಲು ನಿರ್ಧರಿಸಿರುವ ಸರ್ಕಾರ 20,000 ಬೆಡ್ ಗಳ ವ್ಯವಸ್ಥೆ ಕಲ್ಪಿಸುತ್ತಿದೆ. ಈ ಹಾಸಿಗೆಗಳನ್ನು ಬಾಡಿಗೆಗೆ ಪಡೆಯುತ್ತಿದೆ. ಇದು ನಾಲ್ಕು ಪಟ್ಟು ಹೆಚ್ಚು ಹಣ ನೀಡಿದಂತಾಗುತ್ತದೆ. ಬಾಡಿಗೆ ಬದಲು ಇದನ್ನು ಸರ್ಕಾರ ಖರೀದಿ ಮಾಡಬಹುದಾಗಿದೆ. ಖರೀದಿ ಮಾಡಿ ಬಳಕೆ ಮಾಡಿದ ಬಳಿಕವೂ ಇವುಗಳನ್ನು ಆಸ್ಪತ್ರೆ ಹಾಗೂ ಹಾಸ್ಟೆಲ್ ಗಳಲ್ಲಿ ಬಳಕೆ ಮಾಡಬಹುದಾಗಿದೆ. ಈ ಕುರಿತು ಅಧಿಕಾರಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೂ ಕೂಡ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ. 

ಆದರೆ, ಈ ಬಗ್ಗೆ ವಿಜಯ್ ಭಾಸ್ಕರ್ ಅವರನ್ನು ಸಂಪರ್ಕಿಸಲು ಯತ್ನ ನಡೆಸಲಾಗಿದ್ದು, ಮುಖ್ಯ ಕಾರ್ಯದರ್ಶಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. 

ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಕಷ್ಟದ ಕಾಲದಲ್ಲಿ ಸಹಕಾರ, ವಿರೋಧಪಕ್ಷದ ಜವಾಬ್ದಾರಿ ಎಂಬ ಕಾರಣಕ್ಕೆ ಹೆಚ್ಚುಕಡಿಮೆ 3 ತಿಂಗಳು ಸರ್ಕಾರದ ಅಕ್ರಮ- ವೈಫಲ್ಯಗಳನ್ನು ಬಹಿರಂಗವಾಗಿ ಪ್ರಶ್ನಿಸದೆ ಪತ್ರಗಳನ್ನಷ್ಟೇ ಬರೆದಿದ್ದೆ. ಮುಖ್ಯಮಂತ್ರಿ ಬಿಎಸ್‌ವೈ ತಿದ್ದಿಕೊಳ್ಳದೆ ಇದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp