ಕಾರ್ಕಳ: ಆಭರಣ ಪೆಟ್ಟಿಗೆ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ, 15 ಲಕ್ಷ ರು. ಸ್ವತ್ತು ನಷ್ಟ

ಆಭರಣ ಪೆಟ್ಟಿಗೆ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ ಪರಿಣಾಮ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ. 

Published: 10th July 2020 05:36 PM  |   Last Updated: 10th July 2020 05:57 PM   |  A+A-


ಬೆಂಕಿ ಆಕಸ್ಮಿಕಕ್ಕೆ ಒಳಗಾದ ಘಟಕ

Posted By : Raghavendra Adiga
Source : Online Desk

ಕಾರ್ಕಳ: ಆಭರಣ ಪೆಟ್ಟಿಗೆ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ ಪರಿಣಾಮ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ. 

ಕಾರ್ಕಳದ ಮುಂಡ್ಕೂರಿನಲ್ಲಿ ಇರುವ ಆಭರಣ ಪೆಟ್ಟಿಗೆ ತಯಾರಿಕೆ ಘಟಕದಲ್ಲಿ ಅನಾಹುತ ಸಂಭವಿಸಿದ್ದು ಗ್ರಾಮದ ಸುಧೀರ್ ಶೆಣೈಗೆ ಸೇರಿದ  ಘಟಕವಿದಾಗಿದೆ. ಲಾಕ್ ಡೌನ್ ಕಾರಣದಿಂದ  ಮಾರಾಟಮ್ವಾಗದೇ ಉಳಿದಿದ್ದ ಸಿದ್ಧ ವಸ್ತುಗಳು, ಕಚ್ಚಾ ವಸ್ತುಗಳು ಸೇರಿ ಕಂಪ್ಯೂಟರ್ ಗಳು ಸುಟ್ಟು ಕರಕಲಾಗಿದೆ. ಘಟನೆಯಿಂದ ಸರಿ ಸುಮಾರು 15 ಲಕ್ಷ ರು, ನಷ್ಟವಾಗಿದೆ  ಎಂದು ಅಂದಾಜಿಸಲಾಗಿದೆ. 

ಶುಕ್ರವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp