ಖಾಸಗಿ ಆಸ್ಪತ್ರೆಗಳು ತಮ್ಮದೇ ಕೋವಿಡ್ ಕೇರ್ ಸೆಂಟರ್‌ ಆರಂಭಿಸಲು ಆರೋಗ್ಯ ಇಲಾಖೆ ಆದೇಶ

ಖಾಸಗಿ ಆಸ್ಪತ್ರೆಗಳಿಗೆ ತಮ್ಮದೇ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಅನುಮತಿ ನೀಡಿ ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಿಗೆ ತಮ್ಮದೇ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಅನುಮತಿ ನೀಡಿ ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ(ಕೆಪಿಎಂಇ) ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳಿಗೆ ಈ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಹೋಟೆಲ್ ಮತ್ತು ವಸತಿ ಸೌಲಭ್ಯಗಳ ಸಹಯೋಗ ಪಡೆಯಬಹುದು. ಇದಕ್ಕಾಗಿ ಪ್ರತ್ಯೇಕ ಪರವಾನಗಿಯ ಅಗತ್ಯವಿಲ್ಲ. ಆದರೆ, ಈ ವ್ಯವಸ್ಥೆಯ ಕುರಿತು ಸಂಬಂಧಿಸಿದ ಬಿಬಿಎಂಪಿ ಅಥವಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಇಲ್ಲವೇ ಇಮೇಲ್ ಮೂಲಕ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಆಸ್ಪತ್ರೆಗಳು ಹೋಟೆಲ್, ಹಾಸ್ಟೆಲ್, ವಸತಿ ವ್ಯವಸ್ಥೆ ಇರುವ ಸ್ಥಳಗಳನ್ನು ಗುರುತಿಸಿ ರೋಗ ಲಕ್ಷಣವಿಲ್ಲದ ಅಥವಾ ಅತಿ ಕಡಿಮೆ ಲಕ್ಷಣ ಇರುವ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಆರ್ಥಿಕ ಬಜೆಟ್‌ನ ಹೋಟೆಲ್‌ ಗೆ ದಿನವೊಂದಕ್ಕೆ 8 ಸಾವಿರ ರೂ., 3 ಸ್ಟಾರ್ ಹೋಟೆಲ್‌ ಗೆ 10 ಸಾವಿರ ರೂ., 5 ಸ್ಟಾರ್ ಹೋಟೆಲ್‌ಗೆ ದಿನವೊಂದಕ್ಕೆ 12 ಸಾವಿರ ರೂ. ದರ ನಿಗದಿಪಡಿಸಬಹುದು ಎಂದು ಆದೇಶ ತಿಳಿಸಿದೆ. 

ಈ ಹೋಟೆಲ್‌ಗಳಲ್ಲಿನ ಸಿಬ್ಬಂದಿ ಈ ರೋಗಿಗಳೊಂದಿಗೆ ಸಂಪರ್ಕ ಹೊಂದಲು ಅವಕಾಶ ಕಲ್ಪಿಸಬಾರದು ಎಂದು ಆದೇಶ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com