ಮಂಗಳೂರು: ಎಎಸ್‌ಐ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ, ಆರೋಪಿ ಬಂಧನ 

ಜುಲೈ 9 ರ ಗುರುವಾರ ತಡರಾತ್ರಿ ನಡೆದ ಘಟನೆಯಲ್ಲಿ, ಬಂಟ್ವಾಳ ನಗರ ಠಾಣೆ  ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ), ಶೈಲೇಶ್ ಟಿ ಮತ್ತು ಇತರ ಮೂವರು ಪೊಲೀಸರ ಮೇಲೆ ತಾಲೂಕಿನ ಮೇಲ್ಕಾರ್ ಎಂಬಲ್ಲಿ  ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ.
ಬಂಟ್ವಾಳ ನಗರ ಠಾಣೆ  ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ), ಶೈಲೇಶ್ ಟಿ
ಬಂಟ್ವಾಳ ನಗರ ಠಾಣೆ  ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ), ಶೈಲೇಶ್ ಟಿ

ಮಂಗಳೂರು: ಜುಲೈ 9 ರ ಗುರುವಾರ ತಡರಾತ್ರಿ ನಡೆದ ಘಟನೆಯಲ್ಲಿ, ಬಂಟ್ವಾಳ ನಗರ ಠಾಣೆ  ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ), ಶೈಲೇಶ್ ಟಿ ಮತ್ತು ಇತರ ಮೂವರು ಪೊಲೀಸರ ಮೇಲೆ ತಾಲೂಕಿನ ಮೇಲ್ಕಾರ್ ಎಂಬಲ್ಲಿ  ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು ಇದರ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353, 504, 506, 332, 307 ಮತ್ತು 427 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಕರ್ನಾಟಕ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆಯ ಸೆಕ್ಷನ್‌ಗಳನ್ನು ಆರೋಪಿಗಳ ವಿರುದ್ಧ ಹೊರಿಸ;ಲಾಗಿದೆ. 

ಜನರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಅವರ ಮೇಲೂ  ಹಲ್ಲೆ ನಡೆಸಿದ್ದಾನೆ, ಆರೋಪಿಯನ್ನು ಗೋಲ್ತಮಜಲು ಗ್ರಾಮದ ಅಬ್ದುಲ್ ಸಲಾಮ್ (28) ಎಂದು ಗುರುತಿಸಲಾಗಿದೆ. ಜನರು ಥಳಿಸಿದ್ದ ಪರಿಣಾಮ ಆರೋಪಿಗೆ ಸಹ ಗಾಯಗಳಾಗಿದ್ದು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಲಾಗುತ್ತಿದೆ.

ಮೇಲ್ಕಾರ್ ಬಂಟ್ವಾಳ ನಗರ ಠಾಣೆಯ ವ್ಯಾಪ್ತಿಯಲ್ಲಿ ಕಾನ್‌ಸ್ಟೆಬಲ್‌ಗಳೊಂದಿಗೆ ಲಾರಿ ಚಾಲಕರು ಮತ್ತು ಜನರು ಘರ್ಷಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಾಗ ಪೊಲೀಸ್ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದಾರೆ.  ಆಗ ಕೈಯಲ್ಲಿ ಕಬ್ಬಿಣದ ರಾಡ್ ನಂತಹಾ ಮಾರಕಾಸ್ತ್ರಗಳನ್ನು ಹಿಡಿದಿದ್ದ ಅಬ್ದುಲ್ ಸಲಾಮ್ ಬಳಿ ಪೊಲೀಸರು ಹೋದಾಗ, ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ಆತ ಡ್ಡಿಯನ್ನುಂಟು ಮಾಡಿದ್ದಾನೆ. ಅಲ್ಲದೆ ನಿಂದನೀಯ ಪದಬಳಕೆ ಮಾಡಿದ್ದಾನೆ.  ನಂತರ ಆತ ತನ್ನ ಕಬ್ಬಿಣದ ರಾಡ್‌ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಅವನು ತನ್ನ ರಾಡ್‌ನಿಂದ ಪೊಲೀಸ್ ವಾಹನವನ್ನು ಹೊಡೆದು ಜಖಂ ಗೊಳಿಸಿದ್ದಾನೆ. 

ಅಲ್ಲಿ ಜಮಾಯಿಸಿದ ಜನರು ಅವನ ಅಶಿಸ್ತಿನ ನಡವಳಿಕೆಯನ್ನು ತಡೆಯಲು ಪ್ರಯತ್ನಿಸಿದರು. ಹಲ್ಲೆಗೊಳಗಾದ ಶೈಲೇಶ್ ಟಿ ಮತ್ತು ಇತರ ಮೂವರು ಪೊಲೀಸರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com