ಬೆಂಗಳೂರಿನ ಪ್ರತಿ ವಾರ್ಡಿಗೊಂದರಂತೆ ನಾನ್ ಕೋವಿಡ್ ಆಸ್ಪತ್ರೆ ತೆರೆಯಿರಿ- ಜಮೀರ್ ಅಹ್ಮದ್  

ಸಕಾಲದಲ್ಲಿ  ಚಿಕಿತ್ಸೆ ಸಿಗದೆ ಕೊರೋನಾದ 10 ಪಟ್ಟು ಇತರೆ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ.  ಆದ್ದರಿಂದ ಬೆಂಗಳೂರಿನ ಪ್ರತೀ ವಾರ್ಡಿಗೊಂದರಂತೆ ಸರ್ಕಾರ ನಾನ್‌ ಕೋವಿಡ್   ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಂಡು, ಜನರ ಜೀವ ರಕ್ಷಿಸುವಂತೆ  ಚಾಮರಾಜಪೇಟೆ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಝಡ್.ಜಮೀರ್ ಅಹ್ಮದ್ ಆಗ್ರಹಿಸಿದ್ದಾರೆ.

Published: 10th July 2020 10:46 PM  |   Last Updated: 10th July 2020 10:48 PM   |  A+A-


zameer1

ಶಾಸಕ ಜಮೀರ್ ಅಹ್ಮದ್ ಖಾನ್

Posted By : Nagaraja AB
Source : UNI

ಬೆಂಗಳೂರು: ಸಕಾಲದಲ್ಲಿ  ಚಿಕಿತ್ಸೆ ಸಿಗದೆ ಕೊರೋನಾದ 10 ಪಟ್ಟು ಇತರೆ ರೋಗಗಳಿಗೆ ಜನರು ಬಲಿಯಾಗುತ್ತಿದ್ದಾರೆ.ಆದ್ದರಿಂದ ಬೆಂಗಳೂರಿನ ಪ್ರತೀ ವಾರ್ಡಿಗೊಂದರಂತೆ ಸರ್ಕಾರ ನಾನ್‌ ಕೋವಿಡ್  ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಂಡು, ಜನರ ಜೀವ ರಕ್ಷಿಸುವಂತೆ  ಚಾಮರಾಜಪೇಟೆ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಝಡ್.ಜಮೀರ್ ಅಹ್ಮದ್ ಆಗ್ರಹಿಸಿದ್ದಾರೆ.

ಕೊರೋನಾ  ಪರೀಕ್ಷೆಯ ವರದಿ ದೊರೆಯುವುದು ವಿಳಂಬವಾಗುತ್ತಿರುವುದರಿಂದ ಜನರಲ್ಲಿ ಆತಂಕ  ಸೃಷ್ಟಿಯಾಗಿದೆ. ಇದನ್ನು ದೂರ ಮಾಡಲು ಆದಷ್ಟು ಶೀಘ್ರ ವರದಿಯ ಫಲಿತಾಂಶ ದೊರಕುವಂತೆ ಕ್ರಮ ಕೈಗೊಳ್ಳಬೇಕು, ಖಾಸಗೀ ಆಸ್ಪತ್ರೆಗಳಲ್ಲಿ  ಚಿಕಿತ್ಸೆಗೆ ನಿಗದಿ ಮಾಡಿರುವ  ಶುಲ್ಕ ಬಡ ಜನರಿಗೆ ಹೊರೆಯಾಗುತ್ತಿದ್ದು, ಅದನ್ನು ಮರುಪರಿಶೀಲನೆ ಮಾಡಬೇಕೆಂದು  ಸರ್ಕಾರಕ್ಕೆ ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.

 

ನಗರದಲ್ಲಿ ಕೊರೊನಾ ಪ್ರಕರಣಗಳು  ನಿರಂತರ ಹೆಚ್ಚಾಗುತ್ತಿದೆ. ವೆಂಟಿಲೇಟರ್, ಆಕ್ಸಿಜನ್ ಸಿಗದೆ ಹಲವು ಮಂದಿ ಪ್ರಾಣ  ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಎಲ್ಲಾ ರೀತಿಯ ಅತ್ಯಾಧುನಿಕ‌ ಸೌಲಭ್ಯವಿರುವ  ವಿಕ್ಟೋರಿಯಾ ಆಸ್ಪತ್ರೆಯನ್ನು ಕೇವಲ ಕ್ವಾರೆಂಟೈನ್ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿರುವ  ಅಷ್ಟೊಂದು ಸೂಕ್ತವಲ್ಲ ಎಂದಿರುವ ಜಮೀರ್, ಇವೇ ಮನವಿ ಸಲಹೆಯನ್ನು 
ಮುಖ್ಯಮಂತ್ರಿಗಳಿಗೆ  ಸಲ್ಲಿಸಲು ಸಭೆ ನಿಗದಿಯಾಗಿತ್ತಾದರೂ ಕಾರಣಾಂತರಗಳಿಂದ ಸಭೆ ರದ್ದಾಯಿತು ಎಂದು ಜಮೀರ್  ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp