ವಲಸಿಗರ ಕುರಿತು ವಾಸ್ತವಿಕ ವರದಿ ಸಲ್ಲಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು ನಗರದಲ್ಲಿಯೇ ಉಳಿಯಲು ನಿರ್ಧಾರಕೈಗೊಂಡಿರುವ ವಲಸೆ ಕಾರ್ಮಿಕರ ಕುರಿತು ವಾಸ್ತವಿಕ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನಗರದಲ್ಲಿಯೇ ಉಳಿಯಲು ನಿರ್ಧಾರಕೈಗೊಂಡಿರುವ ವಲಸೆ ಕಾರ್ಮಿಕರ ಕುರಿತು ವಾಸ್ತವಿಕ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ. 

ಕರ್ನಾಟಕದಲ್ಲಿರುವ ಹೊರ ರಾಜ್ಯಗಳ ವಲಸೆ ಕಾರ್ಮಿಕರು ತವರಿಗೆ ತೆರಳಲು ಅನುಕೂಲವಾಗುವಂತೆ ಕಾರ್ಯಚರಣೆಯಲ್ಲಿದ್ದ ವಿಶೇಷ ಶ್ರಮಿಕ್ ರೈಲು ಸೇವೆ ಸ್ಥಗಿತಗೊಳಿಸಿರುವ ನಿರ್ಧಾರ ಕುರಿತು ಸಲ್ಲಿಕೆಯಾಗಿದ್ದ ವಿವಿಧ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ರೈಲು ಸೇವೆ ಸ್ಥಗಿತಗೊಳಿಸಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹಾಗೂ ಬೆಂಗಳೂರು ನಗರದಲ್ಲಿಯೇ ಉಳಿಯಲು ನಿರ್ಧಾರಕೈಗೊಂಡಿರುವ ವಲಸೆ ಕಾರ್ಮಿಕರ ಕುರಿತು ವಾಸ್ತವಿಕ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. 

ಈ ವೇಳೆ ಸರ್ಕಾರಿ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ, ಕಳೆದ 2 ತಿಂಗಳಿಂದ ರಾಜ್ಯದಲ್ಲಿ ವಿಶೇಷ ಶ್ರಮಿಕ್ ರೈಲುಗಳು ಸೇವೆ ಸಲ್ಲಿಸುತ್ತಿವೆ. ರಾಜ್ಯದಲ್ಲಿ ಸಾಕಷ್ಟು ವಲಸೆ ಕಾರ್ಮಿಕರು ಉಚಿತವಾಗಿ ಶ್ರಮಿಕ್ ರೈಲು ಮೂಲಕ ತವರಿಗೆ ಹೋಗಿದ್ದಾರೆ. ಆ ರೈಲುಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡದಿರಲು ರಾಜ್ಯ ಸರ್ಕಾರ ಸದ್ಯ ನಿರ್ಧರಿಸಿದೆ. ಅದರಂತೆಯೇ ರಾಜ್ಯದಲ್ಲಿದ್ದ ಎಲ್ಲಾ ಮಸ್ಟರಿಂಗ್ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com