ಕೊರೋನಾ ಗೆದ್ದ 93 ವರ್ಷದ ವೃದ್ಧ: ಸೋಂಕಿನಿಂದ ಚೇತರಿಸಿಕೊಂಡ ರಾಜ್ಯದ 3ನೇ ಹಿರಿಯ ವ್ಯಕ್ತಿ

ಕೊರೋನಾದಿಂದ ವೃದ್ಧರಿಗೆ ಅಪಾಯ ಹೆಚ್ಚು ಎಂಬ ಸುದ್ದಿಗಳ ನಡುವೆಯೂ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ 93 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ಬೆಳವಣಿಗೆ ಇತರೆ ಸೋಂಕಿತರಲ್ಲಿ ಭರವಸೆ ಮೂಡುವಂತೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾದಿಂದ ವೃದ್ಧರಿಗೆ ಅಪಾಯ ಹೆಚ್ಚು ಎಂಬ ಸುದ್ದಿಗಳ ನಡುವೆಯೂ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ 93 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ಬೆಳವಣಿಗೆ ಇತರೆ ಸೋಂಕಿತರಲ್ಲಿ ಭರವಸೆ ಮೂಡುವಂತೆ ಮಾಡಿದೆ. 

ಈ ಮೂಲಕ ಕೊರೋನಾ ಜಯಿಸಿದ ರಾಜ್ಯದ 3ನೇ ಅತೀ ಹಿರಿಯ ವ್ಯಕ್ತಿ ಎನಿಸಿದ್ದಾರೆ. ವೃದ್ಧ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೂ ಸಕಾಲದಲ್ಲಿ ದೊರಕಿದ ಚಿಕಿತ್ಸೆಯಿಂದಾಗಿ ಕೊರೋನಾ ಮಣಿಸಿದ್ದಾರೆ. 

ಇತ್ತೀಚೆಗಷ್ಟೇ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ 96 ವರ್ಷದ ಅಜ್ಜಿ ಗುಣಮುಖರಾಗಿ, ಕೊರೋನಾ ಗೆದ್ದ 2ನೇ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ 99 ವರ್ಷದ ವೃದ್ಧ ಮಹಿಳೆ ಚೇತರಿಸಿಕೊಂಡು ಕೊರೋನಾ ಗೆದ್ದ ಮೊದಲ ಹಿರಿಯ ಮಹಿಳೆ ಎನಿಸಿಕೊಂಡಿದ್ದರು. 

ಕೆಲ ದಿನಗಳ ಹಿಂದಷ್ಟೇ ವೃದ್ಧ ವ್ಯಕ್ತಿಯಲ್ಲಿ ಜ್ವರ ಹಾಗೂ ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅವರಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ನಂತರ ಯಶವಂತಪುರದ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಡಾ.ಉಲ್ಲಾಸ್ ಗೋಪಾಲ್ ಕೃಷ್ಣ ಹಾಗೂ ಅವರ ತಂಡ ಸತತ 19 ದಿನಗಳ ಕಾಲ ಚಿಕಿತ್ಸೆ ನೀಡಿತ್ತು, ವಾರಗಳ ಕಾಲ ಆಕ್ಸಿಜನ್ ನೀಡಿತ್ತು. ಇದರಿಂದಾಗಿ ಇದೀಗ ವೃದ್ಧ ವ್ಯಕ್ತಿ ಕೊರೋನಾ ಮಣಿಸಿ, ಗುಣಮುಖರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com