ಬೆಂಗಳೂರಷ್ಟೇ ಅಲ್ಲ, ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಜೊತೆಗೆ ಐಸೋಲೇಷನ್ ವಾರ್ಡ್ ಸ್ಥಾಪಿಸಿ: ರೈತರ ಸಂಘಟನೆಗಳ ಒಕ್ಕೂಟ ಆಗ್ರಹ

ಕೊರೋನಾ ತುರ್ತು ಪರಿಸ್ಥಿತಿ ಎದುರಿಸಲು ಬೆಂಗಳೂರಷ್ಟೇ ಅಲ್ಲ, ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಜೊತೆಗೆ ಐಸೋಲೇಷನ್ ವಾರ್ಡ್'ಗಳನ್ನು ಸ್ಥಾಪಿಸಿ ಎಂದು ರೈತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ತುರ್ತು ಪರಿಸ್ಥಿತಿ ಎದುರಿಸಲು ಬೆಂಗಳೂರಷ್ಟೇ ಅಲ್ಲ, ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಜೊತೆಗೆ ಐಸೋಲೇಷನ್ ವಾರ್ಡ್'ಗಳನ್ನು ಸ್ಥಾಪಿಸಿ ಎಂದು ರೈತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. 

ತಾಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆಗಳ ಕೊರತೆಯಿದ್ದು, ಅನಿವಾರ್ಯವಾಗಿ ರೋಗಿಗಳು ಜಿಲ್ಲಾ ಆಸ್ಪತ್ರೆಗಳಿಗೆ ತೆರಳುವಂತಾಗಿದೆ. ಇದರಿಂದ ಜಿಲ್ಲಾ ಆಸ್ಪತ್ರೆಗಳ ಮೇಲೆ ಹೊರೆ ಹೆಚ್ಚಾದಂತಾಗಿದೆ. ರಾಜ್ಯ ಸರ್ಕಾರಕ್ಕೆ ಬೆಂಗಳೂರಷ್ಟೇ ಕೇಂದ್ರಿತವಾಗಿದೆ. ಕೇವಲ ರಾಜಧಾನಿಯಷ್ಟೇ ಅಲ್ಲದೆ, ಸರ್ಕಾರ ಗ್ರಾಮೀಣ ಪ್ರದೇಶಗಳತ್ತ ಕೂಡ ಗಮನಹರಿಸಬೇಕಿದೆ ಎಂದು ರೈತಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರ್ಬುರ್ ಶಾಂತಕುಮಾರ್ ಅವರು ಹೇಳಿದ್ದಾರೆ. 

ಮೈಸೂರು, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರೂ ಕೂಡ ಬೆಂಗಳೂರು ಪರಿಸ್ಥಿತಿಯತ್ತ ಮಾತ್ರ ಗಮನ ಹರಿಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಬೆಂಗಳೂರಿನಲ್ಲಿ ಸಚಿವರು ಬಿಝಿಯಾಗಿರುವುದರಿಂದ ಜಿಲ್ಲೆಗಳು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಆದೇಶಗಳನ್ನು ಹಿಂತೆಗೆದುಕೊಂಡು ಜಿಲ್ಲಾ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಶಿಬಿರಗಳನ್ನು ನಡೆಸುವಂತೆ ನಿರ್ದೇಶಿಸಬೇಕು ಎಂದು ತಿಳಿಸಿದ್ದಾರೆ. 

ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಕುರಿತು ಮಾತನಾಡಿದ ಅವರು, ಸಾಕಷ್ಟು ವಿಮಾ ಕಂಪನಿಗಳು ತಮ್ಮ ಬೆಳೆಗಳಿಗೆವಿಮೆ ಮಾಡಿಸಿಕೊಳ್ಳುವಂತೆ ರೈತರನ್ನು ಆಕರ್ಷಿಸುವ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತಿವೆ. 2019-2020ರ ಸಾಲಿನ ರೂ.600 ಹಣ ಬರಬೇಕಿದ್ದು, ರೈತರೇಕೆ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು? ಈ ವರೆಗೂ 12 ಲಕ್ಷ ರೈತರು ತಮ್ಮ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಂಡಿದ್ದಾರೆ. ರೈತರನ್ನು ಲೂಟಿ ಮಾಡಲು ವಿಮಾ ಕಂಪನಿಗಳು ವಿಮೆ ಮಾಡಿಸಿಕೊಳ್ಳುವಂತೆ ರೈತರಿಗೆ ಬಲವಂತ ಮಾಡುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com