ಸೈಬರ್ ಕಳ್ಳರ ಕರಾಮತ್ತು: 1.5 ಸಾವಿರ ಹಿಂಪಡೆಯಲು ಹೋಗಿ 5.4 ಲಕ್ಷ ಕಳೆದುಕೊಂಡ ಬೆಂಗಳೂರು ವ್ಯಕ್ತಿ!

1,564  ರು. ಬೆಲೆಯ ಬ್ಲೂಟೂತ್ ಹೆಡ್‌ಫೋನ್ ಅನ್ನು ಇ-ಕಾಮರ್ಸ್ ಸೈಟ್ ನಲ್ಲಿ ಬುಕ್ ಮಾಡಿದ ನಂತರ ಆರ್ಡರ್ ಕ್ಯಾನ್ಸಲ್ ಮಾಡುವ ಪ್ರಕ್ರಿಯೆಯಲ್ಲಿ ವ್ಯಕ್ತಿಯೊಬ್ಬ 5.47 ಲಕ್ಷ ರೂ ಕಳೆದುಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರದಿಯಾಗಿದೆ. ಇದು ನಂಬಲು ತುಸು ಕಷ್ಟವೆನಿಸಿದೆ ಆದರೂ ಇದು ಸತ್ಯ.
ಸೈಬರ್ ಕಳ್ಳರ ಕರಾಮತ್ತು: 1.5 ಸಾವಿರ ಹಿಂಪಡೆಯಲು ಹೋಗಿ 5.4 ಲಕ್ಷ ಕಳೆದುಕೊಂಡ ಬೆಂಗಳೂರು ವ್ಯಕ್ತಿ!

ಬೆಂಗಳೂರು: 1,564  ರು. ಬೆಲೆಯ ಬ್ಲೂಟೂತ್ ಹೆಡ್‌ಫೋನ್ ಅನ್ನು ಇ-ಕಾಮರ್ಸ್ ಸೈಟ್ ನಲ್ಲಿ ಬುಕ್ ಮಾಡಿದ ನಂತರ ಆರ್ಡರ್ ಕ್ಯಾನ್ಸಲ್ ಮಾಡುವ ಪ್ರಕ್ರಿಯೆಯಲ್ಲಿ ವ್ಯಕ್ತಿಯೊಬ್ಬ 5.47 ಲಕ್ಷ ರೂ ಕಳೆದುಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರದಿಯಾಗಿದೆ. ಇದು ನಂಬಲು ತುಸು ಕಷ್ಟವೆನಿಸಿದೆ ಆದರೂ ಸತ್ಯ.

ಬೆಂಗಳೂರಿನ  ಅಶೋಕ್‌ನಗರ ನಿವಾಸಿ ವೆಂಕಟೇಶ ಎನ್ ಪಳನಕರ್  (37) ಎನ್ನುವವರು ಕಸ್ಟಮರ್ ಕೇರ್ ಸೆಂಟರ್ ಗೆ ಕರೆಮಾಡಿದಾಗ ಆನ್‌ಲೈನ್ ವಂಚಕರ ಬಲೆಗೆ ಬಿದ್ದಿದ್ದಾರೆ. ಅಲ್ಲದೆ  ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಪಳನಕರ್  ರೂ. 1,564  ಬೆಲೆಯ ಬ್ಲೂಟೂತ್ ಹೆಡ್‌ಫೋನ್ ಒಂದನ್ನು ಇ-ಕಾಮರ್ಸ್ ಪೋರ್ಟಲ್ ಮೂಲಕ ಖರೀದಿಸಿದ್ದಾರೆ. ಆದರೆ ಖರೀದಿಸಿದ ಬಳಿಕ ಮನಸ್ಸು ಬದಲಿಸಿ ಆರ್ಡರ್ ಕ್ಯಾನ್ಸಲ್ ಮಾಡಲು ಮುಂದಾಗಿದ್ದಾರೆ. ಆ ವೇಳೆ ವಂಚನೆಗೊಳಗಾಗಿದ್ದಾಗಿ ಸೈಬರ್ ಅಪರಾಧ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಅವರು ತಿಳಿಸಿದ್ದಾರೆ.

“ಹಣವನ್ನು ಮರುಪಾವತಿಸಲು, ನಾನು ವೆಬ್‌ಸೈಟ್‌ನಿಂದ ಒಂದು ಸಂಖ್ಯೆ ಪಡೆದಿದ್ದೆ. ಅದು ಕಸ್ಟಮರ್ ಕೇರ್ ಸಂಖ್ಯೆ ಎಂದು ಬಾವಿಸಿದ್ದೆ. ಆಗ ಅವರು ನನಗೆ ಸಪೋರ್ಟಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಅವರು ನನಗೆ ಸಲಹೆ ನೀಡಿದರು ನಾನು ಹಾಗೆಯೇ ಮಾಡಿದೆ.  ನಂತರ ಅವರು ಕೆಲವು ವಿವರಗಳನ್ನು ನೀಡಿದರು ಮತ್ತು ಅದನ್ನು ಆನ್‌ಲೈನ್ ವ್ಯಾಲೆಟ್ ಅಪ್ಲಿಕೇಶನ್‌ನಲ್ಲಿ ಭರ್ತಿ ಮಾಡಲು ನನ್ನನ್ನು ಕೇಳಿದರು. ಒಮ್ಮೆ ನಾನು ಅದನ್ನು ಮಾಡಿದ ನಂತರ, ನನ್ನ ಎರಡು ಬ್ಯಾಂಕ್ ಖಾತೆಗಳಿಂದ ಹಣ ಡೆಬಿಟ್ ಆಗಲು ಪ್ರಾರಂಭಿಸಿತು. ಅನೇಕ ವಹಿವಾಟುಗಳಲ್ಲಿ, ಎರಡು ಖಾತೆಗಳಿಂದ ಒಟ್ಟು 5,57,771 ರೂಗಳನ್ನು ಡೆಬಿಟ್ ಮಾಡಲಾಗಿದೆ, ”ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

10 ದಿನಗಳ ಅವಧಿಯಲ್ಲಿ ತನ್ನ ಖಾತೆಯಿಂದ ಮೊತ್ತ ಕಡಿತವಾಗಿರುವುದು ಅರಿತ ಪಳನಕರ್ ಸೈಬರ್ ಅಪರಾಧ ಶಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಪರ್ಸೋನೇಷನ್ ಹಾಗೂ  ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ವಂಚನೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

“ಅವರು ಬ್ರೌಸರ್‌ನಿಂದ ಫೋನ್ ಸಂಖ್ಯೆಯನ್ನು ಪಡೆದರು. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಜನರು ಅಧಿಕೃತ ವೆಬ್‌ಸೈಟ್‌ಗಳಲ್ಲಿ ನಮೂದಿಸಿರುವ ಸಂಖ್ಯೆಗಳನ್ನು ಮಾತ್ರ ಸಂಪರ್ಕಿಸಬೇಕು. ಇಲ್ಲದಿದ್ದರೆ, ಅವರು ಸೈಬರ್ ಕ್ರೈಂ ವಂಚಕರ ಜಾಲಕ್ಕೆ ಸಿಕ್ಕುವ ಸಾಧ್ಯತೆ ಇದೆ,  ”ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com