ತಮಿಳುನಾಡು ಎಸ್ಐ ಹತ್ಯೆ: ಬೆಂಗಳೂರಿನ ಇಬ್ಬರು ಸೇರಿ 6 ಮಂದಿ ವಿರುದ್ಧ ಎನ್ಐಎ ಚಾರ್ಜ್'ಶೀಟ್

ಜಿಹಾದ್'ನ ಭಾಗವಾಗಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆಗೈದಿದ್ದ ಪ್ರಕರಣ ಸಂಬಂಧ ಇಸಿಸಿ ಭಯೋತ್ಪಾದಕ ಹಾಗೂ ಬೆಂಗಳೂರಿನ ಇಬ್ಬರು ಸೇರಿ ಒಟ್ಟು 6 ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶುಕ್ರವಾರ ಜಾರ್ಜ್ ಶೀಟ್ ಸಲ್ಲಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಿಹಾದ್'ನ ಭಾಗವಾಗಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆಗೈದಿದ್ದ ಪ್ರಕರಣ ಸಂಬಂಧ ಇಸಿಸಿ ಭಯೋತ್ಪಾದಕ ಹಾಗೂ ಬೆಂಗಳೂರಿನ ಇಬ್ಬರು ಸೇರಿ ಒಟ್ಟು 6 ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶುಕ್ರವಾರ ಜಾರ್ಜ್ ಶೀಟ್ ಸಲ್ಲಿಸಿದೆ. 

ಬೆಂಗಳೂರಿನ ಮಹಬೂಬ್ ಪಾಷಾ (48), ಏಜಾಜ್ ಪಾಷಾ (46), ತಮಿಳುನಾಡಿನ ಅಬ್ದುಲ್ ಶಮೀಮ್ (30), ವೈ. ತೌಫೀಕ್ (27), ಖಾಜಾ ಮೊಹಿದ್ದೀನ್ (53) ಹಾಗೂ ಜಾಫರ್ ಅಲಿ (26) ಹೆಸರು ಆರೋಪ ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ. 

ಈ ಪೈಕಿ ಖಾಜಾ ಮೊಹಿದ್ದೀನ್ ಇಸಿಸ್ ಸದಸ್ಯನಾಗಿದ್ದಾನೆಂದು ಹೇಳಲಾಗುತ್ತಿದ್ದು, ಚೆನ್ನೈನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಈ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಜಿಹಾದ್ ನಡೆಸಿ, ಪೊಲೀಸರು ಸೇರಿ ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಸುವ ಗುರಿಯನ್ನು ಆರೋಪಿಗಳು ಹೊಂದಿದ್ದರು. ಇದರ ಭಾಗವಾಗಿ ಕಳೆದ ಜ.8ರಂದು ಕನ್ಯಾಕುಮಾರಿಯ ವಿಶೇಷ ಸಬ್ ಇನ್ಸ್ ಪೆಕ್ಟರ್ ವಿಲ್ಸನ್ ಅವರನ್ನು ಜ.8ರಂದು ಗುಂಡು ಹಾರಿಸಿ, ಇರಿದು ಹತ್ಯೆ ಮಾಡಿದ್ದರು ಎಂದು ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com