ಕೋವಿಡ್-19: 543 ಮಂದಿ ಸಾವಿನ ಪೈಕಿ 65 ಮಂದಿಯ ಸಾವಿನ ಕಾರಣ ಪತ್ತೆ ಹಚ್ಚಲಾಗಿದೆ- ಕೋವಿಡ್ ಸಮಿತಿ

ಕೊರೋನಾದಿಂದ ರಾಜ್ಯದಲ್ಲಿ 543 ಮಂದಿ ಬಲಿಯಾಗಿದ್ದು, ಇದರಲ್ಲಿ 65 ಮಂದಿಯ ಸಾವಿನ ಕಾರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಡಾ ಕೆ ಎಸ್ ಸತೀಶ್ ಅವರು ಶುಕ್ರವಾರ ಹೇಳಿದ್ದಾರೆ. 
ಸುಧಾಕರ್
ಸುಧಾಕರ್

ಬೆಂಗಳೂರು: ಕೊರೋನಾದಿಂದ ರಾಜ್ಯದಲ್ಲಿ 543 ಮಂದಿ ಬಲಿಯಾಗಿದ್ದು, ಇದರಲ್ಲಿ 65 ಮಂದಿಯ ಸಾವಿನ ಕಾರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಡಾ ಕೆ ಎಸ್ ಸತೀಶ್ ಅವರು ಶುಕ್ರವಾರ ಹೇಳಿದ್ದಾರೆ. 

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ನ ಡೆಸಿದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಡಾ.ಕೆ.ಎಸ್.ಸತೀಶ್ ಅವರು ಈ ಮಾಹಿತಿ ನೀಡಿದ್ದಾರೆ. 

ರಾಜ್ಯದಲ್ಲಿ ಪತ್ತೆಯಾಗಿರುವ ಶೇ.80ರಷ್ಟು ಪ್ರಕರಣಗಳು ಲಕ್ಷಣ ರಹಿತವಾಗಿದ್ದು, ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿಲ್ಲ. ಶೇ.2ರಷ್ಟು ಮಂದಿಗೆ ಮಾತ್ರ ಐಸಿಯು ಹಾಗೂ ವೆಂಟಿಲೇಟರ್, ಆ್ಯಂಟಿಬಯೋಟಿಕ್ಸ್ ಗಳ ಅಗತ್ಯವಿದೆ. ರಾಜ್ಯದಲ್ಲಿ ಸಾವನ್ನಪ್ಪಿರುವ ಬಹುತೇಕ ಮಂದಿ 60 ವರ್ಷ ಮೇಲ್ಪಟ್ಟವರೇ ಆಗಿದ್ದು, ದೀರ್ಘಕಾಲಿಕ ರೋಗಗಳಾಗ ಅನಿಯಂತ್ರಿತ ಮಧುಮೇಹ ಹಾಗೂ ಬಿಪಿಯಿಂದ ಬಳಲುತ್ತಿರುವವರಾಗಿದ್ದಾರೆಂದು ತಿಳಿಸಿದ್ದಾರೆ. 

ಕೇಸ್ ಶೀಟ್ ಅನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಲು ವೈದ್ಯರಿಗೆ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಕೋವಿಡ್ ಸಂಬಂಧಿತ ಸಾವುಗಳನ್ನು ವಿಶ್ಲೇಷಿಸಲು ಡೆತ್ ಆಡಿಟ್ ಸಮಿತಿಯು 24 ಗಂಟೆಗಳ ಒಳಗೆ ಮಾಹಿತಿಯನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಇಂತಹ ಸಾಫ್ಟ್'ವೇರ್ ಗಳಾವುದೂ ಇಲ್ಲದೆ, ಸಾವಿಗೆ ಕಾರಣಗಳನ್ನು ಹುಡುಕಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ ಎಂದಿದ್ದಾರೆ. 

1 ಲಕ್ಷ ಆ್ಯಂಟಿಜೆನ್ ಕಿಟ್ ಖರೀದಿ
ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಶನಿವಾರದಿಂದ ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಗಳ ಮೂಲಕ ತುರ್ತಾಗಿ ಪರೀಕ್ಷೆಗಳನ್ನು ನಡೆಸಲಿದೆ. ಕೊರೋನಾ ಸೋಂಕು ತಗುಲಿದೆಯೇ ಇಲ್ಲವೇ ಎನ್ನುವುದು ಕೇವಲ 20 ನಿಮಿಷಗಳಲ್ಲಿ ದೃಢಪಡಲಿದೆ. ಸರ್ಕಾರ 1 ಲಕ್ಷ ಕಿಟ್ ಖರೀದಿಸಿದ್ದು, ಅತೀ ಹೆಚ್ಚು ಸೋಂಕಿತರಿರುವ ಬೆಂಗಳೂರಿನಲ್ಲಿ 20,000 ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಸಚಿವ ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ. 

ರಾಜ್ಯಕ್ಕೆ ಈಗಾಗಲೇ 1 ಲಕ್ಷ ಆ್ಯಂಟಿಜೆನ್ ಕಿಟ್ ಗಳು ಬಂದಿವೆ. ಇನ್ನೂ 2 ಲಕ್ಷ ಕಿಟ್ ಗಳನ್ನು ತರಿಸಿಕೊಳ್ಳಲಿದ್ದೇವೆ. ಬೆಂಗಳೂರಿನಲ್ಲಿ 50,000 ಪರೀಕ್ಷೆ ನಡೆಸುವ ಯೋಜನೆ ಇದೆ ಎಂದರು. 

ಬಳಿಕ ಮಾತನಾಡಿದ ಸಚಿವ ಪಂಕಜ್ ಕುಮಾರ್ ಪಾಂಡೆಯವರು. 1 ಲಕ್ಷ ಕಿಟ್ ಗಳಲ್ಲಿ 50,000 ಕಿಟ್ ಗಳನ್ನು ಬೆಂಗಳೂರಿಗೆ ಮೀಸಲಿಡಲಾಗಿದೆ. ಉಳಿದ 50,000 ಕಿಟ್ ಗಳನ್ನು ವಿವಿಧ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಕೂಡಲೇ ಬೆಂಗಳೂರಿನಲ್ಲಿ 20,000 ಕಿಟ್ ಗಳನ್ನು ಬಳಕೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಇನ್ನುಳಿದ ಕಿಟ್ ಗಳನ್ನು ಉಪಯೋಗಿಸುತ್ತೇವೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com