ರೇವಾ ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್: ಕೇಂದ್ರ ಸಚಿವರ ಹೇಳಿಕೆಗೆ ಡಿಕೆಶಿ ಆಕ್ಷೇಪ

ಮಧ್ಯಪ್ರದೇಶದ ರೇವಾ ಪ್ರದೇಶದಲ್ಲಿನ 750 ಮೆ.ವ್ಯಾ. ಸೋಲಾರ್ ಪಾರ್ಕ್ ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್ ಎಂದು ಘೋಷಿಸಿರುವ ಕೇಂದ್ರ ವಿದ್ಯುತ್  ಸಚಿವರ ಹೇಳಿಕೆಗೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಲಾರ್ ಪಾರ್ಕ್ ಉದ್ಘಾಟನೆ ಕಾರ್ಯಕ್ರಮದ ಚಿತ್ರ
ಸೋಲಾರ್ ಪಾರ್ಕ್ ಉದ್ಘಾಟನೆ ಕಾರ್ಯಕ್ರಮದ ಚಿತ್ರ

ಬೆಂಗಳೂರು: ಮಧ್ಯಪ್ರದೇಶದ ರೇವಾ ಪ್ರದೇಶದಲ್ಲಿನ 750 ಮೆ.ವ್ಯಾ. ಸೋಲಾರ್ ಪಾರ್ಕ್ ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್ ಎಂದು ಘೋಷಿಸಿರುವ ಕೇಂದ್ರ ವಿದ್ಯುತ್  ಸಚಿವರ ಹೇಳಿಕೆಗೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮ್ಮ ಅವಧಿಯಲ್ಲಿ ಕರ್ನಾಟಕದಲ್ಲಿ ಮೂರು ವರ್ಷಗಳ ಹಿಂದೆಯೇ ರಾಜ್ಯದ ತುಮಕೂರು ಜಿಲ್ಲೆಯ  ಪಾವಗಡದಲ್ಲಿ 2 ಸಾವಿರ ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಪಾರ್ಕ್ ಮಾಡಿದ್ದು, ಈಗಾಗಲೇ  ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ಸುಮಾರು 13 ಸಾವಿರ ಎಕರೆ ಪ್ರದೇಶದಲ್ಲಿ ಈ ಪಾರ್ಕ್  ಮಾಡಲಾಗಿದ್ದು, ಯಾವುದೇ ರೈತರಿಂದ ಜಮೀನು ಖರೀದಿ ಮಾಡದೇ ಸೋಲಾರ್ ಪಾರ್ಕ್ ಮಾಡಲಾಗಿದೆ. ಇಡೀ ದೇಶವೇ ನವೀಕರಣ ಇಂಧನಕ್ಕೆ ಕರ್ನಾಟಕ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವರು ಯಾವ ಆಧಾರದಲ್ಲಿ ಮಧ್ಯಪ್ರದೇಶದ ರೇವಾದಲ್ಲಿ ಆರಂಭವಾಗುತ್ತಿರುವ 750 ಮೆ.ವ್ಯಾ.  ನ ಸೋಲಾರ್ ಪಾರ್ಕ್ ಏಷ್ಯಾದಲ್ಲಿಯೇ ದೊಡ್ಡದು ಎಂದು ಹೇಗೆ ಹೇಳಿದ್ದಾರೆ.ಈ ಬಗ್ಗೆ  ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com