ರಾಜ್ಯದಲ್ಲಿ ಇಂದು ಕೊರೋನಾಗೆ 71 ಬಲಿ, ಬೆಂಗಳೂರಿನಲ್ಲಿ 1525 ಸೇರಿ 2627 ಮಂದಿಗೆ ಪಾಸಿಟಿವ್

ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 71 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 684ಕ್ಕೇರಿಕೆಯಾಗಿದೆ.

Published: 12th July 2020 08:12 PM  |   Last Updated: 12th July 2020 08:41 PM   |  A+A-


COVID-19 WARD

ಸಾಂದರ್ಭಿಕ ಚಿತ್ರ

Posted By : Lingaraj Badiger
Source : Online Desk

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 71 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 684ಕ್ಕೇರಿಕೆಯಾಗಿದೆ.

ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 45 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 71 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ರಾಜ್ಯದಲ್ಲಿ ಒಟ್ಟು 2627 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38,843ಕ್ಕೇರಿಕೆಯಾಗಿದೆ. ಈ ಪೈಕಿ 15409 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 22746 ಸೋಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇನ್ನು ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಭಾನುವಾರ ಒಂದೇ ದಿನ 693 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 532 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1525 ಪ್ರಕರಣಗಳು ವರದಿಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 18,387ಕ್ಕೇರಿಕೆಯಾಗಿದೆ. ನಗರದಲ್ಲಿ ಇಲ್ಲಿಯವರೆಗೆ 4045 ಮಂದಿ ಚೇತರಿಕೆ ಕಂಡಿದ್ದು, 275 ಮಂದಿ ಮೃತಪಟ್ಟಿದ್ದಾರೆ.

ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 196, ಧಾರವಾಡದಲ್ಲಿ 129, ಯಾದಗಿರಿಯಲ್ಲಿ 120, ಕಲಬುರಗಿಯಲ್ಲಿ 79, ಬಳ್ಳಾರಿಯಲ್ಲಿ 63, ಬೀದರ್‌ನಲ್ಲಿ 62, ರಾಯಚೂರಿನಲ್ಲಿ 48, ಉಡುಪಿಯಲ್ಲಿ 43, ಮೈಸೂರಿನಲ್ಲಿ 42, ಶಿವಮೊಗ್ಗದಲ್ಲಿ 42, ಚಿಕ್ಕಬಳ್ಳಾಪುರದಲ್ಲಿ 39, ಹಾಸನದಲ್ಲಿ 31 ಪ್ರಕರಣಗಳು ವರದಿಯಾಗಿವೆ.

ಕೊಪ್ಪಳದಲ್ಲಿ 27, ತುಮಕೂರಿನಲ್ಲಿ 26, ಕೋಲಾರದಲ್ಲಿ 24, ದಾವಣಗೆರೆಯಲ್ಲಿ 20, ಬೆಂಗಳೂರು ಗ್ರಾಮಾಂತರದಲ್ಲಿ 19, ಕೊಡಗಿನಲ್ಲಿ 15, ಗದಗದಲ್ಲಿ 14, ಚಾಮರಾಜನಗರದಲ್ಲಿ 13, ಉತ್ತರಕನ್ನಡದಲ್ಲಿ 12, ಹಾವೇರಿಯಲ್ಲಿ 12, ಚಿಕ್ಕಮಗಳೂರಿನಲ್ಲಿ 10, ಬಾಗಲಕೋಟೆಯಲ್ಲಿ 7, ಮಂಡ್ಯದಲ್ಲಿ 4, ರಾಮನಗರದಲ್ಲಿ 3, ಬೆಳಗಾವಿಯಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಇಂದು ಬೆಂಗಳೂರು ಒಂದರಲ್ಲೇ 45 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡದಲ್ಲಿ 4, ದಾವಣಗೆರೆಯಲ್ಲಿ 4, ಮೈಸೂರಿನಲ್ಲಿ 3, ವಿಜಯಪುರದಲ್ಲಿ 1, ಹಾಸನದಲ್ಲಿ 3, ಬೆಳಗಾವಿ 2, ಹಾವೇರಿಯಲ್ಲಿ 2, ಕೊಪ್ಪಳದಲ್ಲಿ 1, ಚಾಮರಾಜನಗರದಲ್ಲಿ 1, ಬಾಗಲಕೋಟೆಯಲ್ಲಿ 1, ತುಮಕೂರಿನಲ್ಲಿ 1 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Stay up to date on all the latest ರಾಜ್ಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp