ಬೆಂಗಳೂರಿನಲ್ಲಿ 30 ಕೈದಿಗಳಿಗೆ ಕೊರೋನಾ !

 ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕೇವಲ ಪೊಲೀಸರಷ್ಟೇ ಅಲ್ಲ, ಅಪರಾಧ ಮಾಡಿ ಜೈಲು ಸೇರಿರುವ ಕೈದಿಗಳಿಗೂ ಮಹಾಮಾರಿಯಾಗಿ ವ್ಯಾಪಿಸಿದೆ.
ಪರಪ್ಪನ ಅಗ್ರಹಾರ ಜೈಲು
ಪರಪ್ಪನ ಅಗ್ರಹಾರ ಜೈಲು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಕೇವಲ ಪೊಲೀಸರಷ್ಟೇ ಅಲ್ಲ, ಅಪರಾಧ ಮಾಡಿ ಜೈಲು ಸೇರಿರುವ ಕೈದಿಗಳಿಗೂ ಮಹಾಮಾರಿಯಾಗಿ ವ್ಯಾಪಿಸಿದೆ.

ಕಳೆದ ಒಂದು ವಾರದ ಹಿಂದಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕೊರೋನಾ ವ್ಯಾಪಿಸಿತ್ತು. ಈಗ ಮತ್ತೆ . ಜೈಲಿನ ವಿಶೇಷ ಸೆಲ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ ಮೂವತ್ತು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಇತ್ತೀಚೆಗೆ ಜೈಲು ಸೇರಿದ್ದ ಸುಮಾರು 400 ವಿಚಾರಣಾಧೀನ ಕೈದಿಗಳ ಪೈಕಿ 150 ಮಂದಿಗೆ ರ‍್ಯಾಂಡಮ್ ಟೆಸ್ಟ್ ಮಾಡಿದ್ದ ವೇಳೆ 30ಮಂದಿಗೆ ಕೊರೋನಾ ಇರುವುದು ಖಚಿತವಾಗಿದೆ. ಇದೀಗ ಸೋಂಕಿತ ಕೈದಿಗಳನ್ನು ಪ್ರತ್ಯೇಕ ಐಸೋಲೇಟೆಡ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರಿದ್ದ ಜೈಲಿನ ಭಾಗಗಳನ್ನು ಸ್ಯಾನಿಟ್ರೇಷನ್ ಮಾಡಲಾಗುತ್ತಿದೆ.

ಇನ್ನು ಕಳೆದ ವಾರವೂ ಪರಪ್ಪನ ಅಗ್ರಹಾರ ಜೈಲಿನ 20 ವಿಚಾರಣಾಧೀನ ಕೈದಿಗಳಿಗೆ ಕೊರೋನಾ ಇರುವುದು ಪತ್ತೆಯಾಗಿತ್ತು. ಇದೀಗ ಮತ್ತೆ ಮೂವತ್ತು ಕೈದಿಗಳಿಗೆ ಸೋಂಕು ತಗುಲಿರುವುದು ಜೈಲಿನ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com