ಕೊರೋನಾ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪ: ರಾಜಕೀಯ ಮಾಡಲು ಇದು ಸಮಯವಲ್ಲ- ಡಿಸಿಎ ಅಶ್ವತ್ಥ್ ನಾರಾಯಣ್

ಕೊರೋನಾ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರು ಹರಿಹಾಯುತ್ತಿದ್ದು, ಈ ನಡುವಲ್ಲೇ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿರುವ ಸಂದರ್ಶನದಲ್ಲಿ ಉಪ ಮುಖ್ಯಮಂತ್ರಿ ಸಿಎನ್. ಅಶ್ವತ್ಥ್ ನಾರಾಯಣ್ ಅವರು ಆರೋಪಗಳ ಕುರಿತು ಸ್ಪಷ್ಟನೆ ಹಾಗೂ ತಿರುಗೇಟು ನೀಡಿದ್ದಾರೆ. 

Published: 12th July 2020 11:00 AM  |   Last Updated: 12th July 2020 11:00 AM   |  A+A-


Ashwath Narayan

ಅಶ್ವತ್ಥ್ ನಾರಾಯಣ್

Posted By : Manjula VN
Source : The New Indian Express

ಬೆಂಗಳೂರು: ಕೊರೋನಾ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರು ಹರಿಹಾಯುತ್ತಿದ್ದು, ಈ ನಡುವಲ್ಲೇ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿರುವ ಸಂದರ್ಶನದಲ್ಲಿ ಉಪ ಮುಖ್ಯಮಂತ್ರಿ ಸಿಎನ್. ಅಶ್ವತ್ಥ್ ನಾರಾಯಣ್ ಅವರು ಆರೋಪಗಳ ಕುರಿತು ಸ್ಪಷ್ಟನೆ ಹಾಗೂ ತಿರುಗೇಟು ನೀಡಿದ್ದಾರೆ. 

ಆರಂಭಿಕ ಹಂತಗಳಲ್ಲಿ ಉಪಕರಣಗಳ ದರಗಳು ಬದಲಾಗುತ್ತಿರುತ್ತವೆ. ಯಾವುದೇ ಉಪಕರಣಗಳನ್ನು ಖರೀದಿ ಮಾಡಿದರೂ ಅವುಗಳು ಪರಿಶೀಲನೆಗೊಳಪಟ್ಟಿರುತ್ತವೆ. ಯಾರೇ ಅವ್ಯವಹಾರ ನಡೆಸಿದ್ದರೂ ಇದರಿಂದ ತಪ್ಪಿಸಿಕೊಳ್ಲಲು ಸಾಧ್ಯವಿಲ್ಲ. ಆದರೆ, ಪ್ರಸ್ತುತ ಪರಿಸ್ಥಿತಿಯನ್ನು ಬಳಸಿಕೊಂಡು ಪ್ರತಿಪಕ್ಷಗಳು ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಲು ಹಾಗೂ ಭೀತಿಗೊಳಗಾಗುವಂತೆ ಮಾಡುವ ಯತ್ನಗಳನ್ನು ನಡೆಸುತ್ತಿವೆ ಎಂದು ಹೇಳಿದ್ದಾರೆ. 

ವಿರೋಧ ಪಕ್ಷಗಳು ಪಿಪಿಇ ಕಿಟ್ ಗಳು ಹಾಗೂ ಕೊರೋನಾದ ಇತರೆ ಉಪಕರಣಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿವೆ...?
ಯಾವುದೇ ವಸ್ತುವಾಗಲೀ, ಉಪಕರಣವಾಗಲೀ ಖರೀದಿ ಮಾಡಿದಾಗ ಅವುಗಳು ಪರಿಶೀಲನೆಗೊಳಪಡುತ್ತವೆ. ಆದರೆ, ಈ ಸಮಯದಲ್ಲಿ ಈ ರೀತಿ ಮಾತನಾಡಲು ಸಮಯವೇ? ವ್ಯವಸ್ಥೆಯನ್ನು ಅವರು ನಂಬುವುದಿಲ್ಲವೇ? ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಸರ್ಕಾರದ ಅಧಿಕಾರಿಗಳನ್ನು ಬಲಿಪಶು ಮಾಡಲು ಯತ್ನಿಸುತ್ತಿದ್ದಾರೆ. ಇದೇ ಅವರ ಮುಖ್ಯ ಉದ್ದೇಶವಾಗಿದೆ. ಅವ್ಯವಹಾರ ನಡೆಸುವ ಯಾವುದೇ ಅಧಿಕಾರಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೂ ವರೆಗೂ ಕೊರೋನಾ ಉಪಕರಣ ಖರೀದಿಯಲ್ಲಿ ರೂ.600 ಕೋಟಿ ಕೂಡ ಖರ್ಚು ಮಾಡಿಲ್ಲ. ಆರಂಭಿಕ ದಿನಗಳಲ್ಲಿ ಉಪಕರಣಗಳು ಹಾಗೂ ವಸ್ತುಗಳ ಬೆಲೆಗಳು ಏರುಪೇರಾಗುತ್ತವೆ. ಈ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ. ಆದರೆ, ಇದು ರಾಜಕೀಯ ಮಾಡಲು ಸಮಯವಲ್ಲ. ಈ ಕುರಿತು ಅಧಿವೇಶನದಲ್ಲಿಯೂ ಚರ್ಚೆ ನಡೆಸಲಾಗುತ್ತದೆ. 

ಆರಂಭಿಕ ದಿನಗಳಲ್ಲಿ ಸರ್ಕಾರ ಪರಿಸ್ಥಿತಿಯನ್ನು ಸೂಕ್ತವಾಗಿಯೇ ನಿಭಾಯಿಸಿತ್ತು. ಕರ್ನಾಟಕ ರೀತಿ ಪರಿಸ್ಥಿತಿ ನಿಭಾಯಿಸುವಂತೆ ಇತರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ತಿಳಿಸಿತ್ತು. ಇದೀಗ ಇದ್ದಕ್ಕಿದ್ದಂತೆಯೇ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದೆ...?
ಇತರೆ ಜಿಲ್ಲೆಗಳು, ರಾಜ್ಯಗಳು ಹಾಗೂ ರಾಷ್ಟ್ರಗಳ ಆರ್ಥಿಕ ಚಟವಟಿಕೆಗಳು ಆರಂಭವಾಗಿವೆ. ಜನರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮತ್ತಷ್ಟು ಸೂಕ್ತ ಕ್ರಮಗಳ ಕೈಗೊಳ್ಳುವ ಅಗತ್ಯವಿದೆ. ಕೆಲವರು ತಮಗೇನು ಆಗುವುದಿಲ್ಲ ಎಂದು ತಿಳಿದಿದ್ದಾರೆ. ಇಂತಹ ವರ್ತನೆಗಳನ್ನು ಜನರು ಮುಂದುವರೆಸಬಾರದು. ವೈರಸ್ ಯಾರನ್ನೂ ಬಿಡುವುಡಿಲ್ಲ. 

ಅನ್'ಲಾಕ್ 1.0ವನ್ನು ರಾಜ್ಯ ಸರ್ಕಾರ ಸೂಕ್ತವಾಗಿ ನಿಭಾಯಿಸುತ್ತದೆ ಎಂದು ನೀವು ಭಾವಿಸುವಿರಾ? ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆಯೇ ಆರ್ಥಿಕ ಚಟುವಟಿಕೆಗಳನ್ನು ಮತ್ತೆ ತೆರೆಯಲು ಸರ್ಕಾರ ಮುಂದಾಗಿದೆಯೇ?
ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮಿಂದ ಸಾಧ್ಯವಾದಷ್ಟು ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಆದರೆ, ಸುಧಾರಣೆಗೆ ಯಾವಾಗಲೂ ಕಾಲಾವಕಾಶ ಬೇಕಾಗುತ್ತದೆ. ಆ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ. ಸಂಪನ್ಮೂಲಕ ಕ್ರೋಡೀಕರಣ ಮತ್ತು ವಿಚಾರಗಳ ಆದ್ಯತೆ ಉತ್ತಮವಾಗಿ ಮುನ್ನಡೆಯುತ್ತಿದ್ದು, ಹಂತಹಂತವಾಗಿ ಅನ್'ಲಾಕ್ ಮಾಡಲಾಗುತ್ತಿದೆ. ಈಗಲೂ ಅನ್'ಲಾಕ್ ಕಾರ್ಯ ಪೂರ್ಣಗೊಂಡಿಲ್ಲ. ಬೆಂಗಳೂರಿನ ಜನಸಂಖ್ಯೆಯನ್ನು ಗಮನಿಸಿದರೆ. ಸೋಂಕಿನ ಸಂಖ್ಯೆ ದೊಡ್ಡಮಟ್ಟದಲ್ಲಿಲ್ಲ. 

ಬೆಂಗಳೂರಿನಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ? 
ನಗರದಲ್ಲಿ ಪರೀಕ್ಷೆಗೊಳಪಟ್ಟ ಶೇ.80-90 ರಷ್ಟು ಪಾಸಿಟಿವ್ ಪ್ರಕರಣಗಳು ಲಕ್ಷಣ ರಹಿತವಾಗಿವೆ. ಶೇ.5ರಷ್ಟು ಮಂದಿಯ ಸ್ಥಿತಿ ಮಾತ್ರ ಗಂಭೀರವಾಗಿದೆ. ಶೇ.5ರಷ್ಟನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ. ಐಸಿಯು, ವೆಂಟಿಲೇಟರ್ ಗಳೊಂದಿಗೆ ಅವರನ್ನೂ ಗುಣಮುಖರಾಗುವಂತೆ ಮಾಡಬಹುದು. ಸಾವಿನ ಸಂಖ್ಯೆ ಕಡಿಮೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಲಾಕ್ಡೌನ್ ದೀರ್ಘಕಾಲಿಕ ಪರಿಹಾರವಲ್ಲ. ಸೋಂಕಿ ಕಡಿಮೆ ಮಾಡಲು ಇರುವ ಮಾರ್ಗವಷ್ಟೇ.
 
ಆರಂಭದಲ್ಲಿ ಕಾರ್ಯಗಳಲ್ಲಿ ಬಹಳಷ್ಟು ಸಕ್ರಿಯರಾಗಿದ್ದ ನೀವು ಹಲವು ಸಭೆಗಳನ್ನು ನಡೆಸಿದ್ದಿರಿ. ತಂತ್ರಜ್ಞಾನಗಳು ಸಹಾಯವಾಗುವಂತೆ ಮಾಡಿದ್ದಿರಿ. ಬಳಿಕ ಇದ್ದಕ್ಕಿದ್ದಂತೆ ತಟಸ್ಥರಾಗಿ ಇದೀಗ ಮತ್ತೆ ಸಕ್ರಿಯರಾಗಿದ್ದೀರಿ...?
ನಾನು ಯಾವಾಗಲೂ ಹಗಲು, ರಾತ್ರಿ ಕೆಲಸ ಮಾಡುತ್ತಲೇ ಇದ್ದೇನೆ. ನಾನು ಉಪ ಮುಖ್ಯಮಂತ್ರಿಯಾಗಿ್ದದು, ಕೇಲವ ಇಲಾಖೆ ಸಚಿವನ ಉಸ್ತುವಾರಿಯಷ್ಟೇ ಅಲ್ಲದೆ, ಎಲ್ಲಾ ಸಚಿವರು ಕಾರ್ಯಗಳನ್ನೂ ನೋಡಬೇಕಿದೆ. ಹೀಗಾಗಿ ಕೆಲ ನಿರ್ಬಂಧಗಳು ಇದ್ದೇ ಇರುತ್ತವೆ. 

ಕೊರೋನಾ ಹೋರಾಟಕ್ಕೆ ಹಿನ್ನೆಡೆಯುಂಟಾಗಲು ಸಚಿವರ ನಡುವಿನ ಸಹಕಾರ ಸೂಕ್ತ ರೀತಿಯಲ್ಲಿಲ್ಲದಿರುವುದು ಒಂದೂ ಕಾರಣವೆಂದು ಹೇಳಲಾಗುತ್ತಿದೆ...
ಇದು ಸರಿಯಲ್ಲ. ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಕಾರ್ಯದರ್ಶಿಗಳು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಪ್ರತೀಯೊಬ್ಬರೂ ಸಕ್ರಿಯರಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅನುಮತಿಗಳಿಗಾಗಿ ಕಾಯದೇ ಪ್ರತೀಯೊಬ್ಬರು ಸ್ವಯಂ ನಿರ್ಧಾರ ಕೈಗೊಳ್ಳುವ ಹಕ್ಕನ್ನು ನೀಡಲಾಗಿದೆ. ಯಾವುದೇ ಸಮಯದಲ್ಲೂ ಮುಖ್ಯಮಂತ್ರಿಗಳನ್ನು ಸಂಪರ್ಕಿಸಬಹುದಾಗಿದೆ. 

ರಾಜ್ಯದಲ್ಲಿ ಕೊರೋನಾ ಸಮುದಾಯ ಹಂತ ತಲುಪಿದೆಯೇ? 
ಖಂಡಿತವಾಗಿಯೂ ಇಲ್ಲ. ಯಾವುದೇ ನಗರದಲ್ಲಿಯೂ ಕೊರೋನಾ ಸಮುದಾಯ ಹಂತ ತಲುಪಿಲ್ಲ ಎಂದಾದರೆ, ಇನ್ನು ನಮ್ಮ ಬೆಂಗಳೂರಿನಲ್ಲಿ ಹೇಗೆ ಸಾಧ್ಯ...

ಸಕಾಲಕ್ಕೆ ಚಿಕಿತ್ಸೆ ದೊರಕದೆ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ...?
ಸಾಮರ್ಥ್ಯಕ್ಕಿಂತಲೂ ಹೆಚ್ಚು ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜನರು ವೈದ್ಯಕೀಯ ವರದಿಗಳಿಗಾಗಿ ಕಾಯುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ವರದಿಗಳಿಗೂ ಮುನ್ನವೇ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ವೈದ್ಯಕೀಯ ವರದಿಗಳನ್ನು ಐಸಿಎಂಆರ್, ವೆಬ್'ಸೈಟ್'ಗೆ ಅಪ್ಲೋಡ್ ಮಾಡುವಂತೆ ಸೂಚಿಸಲಾಗಿದೆ. ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪರೀಕ್ಷೆ ಹಾಗೂ ಚಿಕಿತ್ಸೆಗಳ ಕುರಿತು ಪರಿಶೀಲನೆಗಳು ನಡೆಯುತ್ತಿವೆ. ಸಂಪರ್ಕಿತರ ಪತ್ತೆಹಚ್ಚುವ ಕಾರ್ಯಗಳು ಚುರುಕಿನಿಂದ ಸಾಗಿವೆ. ಎಲ್ಲಿಯೇ ಸವಾಲುಗಳು ಹಾಗೂ ನ್ಯೂನತೆಗಳು ಕಂಡು ಬಂದರೂ ಆ ಪ್ರದೇಶವನ್ನು ಬಲಪಡಿಸುವ ಕಾರ್ಯಗಳನ್ನು ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ. 

Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp