ಸ್ವ ನಿರ್ಬಂಧನದಲ್ಲಿರುವ ಸಿಎಂ ಯಡಿಯೂರಪ್ಪ: ಮನೆಯಲ್ಲಿ ಕುಳಿತು ಏನು ಮಾಡುತ್ತಿದ್ದಾರೆ?

ತಮ್ಮ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸ್ವ ನಿರ್ಬಂಧದಲ್ಲಿರುವ ಸಿಎಂ ಬಿ ಎಸ್ ಯಡಿಯೂರಪ್ಪ ತಮ್ಮ ದಿನನಿತ್ಯದ ರಾಜಕೀಯ ಚಟುವಟಿಕೆಗಳು, ಕೆಲಸ ಕಾರ್ಯಗಳಿಂದ ಬಿಡುವು ಸಿಕ್ಕ ವೇಳೆ ಮನೆಯಲ್ಲಿ ಪುಸ್ತಕ ಓದುವುದರಲ್ಲಿ ಮಗ್ನರಾಗುತ್ತಾರೆ.
ಸಿಎಂ ಬಿ ಎಸ್ ಯಡಿಯೂರಪ್ಪ
ಸಿಎಂ ಬಿ ಎಸ್ ಯಡಿಯೂರಪ್ಪ

ಬೆಂಗಳೂರು:ತಮ್ಮ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸ್ವ ನಿರ್ಬಂಧದಲ್ಲಿರುವ ಸಿಎಂ ಬಿ ಎಸ್ ಯಡಿಯೂರಪ್ಪ ತಮ್ಮ ದಿನನಿತ್ಯದ ರಾಜಕೀಯ ಚಟುವಟಿಕೆಗಳು, ಕೆಲಸ ಕಾರ್ಯಗಳಿಂದ ಬಿಡುವು ಸಿಕ್ಕ ವೇಳೆ ಮನೆಯಲ್ಲಿ ಪುಸ್ತಕ ಓದುವುದರಲ್ಲಿ ಮಗ್ನರಾಗುತ್ತಾರೆ.

ನನ್ನ ವಿರಾಮದ ಸಮಯದಲ್ಲಿ ಪುಸ್ತಕ ಓದುವುದು ನನಗೆ ಖುಷಿಯ ಹವ್ಯಾಸ. ನಮ್ಮ ಸುತ್ತಮುತ್ತ ನಡೆಯುವ ಹಲವು ವಿಷಯಗಳ ಕುರಿತು ತಿಳಿದುಕೊಳ್ಳಲು ಸಾಕಷ್ಟು ಇರುತ್ತದೆ. ಜ್ಞಾನ ಪಡೆಯುವ ಪ್ರಕ್ರಿಯೆಗೆ ಕೊನೆಯಿಲ್ಲ. ಭಾನುವಾರದ ಲಾಕ್ ಡೌನ್  ದಿನ ಮತ್ತು ಸ್ವ ನಿರ್ಬಂಧನದಲ್ಲಿರುವಾಗ ನನಗೆ ಸಿಗುವ ವಿರಾಮದ ಸಮಯವನ್ನು ಖಾಂಡೇಕರ್ ಅವರ ಯಯಾತಿ ಕೃತಿಯನ್ನು ಓದುತ್ತಿದ್ದೇನೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮಹಾಭಾರತದಲ್ಲಿ ಬರುವ ಪಾತ್ರ ಯಯಾತಿಯ ಅನುವಾದಿತ ಕೃತಿಯನ್ನು ಸಿಎಂ ಯಡಿಯೂರಪ್ಪ ಓದುತ್ತಿದ್ದಾರೆ. ಇದನ್ನು ಮೂಲದಲ್ಲಿ ಮರಾಠಿ ಭಾಷೆಯಲ್ಲಿ ವಿ ಎಸ್ ಖಾಂಡೇಕರ್ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com