ಸೋಂಕಿತರಿಗೆ ಸೂಕ್ತ ಚಿಕಿತ್ಸೆ,ರೋಗ ಲಕ್ಷಣ ಪತ್ತೆಗಾಗಿ ತುರ್ತು ಸಹಾಯವಾಣಿ ಆರಂಭಿಸಲು ಸೂಚನೆ: ಡಾ.ಸುಧಾಕರ್

ನಗರದಲ್ಲಿ ಹಾಸಿಗೆಗಳ ಹಂಚಿಕೆಗೆ ಸಮರ್ಪಕ ಕೇಂದ್ರೀಕೃತ ವ್ಯವಸ್ಥೆ ಕಲ್ಪಿಸಿವುದು.ಲಾಕ್ ಡೌನ್ ಸಂದರ್ಭದಲ್ಲಿ ಸೋಂಕಿತರ ಸಂಪರ್ಕ ಪತ್ತೆಗೆ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳ ಬಳಕೆ ಮಾಡಿ ಕೊಳ್ಳುವಂತೆ ಸಚಿವ ಡಾ.ಸುಧಾಕರ್ ಹಿರಿಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

Published: 13th July 2020 01:35 AM  |   Last Updated: 13th July 2020 01:35 AM   |  A+A-


K Sudhakar

ಡಾ.ಸುಧಾಕರ್

Posted By : Srinivasamurthy VN
Source : UNI

ಬೆಂಗಳೂರು: ನಗರದಲ್ಲಿ ಹಾಸಿಗೆಗಳ ಹಂಚಿಕೆಗೆ ಸಮರ್ಪಕ ಕೇಂದ್ರೀಕೃತ ವ್ಯವಸ್ಥೆ ಕಲ್ಪಿಸಿವುದು.ಲಾಕ್ ಡೌನ್ ಸಂದರ್ಭದಲ್ಲಿ ಸೋಂಕಿತರ ಸಂಪರ್ಕ ಪತ್ತೆಗೆ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳ ಬಳಕೆ ಮಾಡಿ ಕೊಳ್ಳುವಂತೆ ಸಚಿವ ಡಾ.ಸುಧಾಕರ್ ಹಿರಿಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳನ್ನು ಚರ್ಚಿಸಲು ವಿಡಿಯೋ ಕಾನ್ಫರೆನ್ಸ್ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಚೆರ್ಚೆ ನಡೆಸಿದರು.ಈ ವೇಳೆ ಮಾತನಾಡಿದ ಅವರು, ಸೋಂಕು ಧೃಢಪಟ್ಟವರಿಗೆ ಮತ್ತು ಸೋಂಕಿತರ ಪ್ರಾಥಮಿಕ  ಸಂಪರ್ಕಗಳಿಗೆ ಮಾಹಿತಿ ನೀಡಲು,ರೋಗ ಲಕ್ಷಣವಿರುವ ಸೋಂಕಿತರ ಪತ್ತೆಗಾಗಿ,ರೋಗಲಕ್ಷಣ ವಿಲ್ಲದ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ಮತ್ತು ರೋಗಲಕ್ಷಣವಿದ್ದವರಿಗೆ ಆಸ್ಪತ್ರೆ,ಆ್ಯಂಬುಲೆನ್ಸ್ ಸಂಯೋಜನೆಗಾಗಿ ಮತ್ತು ಇತರೆ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ತುರ್ತು ಸಹಾಯವಾಣಿ  ಆರಂಭಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ರಾಪಿಡ್ ಆಂಟಿಜೆನ್ ಟೆಸ್ಟ್ ಅವಶ್ಯಕತೆ ಇರುವ ಕ್ಲಸ್ಟರ್ ಗಳನ್ನು ಗುರುತಿಸಲು ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾ ಗಿದೆ.ಅಲ್ಲದೆ ರೋಗಿಗಳನ್ನು ದಾಖಲಿಸಿಕೊಳ್ಳಲು ಇರುವ ಗೊಂದಲ ನಿವಾರಿಸಲು ಆಸ್ಪತ್ರೆಗಳಲ್ಲಿ ಆಂಟಿಜೆನ್ ಟೆಸ್ಟ್ ವ್ಯವಸ್ಥೆ ಕಲ್ಪಿಸು ವುದು.RT-PCR ಪರೀಕ್ಷೆಯ ಸ್ಯಾಂಪಲ್ ಗಳನ್ನು  ಸರ್ಕಾರಿ ಮತ್ತು ಖಾಸಗಿ ಲ್ಯಾಬ್ ಗಳಿಗೆ ಸಮರ್ಪಕವಾಗಿ ಹಂಚುವ ಮೂಲಕ ಪರೀಕ್ಷಾ ವರದಿ ವಿಳಂಬವಾಗದಂತೆ ಕ್ರಮ ಕೈಗೊಳಲು ನಿರ್ದೇಶನ ನೀಡಿದರು. 

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp