ಸ್ವಾಬ್ ಪರೀಕ್ಷಾ ವರದಿ ಬರುವವರೆಗೂ ಐಸೋಲೇಷನ್ ಕಡ್ಡಾಯ: ಆರೋಗ್ಯ ಇಲಾಖೆಯಿಂದ ಆದೇಶ

ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಮತ್ತೊಂದು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಮತ್ತೊಂದು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.

ಸ್ವಾಬ್ ಪರೀಕ್ಷೆಗೊಳಪಟ್ಟವರು ಪರೀಕ್ಷಾ ವರದಿ ಬರುವವರೆಗೂ ಐಸೋಲೇಷನ್, ಕ್ವಾರಂಟೈನ್ ಕಡ್ಡಾಯಗೊಳಿಸಿ‌ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. 

ಈ ಸಂಬಂಧ ಆದೇಶ ಹೊರಡಿಸಿದ್ದು, ಕೊರೋನಾ ವೈರಸ್ ಸೋಂಕಿನ ಪರೀಕ್ಷೆಗೆ ಮಾದರಿ ಕೊಟ್ಟಿದ್ದಲ್ಲಿ ಫಲಿತಾಂಶ ಬರುವವರೆಗೂ ಆ ವ್ಯಕ್ತಿ ಐಸೋಲೇಷನ್‌ನಲ್ಲಿರುವುದು ಕಡ್ಡಾಯವಾಗಿದೆ. ಫಲಿತಾಂಶ ಬರುವ ಮುನ್ನ ಅಜಾಗರೂಕತೆಯಿಂದ ಇತರರೊಂದಿಗೆ ಬೆರೆಯುವುದು, ಕಚೇರಿಗಳಿಗೆ ಹೋಗಿ ಕೆಲಸ ಮಾಡುವುದು. ಮನೆಯಿಂದ ಹೊರಗೆ ಸುತ್ತಾಡುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ ಎಂದು ಆರೋಗ್ಯ ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com