ಬಯೋಕಾನ್ ಸಂಸ್ಥೆ ಸಿದ್ಧಪಡಿಸಿರುವ ಕೋವಿಡ್ ಲಸಿಕೆ 'ಇಟೋಲಿಝುಮಬ್': ಪ್ರತಿ ಸೀಸೆಗೆ 8 ಸಾವಿರ

ಬೆಂಗಳೂರು ಮೂಲದ ಬಯೋಕಾನ್ ಸಂಸ್ಥೆಯು ಸಿದ್ಧಪಡಿಸಿರುವ 'ಇಟೋಲಿಝುಮಬ್' ಲಸಿಕೆಯನ್ನು ಮಧ್ಯಮ ಹಾಗೂ ತೀವ್ರ ಭಾದಿತ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್  ಆಫ್ ಇಂಡಿಯಾ ಅನುಮತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಬೆಂಗಳೂರು ಮೂಲದ ಬಯೋಫಾರ್ಮಾಟಿಕಲ್ ವಲಯದ ಪ್ರಸಿದ್ಧ ಬಯೋಕಾನ್ ಸಂಸ್ಥೆಯು ಸಿದ್ಧಪಡಿಸಿರುವ
'ಇಟೋಲಿಝುಮಬ್'ಲಸಿಕೆಯನ್ನು ಮಧ್ಯಮ ಹಾಗೂ ತೀವ್ರ ಭಾದಿತ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ
ಡ್ರಗ್ ಕಂಟ್ರೋಲರ್ ಜನರಲ್  ಆಫ್ ಇಂಡಿಯಾ ಅನುಮತಿ ನೀಡಿದೆ.

ಮಧ್ಯಮ ಹಾಗೂ ತೀವ್ರ ಕೋವಿಡ್-19 ಭಾದಿತ ರೋಗಿಗಳ ಚಿಕಿತ್ಸೆಗಾಗಿ ಮೊದಲ ನೋವಾಲ್ ಬಯೋಲಾಜಿಕಲ್ ಥೆರಪಿಯನ್ನು
ನೀಡಲು ಡಿಸಿಐಜಿ ಅನುಮೋದನೆ ನೀಡಿದ್ದು,'ಇಟೋಲಿಝುಮಬ್'  ಹಲವರ ಜೀವವನ್ನು ಉಳಿಸಿದೆ. ಇದನ್ನು ಮಾರುಕಟ್ಟೆಗೆ
ಬಿಡುಗಡೆ ಮಾಡಲು ಡಿಸಿಜಿಐ ಅನುಮತಿ ನೀಡಿದೆ ಎಂದು ಬಯೋಕಾನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಕಿರಣ್
ಮಜುಂದಾರ್ ಷಾ ತಿಳಿಸಿದ್ದಾರೆ.

25ಎಂಜಿಯ 5 ಎಂಎಲ್  ಇಂಜೆಕ್ಷನ್ ನಿಂದ ಕೋವಿಡ್-19 ನಿಂದ ತೀವ್ರ ಹಾಗೂ ಮಧ್ಯಮ ಭಾದಿತ ರೋಗಿಗಳಿಗೆ ಚಿಕಿತ್ಸೆ
ನೀಡಬಹುದಾಗಿದೆ.ಪ್ರತಿ ಬಾಟಲಿ ಬೆಲೆ 8 ಸಾವಿರ ರೂ.ಆಗಿರುತ್ತದೆ. ಇಂತಹ  ನಾಲ್ಕು ಬಾಟಲಿಗಳನ್ನು ನೀಡಬೇಕಾಗುತ್ತದೆ.
ಅಂದರೆ ಚಿಕಿತ್ಸೆಗಾಗಿ ಒಟ್ಟು  32 ಸಾವಿರ ರೂ. ವೆಚ್ಚವಾಗಲಿದೆ ಎಂದು ಅವರು ಹೇಳಿದ್ದಾರೆ.

ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ ರೋಗ ನಿರೋಧಕ ಕಣಗಳ ಮೇಲೆ ದಾಳಿ ನಡೆಸಿರುವ ವೈರಸ್ ವಿರುದ್ಧ  ಹೋರಾಡುವಂತಾ ಇಟೋಲಿಝುಮಬ್,ಉಸಿರಾಟ ತೊಂದರೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಯಶಸ್ವಿ ಆಗಿದೆ. 
ಕೊರೊನಾವೈರಸ್ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಇಟೋಲಿಝುಮಬ್ ಉತ್ತಮವಾಗಿ ಕೆಲಸ ಮಾಡಿರುವುದು
 ಗೊತ್ತಾಗಿದೆ ಎಂದು ಕಿರಣ್ ಮಜುಂದಾರ್ ಷಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com