ಕೊರೋನಾ ನೆಗೆಟಿವ್ ಯುವಕನಿಗೆ ಪಾಸಿಟಿವ್ ಎಂದು ಕರೆದೊಯ್ದ ಸಿಬ್ಬಂದಿ; ಆರೋಗ್ಯ ಸಿಬ್ಬಂದಿ ಎಡವಟ್ಟು

ಯುವಕನೊಬ್ಬನಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಆಸ್ಪತ್ರೆಗೆ ದಾಖಲಿಸಲು ಕೊಪ್ಪಳಕ್ಕೆ ಕರೆದೊಯ್ದಾಗ ಆ ಯುವಕನಿಗೆ ನೆಗೆಟಿವ್ ಇರುವ ಸಂದೇಶ ಬಂದಿದ್ದು, ಇಲಾಖೆಯ ಅಧಿಕಾರಿಗಳ ಎಡವಟ್ಟಿಗೆ ಯುವಕ ಪೇಚಿಗೆ ಸಿಲುಕಿದ ಘಟನೆ ಸಮೀಪದ ಹೊಸಳ್ಳಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಂಗಾವತಿ: ಯುವಕನೊಬ್ಬನಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಆಸ್ಪತ್ರೆಗೆ ದಾಖಲಿಸಲು ಕೊಪ್ಪಳಕ್ಕೆ ಕರೆದೊಯ್ದಾಗ ಆ ಯುವಕನಿಗೆ ನೆಗೆಟಿವ್ ಇರುವ ಸಂದೇಶ ಬಂದಿದ್ದು, ಇಲಾಖೆಯ ಅಧಿಕಾರಿಗಳ ಎಡವಟ್ಟಿಗೆ ಯುವಕ ಪೇಚಿಗೆ ಸಿಲುಕಿದ ಘಟನೆ ಸಮೀಪದ ಹೊಸಳ್ಳಿಯಲ್ಲಿ ನಡೆದಿದೆ.

ಚಿಕ್ಕತಂಜಕಲ್ ಗ್ರಾಮ ಪಂಚಾಯಿತಿಯ ಹೊಸಳ್ಳಿ ಗ್ರಾಮದ ಮೂರನೇ ವಾಡರ್ಿನ ಯುವಕನೊಬ್ಬನ ಮನೆಗೆ ಭಾನುವಾರ ಮಧ್ಯಾಹ್ನ ಆಗಮಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ನಿಮ್ಮ ಸ್ವಾಬ್ ಟೆಸ್ಟ್ ರಿಪೋಟರ್್ ಪಾಸಿಟಿವ್ ಬಂದಿದೆ. ಕ್ವಾರಂಟೈನ್ ಮಾಡಬೇಕಿದೆ. ಕೊಪ್ಪಳದ ನಿಗಧಿತ ಕೋವಿಡ್ ಜಿಲ್ಲಾ  ಆಸ್ಪತ್ರೆಗೆ ಕರೆದೊಯ್ಯಬೇಕಿದೆ. ಕುಡಲೆ ವಾಹನದಲ್ಲಿ ಏರುವಂತೆ ಒತ್ತಡ ಹೇರಿ ಅಂಬುಲೆನ್ಸ್ನಲ್ಲಿ ಕೊಪ್ಪಳಕ್ಕೆ ಕರೆದೊಯ್ದಿದ್ದಾರೆ.

ಅಂಬುಲೆನ್ಸ್ನಲ್ಲಿ ಆಗಲೆ ಒಬ್ಬ ಕೊರೊನಾ ಪಾಸಿಟಿವ್ ಸೋಂಕಿತ ಇದ್ದು, ಈ ಯುವಕನನ್ನು ಆತನೊಂದಿಗೆ ಕರೆದೊಯ್ದಿದಾರೆ. ಕೊಪ್ಪಳಕ್ಕೆ ತೆರಳಿದಾಗ ಮತ್ತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಯುವಕನ ಮೊಬೈಲ್ಗೆ ಪ್ರಯೋಗಾಲದಯ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ಮೆಸೆಜ್ ರವಾನಿಸಿದೆ. ಈ  ಘಟನೆಯಿಂದಾಗಿ ಕೆಲಕಾಲ ಯುವಕ ದಿಗ್ಮೂಢನಾಗಿದ್ದಾನೆ.

ಅಂಬುಲೆನ್ಸ್ನಲ್ಲಿ ಕೊರೊನಾ ಸೋಂಕಿತನೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕರೆದೊಯ್ದಿರುವುದಕ್ಕೆ ಈಗ ಯುವಕ ವಿಚಲಿತಗೊಂಡು ಮಾನಸಿಕ ಅಘಾತಕ್ಕೆ ಒಳಗಾಗಿದ್ದಾನೆ. ಅಲ್ಲದೇ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ರೋಗಿಗಳೊಂದಿಗೆ ಇರಿಸಲಾಗಿದೆ. ವಿಡಿಯೋ ಕಾಲ್ ಮಾಡಿ ಸ್ನೇಹಿತರೊಂದಿಗೆ  ಮಾತನಾಡಿರುವ ಈ ಯುವಕ ಏನಾದರೂ ಪರಿಹಾರ ಹುಡುಕಿ ನನ್ನನ್ನು ಅಲ್ಲಿಂದ ಕೆತರುವಂತೆ ಮನವಿ ಮಾಡಿದ್ದಾನೆ. ಅಲ್ಲದೇ ಮಾಧ್ಯಮಗಳಿಗೂ ಸೆಲ್ಪಿ ಮಾಡಿರುವ ವಿಡಿಯೋ ಕಳಿಸಿ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾನೆ.

ವರದಿ: ಶ್ರೀನಿವಾಸ್ .ಎಂ.ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com