ರಾಜ್ಯದಲ್ಲಿ ತಯಾರಾದ ಟ್ರಾಕ್ಟರ್ ಗಳನ್ನು ದೇಶಾದ್ಯಂತ ರೈತರಿಗೆ ತಲುಪಿಸುವ ಬೆಂಗಳೂರು ರೈಲ್ವೆ 

ಕೊರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿಯೂ ದೇಶದ ನಾನಾ ಭಾಗಗಳ ರೈತರು ಕರ್ನಾಟಕದಲ್ಲಿ ತಯಾರಾದ ಟ್ರಾಕ್ಟರುಗಳ ಮೇಲೆ ಅವಲಂಬಿತರಾಗಿದ್ದಾರೆ. ಕೊರೋನಾ ಪ್ರೇರಿತ ಲಾಕ್‌ಡೌನ್ ಕಾರಣ, ಅಂತರ್ ರಾಜ್ಯ ರಸ್ತೆ ಸಾರಿಗೆ ನಿರ್ಬಂಧಿಸಿದ ನಂತರ ಅಂತಹ ಅನೇಕ ಟ್ರಾಕ್ಟರುಗಳು ಇಲ್ಲಿ ಸಿಲುಕಿಕೊಂಡಿವೆ.
ಟ್ರಾಕ್ಟರ್
ಟ್ರಾಕ್ಟರ್

ಬೆಂಗಳೂರು: ಕೊರೋನಾ ಸಂಕಷ್ಟದ ಈ ಕಾಲಘಟ್ಟದಲ್ಲಿಯೂ ದೇಶದ ನಾನಾ ಭಾಗಗಳ ರೈತರು ಕರ್ನಾಟಕದಲ್ಲಿ ತಯಾರಾದ ಟ್ರಾಕ್ಟರುಗಳ ಮೇಲೆ ಅವಲಂಬಿತರಾಗಿದ್ದಾರೆ. ಕೊರೋನಾ ಪ್ರೇರಿತ ಲಾಕ್‌ಡೌನ್ ಕಾರಣ, ಅಂತರ್ ರಾಜ್ಯ ರಸ್ತೆ ಸಾರಿಗೆ ನಿರ್ಬಂಧಿಸಿದ ನಂತರ ಅಂತಹ ಅನೇಕ ಟ್ರಾಕ್ಟರುಗಳು ಇಲ್ಲಿ ಸಿಲುಕಿಕೊಂಡಿವೆ.

ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಅಸ್ಸಾಂಗೆ ಟ್ರಾಕ್ಟರುಗಳನ್ನು ಸಾಗಿಸಲು ಪ್ರಾರಂಭಿಸಿರುವ ಬೆಂಗಳೂರು ರೈಲ್ವೆ ವಿಭಾಗಕ್ಕೆ ಇದೊಂದು ಆದಾಯದ ಮೂಲವಾಗಿದೆ ಜುಲೈ 9 ರಂದು ಗುಜರಾತ್‌ಗೆ ಕಳುಹಿಸಲಾದ ಇಂತಹಾ ಟ್ರಾಕ್ಟರುಗಳು ಸೇರಿ ಒಟ್ಟು 175 ಟ್ರಾಕ್ಟರುಗಳನ್ನು ಒಂದುಗೂಡ್ಸ್ ರೇಕ್ ನ ಮೇಲೆ ಸಾಗಿಸಲು ಸಾಧ್ಯವಾಗಿದೆ. 

ದೊಡ್ಡಬಳ್ಲಾಪುರ ಮೂಲದ ಟ್ರಾಕ್ಟರ್ ಆಂಡ್ ಫಾರ್ಮ್ ಇಕ್ವಿಪ್ ಮೆಂಟ್ ಲಿಮಿಟೆಡ್ (TAFE) ಚೆನ್ನೈನಿಂದ ತಂದ ಬಿಡಿಭಾಗಗಳೊಂದಿಗೆ ಈ ಟ್ರಾಕ್ಟರುಗಳನ್ನು ತಯಾರಿಸುತ್ತದೆ ಮತ್ತು ಜೋಡಿಸುತ್ತದೆ. “ವಾಹನಗಳನ್ನು ಟ್ರಕ್‌ಗಳಿಂದ ಕಳುಹಿಸಿದರೆ, ಅಲ್ಲಿ ನಿರ್ಬಂಧಕ್ಕೆ ಒಳಗಾಗಲಿದೆ  ಆದುದರಿಂದ ಈ ವ್ಯವಸ್ಥೆಯು ಎಲ್ಲರ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ ”ಎಂದು ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಕೃಷ್ಣ ರೆಡ್ಡಿ ಹೇಳಿದರು.

"ಏಪ್ರಿಲ್ 29 ಮತ್ತು ಜುಲೈ 9 ರ ನಡುವೆ ಜೈಪುರ, ಅಹಮದಾಬಾದ್, ಜೋಧ್ಪುರ್ ಮತ್ತು ಅಸ್ಸಾಂಗೆ ಅಂತಹ 22 ರೇಕ್ ಗಳನ್ನು  ರವಾನಿಸುವ ಮೂಲಕ ವಿಭಾಗವು ಸುಮಾರು 3.6 ಕೋಟಿ ರೂ. ಗಳಿಸಿದೆ. ವಾಹನ ಬಿಡಿಭಾಗಗಳು, ಕಾರುಗಳು ಮತ್ತು ಟಿಲ್ಲರ್ ಗಳನ್ನು  ಸಹ ಸಾಗಿಸಲಾಗಿದೆ" ಎಂದು ಅವರು ಹೇಳಿದರು

ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ಕೆ ವರ್ಮಾ ಅವರ ಪ್ರಕಾರ, "ಈ ತಿಂಗಳಲ್ಲಿ 10 ರೇಕ್ ಟ್ರಾಕ್ಟರುಗಳು ಮತ್ತು 5 ರೇಕ್ ಕಾರುಗಳನ್ನು ಲೋಡ್ ಮಾಡುವ ನಿರೀಕ್ಷೆ ಇದೆ,  ಏತನ್ಮಧ್ಯೆ, ವ್ಯಾಪಾರ ಪುನರುಜ್ಜೀವನದ ಸಂಕೇತವಾಗಿ, ಚನ್ನಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿಯಿಂದ ಚೀನಾ ಸೇರಿದಂತೆ ಇತರ ದೇಶಗಳಿಗೆ ಗ್ರಾನೈಟ್ ಚಪ್ಪಡಿಗಳ ರಫ್ತು ಜುಲೈ 10 ರಂದು ಪ್ರಾರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com