ವಾರಪೂರ್ತಿ ಬೆಂಗಳೂರು ಲಾಕ್: ರಾಜ್ಯದ ತರಕಾರಿ ಬೆಳೆಗಾರರಿಗೆ ಶಾಕ್!

ಮಂಗಳವಾರ ರಾತ್ರಿಯಿಂದ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರಗಳ ಲಾಕ್ ಡೌನ್ ಜಾರಿಯಾಗುವ ಬಗ್ಗೆ ರಾಜ್ಯದ ರೈತರು ಆತಂಕಗೊಂಡಿದ್ದಾರೆ. ಅವರು ತಮ್ಮ ಉತ್ಪನ್ನಗಳನ್ನು ರಾಜಧಾನಿಗೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಮತ್ತು ಕರ್ನಾಟಕದಿಂದ ನೆರೆಯ ತಮಿಳುನಾಡು ಮತ್ತು ಕೇರಳಕ್ಕೆ ವಾಹನ ಸಂಚಾರ ನಿಷೇಧ ಅವರನ್ನು ಇನ್ನಷ್ಟು ಕಷ್ಟಕ್ಕೆ ತಳ್ಳಬಹುದು ಎಂದು ಅವರು ಭಾವಿಸಿದ್ದ
ವಾರಪೂರ್ತಿ ಬೆಂಗಳೂರು ಲಾಕ್: ರಾಜ್ಯದ ತರಕಾರಿ ಬೆಳೆಗಾರರಿಗೆ ಶಾಕ್!

ಮೈಸೂರು: ಮಂಗಳವಾರ ರಾತ್ರಿಯಿಂದ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರಗಳ ಲಾಕ್ ಡೌನ್ ಜಾರಿಯಾಗುವ ಬಗ್ಗೆ ರಾಜ್ಯದ ರೈತರು ಆತಂಕಗೊಂಡಿದ್ದಾರೆ. ಅವರು ತಮ್ಮ ಉತ್ಪನ್ನಗಳನ್ನು ರಾಜಧಾನಿಗೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಮತ್ತು ಕರ್ನಾಟಕದಿಂದ ನೆರೆಯ ತಮಿಳುನಾಡು ಮತ್ತು ಕೇರಳಕ್ಕೆ ವಾಹನ ಸಂಚಾರ ನಿಷೇಧ ಅವರನ್ನು ಇನ್ನಷ್ಟು ಕಷ್ಟಕ್ಕೆ ತಳ್ಳಬಹುದು ಎಂದು ಅವರು ಭಾವಿಸಿದ್ದಾರೆ.

ಬದನೆಕಾಯಿ, ಬೆಂಡೆಕಾಯಿ, ಕುಂಬಳಕಾಯಿ ಮತ್ತು ಸೌತೆಕಾಯಿಯಂತಹಾ ತರಕಾರಿ ಕೊಳ್ಳುವವರಿಲ್ಲಕಾರ್ಮಿಕ ವೆಚ್ಚವನ್ನು ಪೂರೈಸಲು ತಮ್ಮ ಜೇಬಿನ ಹಣ ವೆಚ್ಚಮಾಡಬೇಕು. ಹಾಗಾಗಿ ಈ ಬಾರಿ ಮೂಲಂಗಿ ಮತ್ತು ಬದನೆಕಾಯಿ ಕೊಯ್ಲು ಮಾಡದಿರಲು ತೀರ್ಮಾನಿಸಿದ್ದಾಗಿ  ರೈತ ಕುಮಾರ್ ಹೇಳಿದರು. "ನಾನು ಅರಿಶಿನದಲ್ಲಿ ನಷ್ಟವನ್ನು ಅನುಭವಿಸಿದೆ ಮತ್ತು ತರಕಾರಿಗಳನ್ನು ಸಾಲ ತೀರಿಸುವ ಉದ್ದೇಶದಿಂದಷ್ಟೇ ಬೆಳೆದೆ ಎಂದು ಅವರು ಹೇಳಿದ್ದಾರೆ.

ಮದುವೆಗಳು ಮತ್ತು ಶುಭಕಾರ್ಯಗಳ ಮೇಲಿನ ನಿರ್ಬಂಧದಿಂದ ಕೋವಿಡ್ ಪರಿಸ್ಥಿತಿ ಮತ್ತು ಬೇಡಿಕೆಯ ಕುಸಿತವು ನಗರಗಳಿಗೆ ಶಾಕ್ ನೀಡಿದೆ. ಈರುಳ್ಳಿ ಬೆಳೆಗಾರರು ಕೂಡ ಕೆಜಿಗೆ 5 ರಿಂದ 7 ರೂ.ಗೆ ಇಳಿದಿರುವ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. "ಬೆಳೆ ಕೊಯ್ಲು ಮಾಡಲು ಕಾರ್ಮಿಕರಿಗೆ ಪ್ರತಿ ಕೆ.ಜಿ.ಗೆ 4.50 ರೂ.ಗಳನ್ನು ಖರ್ಚುಮಾಡಬೇಕಿದೆ. ಆದರೆ  ರೈತನು ಬೆಳೆದ ಬೆಳೆಯನ್ನು  ಕೇವಲ 7 ರೂ.ಗೆಮಾರಾಟ ಮಾಡಿದರೆ ಹೇಗೆ ಬದುಕುಳಿಯುತ್ತಾನೆ?" ಎಂದು ರೈತ ನಾಗರಾಜಪ್ಪ ಪ್ರಶ್ನಿಸಿದ್ದಾರೆ.

ಮಾನ್ಸೂನ್ ಅವಧಿಯಲ್ಲಿ ಯಾವುದೇ ತರಕಾರಿ ಜೀವಿತಾವಧಿ ಕಡಿಮೆ ಇರುವ ಕಾರಣ ಮತ್ತಷ್ಟು ವಿಳಂಬ ಬೆಳೆ ನಷ್ಟಕ್ಕೆ ಕಾರಣವಾಗಲಿದೆ. ಆದುದರಿಂದ ಅವರು ತಕ್ಷಣ ಖರೀದಿದಾರರನ್ನು ಹುಡುಕಬೇಕಿದೆ. ಅದಾಗ್ಯೂ ಕೆಲವು ರೈತರು ತರಕಾರಿಗಳನ್ನು ಮಾರಾಟ ಮಾಡುವ ಇತರ ವಿಧಾನಗಳನ್ನು ಕಂಡುಕೊಂಡಿದ್ದು ರಸ್ತೆ ಬದಿ ಮಾರಾಟ ಮಾಡಲು ಅಲ್ಲದೆ ಮನೆ ಬಾಗಿಲಿಗೆ ತರಕಾರಿ ಮಾರಾಟ ಮಾಡಿದರೆ ನಷ್ಟವಾಗುತ್ತದೆ ಎನ್ನುತ್ತಾರೆ. ಮೋಹನ್ ಎಂಬ ರೈತ, ಹಾಸ್ಟೆಲ್‌ಗಳು, ಹೋಟೆಲ್‌ಗಳು ಮತ್ತು ಮೊಬೈಲ್ ಕ್ಯಾಂಟೀನ್‌ಗಳನ್ನು ಮುಚ್ಚಿದ್ದ ಕಾರಣ ಮನೆಗಳಿಗೆ ಮಾರದೆ ವಿಧಿಯಿಲ್ಲ ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com