ಸಿವಿಲ್ ಪೊಲೀಸ್ ವಾರ್ಡನ್ ಆಗಲು ಯುವಜನತೆಗೆ ಬೆಂಗಳೂರು ಪೊಲೀಸ್ ಆಯುಕ್ತರ ಆಹ್ವಾನ

ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರೊಂದಿಗೆ ಕೈ ಜೋಡಿಸುವಂತೆ ಯುವಜನತೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಹ್ವಾನ ನೀಡಿದ್ದಾರೆ.
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರೊಂದಿಗೆ ಕೈ ಜೋಡಿಸುವಂತೆ ಯುವಜನತೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಹ್ವಾನ ನೀಡಿದ್ದಾರೆ.

ಈ ಮಾತನಾಡಿದ ಭಾಸ್ಕರ್ ರಾವ್ ಅವರು, 'ಕೊರೋನಾ ಸೋಂಕಿನಿಂದಾಗಿ ಪೊಲೀಸ್ ಸಿಬ್ಬಂದಿಯ‌ ತಕ್ಕಮಟ್ಟಿನ ಕೊರತೆ ಎದುರಾಗಿದೆ. ಹೀಗಾಗಿ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕೆಲಸ ಮಾಡಲು ಯುವಜನತೆಗೆ ನಗರ ಪೊಲೀಸ್ ಆಯುಕ್ತರು ಆಹ್ವಾನ ನೀಡಿದ್ದಾರೆ. ನಗರದಲ್ಲಿ 164 ಪೊಲೀಸ್ ಠಾಣೆಗಳಿದ್ದು, ಪ್ರತಿ ಪೊಲೀಸ್ ಠಾಣೆ ಮಟ್ಟದಲ್ಲಿ 100 ಸಿವಿಲ್ ಪೊಲೀಸರಿಗೆ ನಿಯೋಜನೆಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಅಂತೆಯೇ ಇದೇ ವಿಚಾರವಾಗಿ ಮಂಗಳವಾರ ಟ್ವೀಟ್ ಮಾಡಿರುವ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ದೈಹಿಕವಾಗಿ ಸದೃಢವಾದ ಹಾಗೂ ಸೇವಾ ಮನೋಭಾವನೆಯುಳ್ಳ ಯುವಕ ಹಾಗೂ ಯುವತಿಯರಿಗೆ ಸಿವಿಲ್ ಪೊಲೀಸ್ ವಾರ್ಡನ್ ಆಗಲು ಮುಕ್ತ ಅವಕಾಶ ನೀಡಲಾಗುತ್ತಿದೆ. 18ರಿಂದ 45 ವರ್ಷದೊಳಗಿನ ವ್ಯಕ್ತಿಗಳು ವಾರ್ಡನ್ ಆಗಲು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಪೊಲೀಸ್ ಜೊತೆಯಲ್ಲಿ ಕೆಲಸ ಮಾಡಬೇಕು. ಸ್ವಯಂ ಸೇವಕರಾಗಲು ನೋಂದಣಿ ಮಾಡಿಕೊಳ್ಳಲು ಬೆಂಗಳೂರು ನಗರ ಪೊಲೀಸ್‌ ಇಲಾಖೆ ವೆಬ್‌ಸೈಟ್‌ http://bcp.gov.in ಭೇಟಿ ನೀಡುವಂತೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com