ಕೊರೋನಾದಿಂದ ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರ ನೇರವೇರಿಸಲು ಸಂಬಂಧಿಕರ ನಕಾರ: ಸಂಸ್ಕಾರ ನೆರವೇರಿಸಿದ ಎನ್ ಜಿ ಓ

65 ವರ್ಷದ ಅಲೆಕ್ಸಾಂಡರ್ ಶುಕ್ರವಾರ ಕೊರೋನಾದಿಂದ ಸಾವನ್ನಪ್ಪಿದ್ದರು, ಈ ವೇಳೆ ಅವರ ಅಂತ್ಯ ಸಂಸ್ಕಾರ ಮಾಡಲು ಅವರ ಸಂಬಂಧಿಕರು ಮತ್ತು ಕ್ರಿಶ್ಟಿಯನ್ನ ಸ್ಮಶಾನದ ಕೆಲಸಗಾರರು ಸಂಸ್ಕಾರ ಮಾಡಲು ನಿರಾಕರಿಸಿದರು. ಈ ವೇಳೆ ಮರ್ಸಿ ಏಂಜಲ್ಸ್ ಎಂಬ ಎನ್ ಜಿ ಒ ಶನಿವಾರ ಅಂತ್ಯಕ್ರಿಯೆ ನೆರವೇರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 65 ವರ್ಷದ ಅಲೆಕ್ಸಾಂಡರ್ ಶುಕ್ರವಾರ ಕೊರೋನಾದಿಂದ ಸಾವನ್ನಪ್ಪಿದ್ದರು, ಈ ವೇಳೆ ಅವರ ಅಂತ್ಯ ಸಂಸ್ಕಾರ ಮಾಡಲು ಅವರ ಸಂಬಂಧಿಕರು ಮತ್ತು ಕ್ರಿಶ್ಟಿಯನ್ನ ಸ್ಮಶಾನದ ಕೆಲಸಗಾರರು ಸಂಸ್ಕಾರ ಮಾಡಲು ನಿರಾಕರಿಸಿದರು. ಈ ವೇಳೆ ಮರ್ಸಿ ಏಂಜಲ್ಸ್ ಎಂಬ ಎನ್ ಜಿ ಒ ಶನಿವಾರ ಅಂತ್ಯಕ್ರಿಯೆ ನೆರವೇರಿಸಿದೆ.

ಕುಟುಂಬದ ದೂರದ ಸಂಬಂಧಿ ಜೆರ್ರಿ ಜಾಕಿನ್ ಎನ್‌ಜಿಒ ಮರ್ಸಿ ಮಿಷನ್‌ಗೆ ಹೊಂದಿಕೊಂಡ  ಘಟಕದ ಕೆಲಸದ ಬಗ್ಗೆ ತಿಳಿದಿದ್ದರು, ಹೀಗಾಗಿ ಅವರು ಎನ್ ಜಿ ಓಗೆ ವಿಷಯ ತಿಳಿಸಿದರು. ನಂತರ ಮರ್ಸಿ ಏಂಜಲ್ಸ್ ಅಂತ್ಯ ಸಂಸ್ಕಾರ ನೆರವೇರಿಸಿದರು.

ಮೈಸೂರು ರಸ್ತೆಯಲ್ಲಿರು ಕ್ರಿಶ್ಚಿಯನ್ ಸಮಾಧಿ ಸ್ಥಳಕ್ಕೆ ಇದೇ ಮೊದಲ ಕೋವಿಡ್ ಶವ ಆಗಗಮಿಸಿದ್ದು ಅದರ ಸಂಸ್ಕಾರ ಹೇಗೆ ನಡೆಸುವುದು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಅವರು ನಿರಾಕರಿಸಿದರು ಎಂದು ಮೃತನ ಸಂಬಂಧಿ ಜಾಕಿನ್ ತಿಳಿಸಿದ್ದಾರೆ.

ಎನ್ ಜಿ ಓ ಸ್ವಯಂ ಸೇವಕರು ಆಸ್ಪತ್ರೆಗೆ ಬಂದು ಶವವನ್ನು ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ದು, ಶವ ಸಂಸ್ಕಾರಕ್ಕೆ ನಿಗದಿಯಾಗಿದ್ದ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೇರವರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com