ಫಾವಿಪಿರವಿರ್-ಉಮಿಫೆನೋವಿರ್ ಆಂಟಿವೈರಲ್ ಔಷಧ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಯೋಗ

ಸದ್ಯದಲ್ಲಿಯೇ ವಿಕ್ಟೋರಿಯಾ ಆಸ್ಪತ್ರೆ ಕೋವಿಡ್-19 ರೋಗಿಗಳ ಮೇಲೆ ಎರಡು ಆಂಟಿವೈರಲ್ ಔಷಧಿಗಳನ್ನು ಪ್ರಯೋಗಿಸಿ ಪ್ರಾಯೋಗಿಕ ಪರೀಕ್ಷೆ ಆರಂಭಿಸಲಿದೆ.
ಪಿಪಿಇ ಕಿಟ್ ನೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರಬರುತ್ತಿರುವ ವೈದ್ಯರು
ಪಿಪಿಇ ಕಿಟ್ ನೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರಬರುತ್ತಿರುವ ವೈದ್ಯರು

ಬೆಂಗಳೂರು: ಸದ್ಯದಲ್ಲಿಯೇ ವಿಕ್ಟೋರಿಯಾ ಆಸ್ಪತ್ರೆ ಕೋವಿಡ್-19 ರೋಗಿಗಳ ಮೇಲೆ ಎರಡು ಆಂಟಿವೈರಲ್ ಔಷಧಿಗಳನ್ನು ಪ್ರಯೋಗಿಸಿ ಪ್ರಾಯೋಗಿಕ ಪರೀಕ್ಷೆ ಆರಂಭಿಸಲಿದೆ.

ಜಾಗತಿಕ ಮಟ್ಟದ ಸಂಶೋಧನಾ ಕಂಪೆನಿ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್, ಫಾವಿಪಿರವಿರ್ ಮತ್ತು ಉಮಿಫೆನೋವಿರ್ ಎಂಬ ಎರಡು ಆಂಟಿವೈರಲ್ ಡ್ರಗ್ ಗಳನ್ನು ಸೇರಿಸಿ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದೆ. ಭಾರತದಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೋನಾ ಸೋಂಕಿತ ಮಧ್ಯಮ ಪ್ರಮಾಣದ ಜ್ವರ, ಸೋಂಕನ್ನು ಹೊಂದಿರುವವರ ಮೇಲೆ ಪ್ರಯೋಗ ನಡೆಯಲಿದೆ.ಫೈತ್ ಪ್ರಯೋಗ ಎಂದು ಈ ಪ್ರಾಯೋಗಿಕ ಪರೀಕ್ಷೆಗೆ ಹೆಸರಿಡಲಾಗಿದ್ದು 158 ಮಂದಿ ಆಸ್ಪತ್ರೆಗಳಲ್ಲಿರುವ ರೋಗಿಗಳ ಮೇಲೆ ಪ್ರಯೋಗ ನಡೆಯಲಿದೆ.

ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಯಲಿದೆ. ಫಾವಿಪಿರವಿರ್ ಮತ್ತು ಉಮಿಫೆನೋವಿರ್ ಗಳ ಸಂಯೋಜನೆಯಿಂದ ಸಾರ್ಸ್-ಕೊವಿ-2 ವೈರಸ್ ಮೇಲೆ ಈ ಆಂಟಿವೈರಲ್ ಔಷಧಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪರೀಕ್ಷೆ ನಡೆಯಲಿದೆ. ಇವೆರಡೂ ಡ್ರಗ್ ಗಳು ಪ್ರಾಥಮಿಕ ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ರೋಗಿಗಳ ಒಪ್ಪಿಗೆ ಪಡೆದು ತನಿಖೆ ನಡೆದ ನಂತರವಷ್ಟೇ ಪ್ರಯೋಗ ನಡೆಯಲಿದೆ ಎಂದು ಗ್ಲೆನ್ ಮಾರ್ಕ್ ಕಂಪೆನಿಯ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com